ಶಿವಮೊಗ್ಗ ಲೈವ್.ಕಾಂ | BHADRAVATHI NEWS | 26 ನವೆಂಬರ್ 2021
ನಕಲಿ ನೋಟು ಜಾಲವೊಂದನ್ನು ಭದ್ರಾವತಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ನೋಟು ಪ್ರಿಂಟ್ ಮಾಡಲು ಬಳಕೆ ಮಾಡಿದ್ದ ಪ್ರಿಂಟಿಂಗ್ ಮೆಷನ್ ಒಂದನ್ನು ವಶಕ್ಕೆ ಪಡೆಯಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತರೀಕೆರೆಯ ಅರುಣ್ ಕುಮಾರ್ (23) ಮತ್ತು ಶಿವಮೊಗ್ಗದ ಹರಿಗೆಯ ಪ್ರೇಮ್ ರಾಜ್ (23) ಬಂಧಿತರು.
ರಂಗಪ್ಪ ಸರ್ಕಲ್ ಬಳಿ ನಕಲಿ ನೋಟುಗಳ ಚಲಾವಣೆ ಮಾಡಲು ಮುಂದಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 182 ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ನೋಟು ಪ್ರಿಂಟ್ ಮಾಡಲು ಬಳಕೆ ಮಾಡುತ್ತಿದ್ದ ಪ್ರಿಂಟಿಂಗ್ ಮೆಷಿನ್ ಒಂದನ್ನು ವಶಕ್ಕೆ ಪಡೆಯಲಾಗಿದೆ.
ಹಳೆ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.