ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 DECEMBER 2022
ಶಿವಮೊಗ್ಗ : ವಿದೇಶದಿಂದ ಅಡಕೆ ಆಮದು ನಿಲ್ಲಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಉಪವಾಸ ಸತ್ಯಾಗ್ರಹ (upavasa sathyagraha) ನಡೆಸಲಾಗುತ್ತಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ನೇತ್ರಾವತಿ ಅವರ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಎಎಪಿ ಕಾರ್ಯಕರ್ತರು, ಬಳಿಕ ಉಪವಾಸ ಸತ್ಯಾಗ್ರಹ (upavasa sathyagraha) ಆರಂಭಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಿದೇಶಿ ಲಾಬಿಗೆ ಮಣಿದು ಭೂತಾನ್, ಬರ್ಮಾ ದೇಶಗಳಿಂದ ಕೇಂದ್ರ ಸರ್ಕಾರ 17 ಸಾವಿರ ಮೆಟ್ರಿಕ್ ಟನ್ ಅಡಕೆ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಪ್ರತಿ ಕ್ವಿಂಟಾಲ್ ಅಡಕೆ ದರ ಕುಸಿತ ಕಂಡಿದೆ. ಈಗಾಗಲೆ ಕೊಳೆ ರೋಗ, ಎಲೆ ಚುಕ್ಕಿ ರೋಗದಿಂದ ನಲುಗಿರುವ ರೈತರಿಗೆ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದಾರೆ ಎಂದರು ಆರೋಪಿಸಿದರು.
ಇದನ್ನೂ ಓದಿ – ಅಡಕೆ ರೇಟ್ ಕುಸಿಯಲು 3 ಕಾರಣ ಪಟ್ಟಿ ಮಾಡಿದ ಕಾಂಗ್ರೆಸ್, ಏನದು ಕಾರಣ?
ಅಡಕೆ ಬೆಳೆಗಾರರ ಹಿತ ಕಾಯಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಅಡಕೆ ಕಾರ್ಯಪಡೆ ರಚಿಸಲಾಗಿದೆ. ಆದರೆ ಈ ಕಾರ್ಯಪಡೆ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಭರವಸೆ ನೀಡುವವರೆಗೆ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಎಪಿ ಕಾರ್ಯಕರ್ತರು ತಿಳಿಸಿದರು.
ಇದನ್ನೂ ಓದಿ – ಅಡಕೆ ಸಾಗಣೆಗೆ 6 ಗೈಡ್ ಲೈನ್ ಪ್ರಕಟಿಸಿದ ಶಿವಮೊಗ್ಗ ಪೊಲೀಸ್, ಏನದು? ಕಾರಣವೇನು?
ಎಎಪಿ ನಾಯಕಿ ನೇತ್ರಾವತಿ, ರವಿಕುಮಾರ್, ಸುರೇಶ್ ಕೋಟೆಕಾರ್, ಸ್ವೀನ್, ಹರೀಶ್, ಪ್ರದೀಪ್ ಸೇರಿದಂತೆ ಹಲವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.