ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020
ಕೋರ್ಟ್’ನಲ್ಲಿ ಸಾಕ್ಷಿ ಹೇಳಲು ಬಂದು ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ವಕೀಲರಿಗೆ ‘ನೀವು ಪಾಕಿಸ್ತಾನದವರು’ ಎಂದು ಆರೋಪಿಸಿ, ಜೈಲು ಸೇರಿದ್ದಾನೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಇವತ್ತು ಮಧ್ಯಾಹ್ನ ಘಟನೆ ನಡೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ 3ನೇ JMFC ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿ ಹೇಳಲು ಬಂದಿದ್ದ ಶಿವಮೊಗ್ಗದ ಸಿದ್ಲಿಪುರದ ಶಂಕರ್ ಎಂಬಾತನನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ವಕೀಲ ನಯಾಜ್ ಅಹಮ್ಮದ್ ಅವರು ಪ್ರಕರಣ ಸಂಬಂಧ ಪ್ರಶ್ನೆ ಕೇಳಲು ಆರಂಭಿಸಿದರು. ಈ ವೇಳೆ ಶಂಕರ್, ವಕೀಲ ನಯಾಜ್ ಅಹಮ್ಮದ್ ಅವರಿಗೆ, ನೀವು ಪಾಕಿಸ್ತಾನದವರು ಎಂದಿದ್ದಾನೆ.
ಶಂಕರ್ ಹೀಗೆ ಹೇಳುತ್ತಿದ್ದಂತೆ ಕೋರ್ಟ್ ಕಲಾಪ ನಿಲ್ಲಿಸಿದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್, ಕಲಾಪದ ವೇಳೆ ಅನುಚಿತ ವರ್ತನೆ ಮತ್ತು ಕಾರ್ಯಕಲಾಪಕ್ಕೆ ಅಡ್ಡಿ ಉಂಟು ಮಾಡಿದ ಆರೋಪದ ಹಿನ್ನೆಲೆ ಒಂದು ದಿನ ಜೈಲು ಶಿಕ್ಷೆ ವಿಧಿಸಿದರು.
ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ನಯಾಜ್ ಅಹಮ್ಮದ್, ಶಂಕರ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡುತ್ತೇನೆ. ಈ ಸಂಬಂಧ ವಕೀಲರ ಸಂಘದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಇದು ನಮ್ಮ ವೃತ್ತಿಗೆ ತಂದ ಅಗೌರವ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]