GOOD NEWS | ಮನೆ ಮನೆಗೂ ಔಷಧೀಯ ಸಸ್ಯ, ಶಿವಮೊಗ್ಗದಲ್ಲಿ ಮಹಿಳೆಯರ ವಿಭಿನ್ನ ಅಭಿಯಾನ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 DECEMBER 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕರೋನ ಮಹಾಮಾರಿ ಜನರ ಚಿತ್ತವನ್ನು ಹೆಚ್ಚಾಗಿ ಆಯುರ್ವೇದದತ್ತ ಹೊರಳಿಸಿದೆ. ಹಾಗಾಗಿ ಜನರಲ್ಲಿ ಸಸ್ಯಗಳ ಕುರಿತು ಜಾಗೃತಿ ಮೂಡಿಸಿ, ಅವುಗಳ ಔಷಧೀಯ ಗುಣಗಳನ್ನು ಪರಿಚಯಿಸುವ ಸಲುವಾಗಿ ಶಿವಮೊಗ್ಗದ ಟ್ರಸ್ಟ್ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿದೆ.

ವಿಡಿಯೋಗಾಗಿ ಕ್ಲಿಕ್ ಮಾಡಿ | ಈಗ ಬಟ್ಟೆ ಒಗೆಯುವುದು ಇನ್ನೂ ಸುಲಭ, ಬಂದಿದೆ ಪೋರ್ಟೆಬಲ್ ವಾಷಿಂಗ್ ಮಿಷಿನ್, ಹೇಗಿದೆ ಗೊತ್ತಾ? ಶಿವಮೊಗ್ಗದಲ್ಲಿ ಎಲ್ಲಿ ಸಿಗುತ್ತೆ?

ಅನಿಕೇತನ ಟ್ರಸ್ಟ್ ಶಿವಮೊಗ್ಗದ ಹಲವು ಮನೆಗಳಿಗೆ ಆಯುರ್ವೇದ ಸಸ್ಯಗಳನ್ನು ವಿತರಿಸುವ ಕಾರ್ಯಕ್ಕೆ ಕೈ ಹಾಕಿದೆ. ಮೊದಲ ಹಂತದಲ್ಲಿ ತುಳಸಿ ಗಿಡಗಳನ್ನು ವಿತರಿಸಲಾಗಿದೆ. ಅಷ್ಟೆ ಅಲ್ಲ, ತುಳಸಿಯ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಕೊಟ್ಟಿದೆ.

131335867 1290693547958729 4855150580463452304 n.jpg? nc cat=110&ccb=2& nc sid=8bfeb9& nc ohc=sCIVXE32GDsAX9m2hoA& nc ht=scontent.fblr1 5

ಮನೆಗಳು, ಆಟೋ ಚಾಲಕರಿಗೆ ಸಸಿ

131594307 1290946111266806 5348582888317608805 n.jpg? nc cat=103&ccb=2& nc sid=730e14& nc ohc=7kF8YGp9mJMAX8XTlp3& nc ht=scontent.fblr1 5ಮೊದಲ ಹಂತದಲ್ಲಿ ಅನಿಕೇತನ ಟ್ರಸ್ಟ್ ವತಿಯಿಂದ ವಿನೋಬನಗರ ನೂರು ಅಡಿ ರಸ್ತೆಯಲ್ಲಿನ ಕೆಲವು ಮನೆಗಳು, ಆಟೋ ಚಾಲಕರಿಗೆ ತುಳಸಿ ಗಿಡಗಳನ್ನು ನೀಡಲಾಗಿದೆ. ತುಳಸಿಯನ್ನು ಬೆಳಸಿ, ಬಳಸುವ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ನಾಗವೇಣಿ ನಾಗರಾಜ್ ತಿಳಿಸಿದ್ದಾರೆ.

ಇದು ಮೊದಲ ಹಂತ

ಮೊದಲ ಹಂತದಲ್ಲಿ ಕೆಲವು ತುಳಸಿ ಗಿಡಗಳನ್ನು ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಔಷಧೀಯ ಸಸ್ಯಗಳನ್ನು ಜನರಿಗೆ ಕೊಡಲು ಯೋಜಿಸಲಾಗಿದೆ. ಸಸ್ಯಗಳನ್ನು ಕೊಡುವ ಸಂದರ್ಭದಲ್ಲಿ, ಅದರ ಔಷಧೀಯ ಗುಣದ ಕುರಿತು ಜನರಿಗೆ ತಿಳಿಸಲಾಗುತ್ತದೆ. ಇದರಿಂದ ಜನರು ಕೂಡ ಸಸ್ಯಗಳ ಕುರಿತು ತಿಳಿಯಲು ಅವಕಾಶವಾಗಲಿದೆ ಅನ್ನುವುದು ಅನಿಕೇತನ ಟ್ರಸ್ಟ್‌ ಉದ್ದೇಶ.

ಸಸ್ಯಗಳು, ಅವುಗಳ ಔಷಧೀಯ ಗುಣಗಳ ಕುರಿತು ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿರುವ ಅನಿಕೇತನ ಟ್ರಸ್ಟ್‌ ಮಹಿಳೆಯರ ಕೆಲಸ ಮೆಚ್ಚುಗೆ ಗಳಿಸಿದೆ. ಇದು ಮತ್ತಷ್ಟು ಜನರಿಗೆ ಪ್ರೇರಣೆ ಆಗಬೇಕಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment