ಶಿವಮೊಗ್ಗ ಲೈವ್.ಕಾಂ | SHIMOGA NEWS | 09 JUNE 2021
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಅಬ್ಬರ ತಗ್ಗುತ್ತಿದೆ. ಗ್ರಾಮೀಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಹರಡಿದ್ದ ಸೋಂಕು ಈಗ ಕಂಟ್ರೋಲ್ಗೆ ಬರುತ್ತಿದೆ. ಐದು ಗ್ರಾಮ ಪಂಚಾಯಿತಿಗಳು ಕರೋನ ಮುಕ್ತವಾಗಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಯಲ್ಲಿ 271 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ ಐದು ಗ್ರಾಮ ಪಂಚಾಯಿತಿಗಳು ಸಂಪೂರ್ಣ ಕರೋನ ಮುಕ್ತವಾಗಿವೆ.
ಯಾವ್ಯಾವ ಗ್ರಾ.ಪಂ ಕರೋನ ಮುಕ್ತ?
ತೀರ್ಥಹಳ್ಳಿ ತಾಲೂಕು ಬಿದರಗೋಡು, ಅರಳಸುರಳಿ, ಹೊಸನಗರ ತಾಲೂಕು ಪುರಪ್ಪೇಮನೆ, ಯಡೂರು, ರಾಮಚಂದ್ರಾಪುರ ಗ್ರಾಮ ಪಂಚಾಯಿತಿಗಳು ಸದ್ಯ ಕರೋನ ಮುಕ್ತವಾಗಿವೆ. ಇಲ್ಲಿ ಸಕ್ರಿಯ ಪ್ರಕರಣಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನಷ್ಟು ಗ್ರಾಮಗಳು ಈ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ.
51 ಗ್ರಾ.ಪಂಗಳಲ್ಲಿ 20ಕ್ಕಿಂತಲೂ ಕಡಿಮೆ
ಜೂನ್ 6ರ ವರದಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ 51 ಗ್ರಾಮ ಪಂಚಾಯಿತಿಗಳಲ್ಲಿ 20ಕ್ಕಿಂತಲೂ ಕಡಿಮೆ ಪ್ರಕರಣಗಳಿವೆ. ಈ ಪೈಕಿ ಭದ್ರಾವತಿ ತಾಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ 20ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಹೊಸನಗರದ 3, ಸಾಗರದ 2, ಶಿಕಾರಿಪುರದ 10, ಶಿವಮೊಗ್ಗದ 14, ಸೊರಬದ 6, ತೀರ್ಥಹಳ್ಳಿಯ 6 ಗ್ರಾಮ ಪಂಚಾಯಿತಿಗಳಲ್ಲಿ ಇಪ್ಪತ್ತಕ್ಕಿಂತಲೂ ಕಡಿಮೆ ಪ್ರಕರಣಗಳಿವೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]