ಶಿವಮೊಗ್ಗದಲ್ಲಿ ಮಗುವಿನ ಶೂ ಒಳಗಿತ್ತು ಮೂರಡಿ ಉದ್ದದ ಹಾವು..!

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜನವರಿ 2022 ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಮನೆ ಹೊರಗೆ ಇಟ್ಟಿದ್ದ ಮಗುವಿನ ಶೂ ಒಳಗೆ ಹಾವು ಸೇರಿಕೊಂಡಿತ್ತು. ಇದನ್ನು ಕಂಡು ಕುಟುಂಬದವರು ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಹಾವನ್ನ ರಕ್ಷಣೆ ಮಾಡಿದ್ದಾರೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪ ಮುಖ್ಯರಸ್ತೆಯಲ್ಲಿರುವ ಮಂಜಪ್ಪ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.

ಮಗುವಿನ ಶೂ ಒಳಗೆ ಹಾವು

ಮಂಜಪ್ಪ ಅವರ ಮೊಮ್ಮಗ ಸಮ್ಮಿತ್’ನ ಶೂಗಳನ್ನು ಹೊರಗೆ ಬಿಡಲಾಗಿತ್ತು. ನೀರಿನ ಮೀಟರ್’ಗೆ ಅಳವಡಿಸಿರುವ ಕವರ್’ನ ಒಳಗೆ ಶೂಗಳನ್ನು ಹಾಕಲಾಗಿತ್ತು. ಇವತ್ತು ಸಂಜೆ ಗಮನಿಸಿದಾಗ ಮಗುವಿನ ಶೂ ಒಳಗೆ ಹಾವು ಸೇರಿರುವುದು ಗೊತ್ತಾಗಿದೆ. ಇದರಿಂದ ಕುಟುಂಬದವರಿಗೆ ಆತಂಕ ಉಂಟಾಗಿದೆ.

ಕೂಡಲೆ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಮಗುವಿನ ಶೂ ಒಳಗೆ ಸೇರಿದ್ದ ಹಾವನ್ನು ರಕ್ಷಣೆ ಮಾಡಿದ್ದಾರೆ. ಮೂರು ಅಡಿ ಉದ್ದ ಕೇರೆ ಹಾವು ಮಗುವಿನ ಶೂ ಒಳಗೆ ಸೇರಿಕೊಂಡಿತ್ತು.

ಹಾವು ರಕ್ಷಣೆ ಮಾಡಿದ ಸ್ನೇಕ್ ಕಿರಣ್ ಅವರು ಕುಟುಂಬದವರು, ನೆರೆಹೊರೆಯವರಿಗೆ ಹಾವುಗಳ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ | ಮಿಕ್ಸಿಯೊಳಗೆ ಸೇರಿಕೊಂಡಿತ್ತು ನಾಲ್ಕೂವರೆ ಅಡಿ ಉದ್ದದ ಹಾವು

ಇದನ್ನೂ ಓದಿ | ಮನೆ ಶೌಚಾಲಯದಲ್ಲಿ ಹೆಡೆ ಎತ್ತಿ ನಿಂತ ನಾಗರ ಹಾವು, ಸೆರೆ ಹಿಡಿದ ಮೇಲೆ ಮಂಗಳಾರತಿ, ಪೂಜೆ

ABOUT ME DECEMBER REPORT

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಹೆಂಡತಿಗೆ ಕಿರುಕುಳ, ಗಂಡನಿಗೆ ಜೈಲು ಶಿಕ್ಷೆ, ದಂಡ