ಹಿಜಾಬ್, ಬುರ್ಖಾ ನಿರ್ಬಂಧಕ್ಕೆ ಶಿವಮೊಗ್ಗದಲ್ಲಿ ಆಕ್ರೋಶ

Published On : ಫೆಬ್ರವರಿ 7, 2022

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಫೆಬ್ರವರಿ 2022

ಶಾಲಾ, ಕಾಲೇಜಗಳಲ್ಲಿ ಹಿಜಾಬ್, ಬುರ್ಖಾಗೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಶಿವಮೊಗ್ಗ ಮಹಿಳಾ ಒಕ್ಕೂಟದ ವತಿಯಿಂದ ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Covid Care Center in Shimoga Nanjappa Hospital

ನೂರಾರು ಮಹಿಳೆಯರು ಬುರ್ಖಾ ಧರಿಸಿಕೊಂಡು, ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು.

ಮಹಿಳೆಯರ ಬೇಡಿಕೆ ಏನು?

ಧಾರ್ಮಿಕ ಸ್ವಾತಂತ್ರ್ಯ ಧಮನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಹಿಜಾಬ್ ಧರಿಸಲು ಸರ್ಕಾರ ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸಬೇಕು.

ಕೇವಲ ರಾಜಕೀಯ ಮತ್ತು ಕೆಲವೊಂದು ಕೋಮುವಾದ ಸಂಘಟನೆಗಳ ಪಿತೂರಿಯಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಈ ರೀತಿ ಗುರುತರ ಆರೋಪ ಮಾಡಲಾಗುತ್ತಿದೆ. ಅವರ ವಿದ್ಯಾಭ್ಯಾಸದ ಮೇಲೆ ಮತ್ತು ಅವರ ಪೋಷಕರ ಮೇಲೆ ಹೆಚ್ಚಿನ ಒತ್ತಡ ಬೀಳುವ ಮೂಲಕ ಮುಂದಿನ ಶೈಕ್ಷಣಿಕ ಜೀವನವು ಮೊಟಕುಗೊಳ್ಳುತ್ತದೆ.

ರಾಜ್ಯ ಸರ್ಕಾರದ ವಸ್ತ್ರಸಂಹಿತೆ ಆದೇಶದಲ್ಲಿ ಕೆಲವು ಮಾರ್ಪಾಡು ಮಾಡಬೇಕು. ಈ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಖಾವನ್ನು ಧರಿಸಿಕೊಂಡು ಬರಲು ಅನುಮತಿ ನೀಡಬೇಕು.

ಇದನ್ನೂ ಓದಿ | ಸಹ್ಯಾದ್ರಿ ಕಾಲೇಜು ಕ್ಯಾಂಪಸ್’ನಲ್ಲೂ ಹಿಜಾಬ್, ಕೇಸರಿ ಶಾಲು ಸಂಘರ್ಷ

ಇದನ್ನೂ ಓದಿ | ತೀರ್ಥಹಳ್ಳಿಯಲ್ಲೂ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರಾಕರಣೆ

ಇದನ್ನೂ ಓದಿ | ಶಿವಮೊಗ್ಗದ ಮತ್ತೊಂದು ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ, ಬಿಗುವಿನ ವಾತಾವರಣ

ಇದನ್ನೂ ಓದಿ | ‘ಹಿಜಾಬ್, ಕೇಸರಿ ಶಾಲು ಧರಿಸಿ ಬಂದರೆ ಸಹ್ಯಾದ್ರಿ ಕಾಲೇಜಿನಲ್ಲಿ ತರಗತಿಗೆ ಪ್ರವೇಶವಿಲ್ಲ’

Shimoga Live New Reach

About Shivamogga LiveShimoga District Profile | Shivamogga Live Whatsapp 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 7, 2022

Leave a Comment