ರಾತ್ರಿ ಶಿವಮೊಗ್ಗ ಬಸ್‌ ನಿಲ್ದಾಣಕ್ಕೆ ಬಂದ ತೀರ್ಥಹಳ್ಳಿ ವ್ಯಕ್ತಿ ಕೆಲ ಕ್ಷಣ ತಬ್ಬಿಬ್ಬು, ಕಾರಣವೇನು?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ (Honda Dio) ಕಳ್ಳತನವಾದೆ. ತೀರ್ಥಹಳ್ಳಿ ತಾಲೂಕಿನ ಶೇಡ್ಗಾರು ನಿವಾಸಿ ಸಂದೀಪ್ ಕೆ.ಎಸ್. ಎಂಬುವವರು ತಮ್ಮ ಹೊಂಡಾ ಡಿಯೋ ಬೈಕ್ ಕಳೆದುಕೊಂಡಿದ್ದಾರೆ.

ಸಂದೀಪ್ ಅವರು ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಬಂದು, ತಮ್ಮ ಬೈಕನ್ನು ಖಾಸಗಿ ಬಸ್ ನಿಲ್ದಾಣದ ಶೌಚಾಲಯದ ಹಿಂಭಾಗದಲ್ಲಿ ನಿಲ್ಲಿಸಿ ತೀರ್ಥಹಳ್ಳಿಗೆ ಹೋಗಿದ್ದರು. ರಾತ್ರಿ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಬೈಕ್‌ನ ಅಂದಾಜು ಮೌಲ್ಯ ₹15,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga-Private-Bus-Stand-Board

ಇದನ್ನೂ ಓದಿ : ಶಿವಮೊಗ್ಗ KSRTC ನಿಲ್ದಾಣದಲ್ಲಿ ಡ್ರೈವರ್‌ಗೆ ಚಪ್ಪಲಿಯಿಂದ ಹೊಡೆದು ಎದೆಗೆ ಗುದ್ದಿದ ಮಹಿಳೆ

ಹೆಚ್ಚಿನ Shimoga News, Shivamogga News ಮತ್ತು CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment