ಸೇತುವೆ ಕಟ್ಟೆಗೆ ಲಾರಿ ಡಿಕ್ಕಿ, ಹಿಂಬದಿ ಇದ್ದ ಅಕೇಶಿಯಾ ಪೋಲ್ಸ್ ಬಿದ್ದು ವೈದ್ಯ ಸೇರಿ ಇಬ್ಬರಿಗೆ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 ಮಾರ್ಚ್ 2022

ಲಾರಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಹಿಂಬದಿಯಲ್ಲಿದ್ದ ಅಕೇಶಿಯಾ ಪೋಲ್’ಗಳು ಬಿದ್ದು ಆಯುರ್ವೇದ ವೈದ್ಯ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

Shimoga Nanjappa Hospital Cancer Care

ಸಾಗರ ತಾಲೂಕು ಹರುಡಿಕೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರಿಗೆ ಬಲಗೈ ಮೂಳೆ ಮುರಿದಿದೆ. ವೈದ್ಯರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಗಣೇಶ್ ಎಂಬುವವರ ಹೊಟ್ಟೆ, ಸೊಂಟಕ್ಕೆ ಗಾಯವಾಗಿದೆ.

ಹೇಗಾಯ್ತು ಘಟನೆ?

ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರು ಸಾಗರದಿಂದ ಹೆಗ್ಗೋಡಿಗೆ ತೆರಳುತ್ತಿದ್ದರು. ತಮ್ಮೊಂದಿಗೆ ಬೈಕಿನಲ್ಲಿ ಗಣೇಶ್ ಎಂಬುವವರನ್ನು ಕರೆದೊಯ್ಯುತ್ತಿದ್ದರು.

ಹರುಡಿಕೆ ಗ್ರಾಮದ ಬಳಿಕ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿಯ ಸೇತುವೆಯ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿದ್ದ ಅಕೇಶಿಯಾ ಪೋಲ್ಸ್’ಗಳು ವೈದ್ಯರು ಮತ್ತು ಅವರ ಸ್ನೇಹಿತನ ಮೇಲೆ ಬಿದ್ದಿವೆ.

ಘಟನೆಯಲ್ಲಿ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರ ಬಲಗೈ ಮೂಳೆ ಮುರಿದಿದೆ. ಎಡಗೈ, ತಲೆಯ ಹಲವು ಕಡೆ ಗಾಯವಾಗಿದೆ. ಗಣೇಶ್ ಅವರಿಗೆ ಹೊಟ್ಟೆ, ಸೊಂಟ ಸೇರಿದಂತೆ ಹಲವು ಕಡೆ ಗಾಯವಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕಣದಲ್ಲಿ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ

Shimoga Live Country Wise reach

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment