ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳರ ಹಾವಳಿ, ಕೆಲವೆ ನಿಮಿಷದಲ್ಲಿ ಯುವತಿ ಬ್ಯಾಗ್ ನಾಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 ಮಾರ್ಚ್ 2022

ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳರ ಹಾವಳಿ ಮುಂದುವರೆದಿದೆ. ಮೈಸೂರಿಗೆ ತೆರಳಲು ಬಸ್ ಹತ್ತಿದ್ದ ಯುವತಿಯೊಬ್ಬರ ಲ್ಯಾಪ್ ಟಾಪ್ ಬ್ಯಾಗ್ ಕಳವು ಮಾಡಲಾಗಿದೆ.

shivamogga live 192 pixel 1

ಖಾಸಗಿ ಕಂಪನಿ ಉದ್ಯೋಗಿ ಅನುಶ್ರೀ ಎಂಬುವವರು ಮೈಸೂರಿಗೆ ತೆರಳಲು ಬಸ್ ಹತ್ತಿದ್ದರು. ಲಗೇಜ್ ಬ್ಯಾಗ್ ಮತ್ತು ಲ್ಯಾಪ್ ಟಾಪ್ ಬ್ಯಾಗನ್ನು ಸೀಟಿನಲ್ಲಿ ಇರಿಸಿದ್ದರು. ಕಂಡಕ್ಟರ್’ಗೆ ತಿಳಿಸಿ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಲ್ಯಾಪ್ ಟಾಪ್ ಬ್ಯಾಗ್ ನಾಪ್ತೆಯಾಗಿತ್ತು.

ಲ್ಯಾಪ್ ಟಾಪ್ ಬ್ಯಾಗಿನಲ್ಲಿ ಒಂದು ಲ್ಯಾಪ್ ಟಾಪ್, ಮೌಸ್, 2500 ರೂ. ನಗದು, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಇತರೆ ದಾಖಲೆಗಳಿದ್ದ ಪರ್ಸ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕರ್ನಾಟಕ ಸಂಘ ಬಳಿ ಬ್ರಾಂಚ್ ಮ್ಯಾನೇಜರ್ ಬ್ಯಾಗ್ ಲಪಟಾಯಿಸಿದ ಕಳ್ಳರು

Shimoga Nanjappa Hospital Test List

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment