ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
[su_highlight background=”#d70000″ color=”#ffffff”]SHIVAMOGGA LIVE NEWS[/su_highlight]
ಶಿವಮೊಗ್ಗ | ನಗರದಲ್ಲಿ ನಡೆದ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾದಲ್ಲಿ (JAATHA) ಸ್ವಯಂ ಸೇವಕರು, ಕಾರ್ಯಕ್ರಮ ಆಯೋಜಕರ ನಡೆ ಜನ ಮೆಚ್ಚುಗೆ ಪಡೆಯಿತು. ಜಾಥಾದಲ್ಲಿ ಪಾಲ್ಗೊಂಡವರ ರಕ್ಷಣೆ, ಸ್ವಚ್ಛೆತಾ ಕಾರ್ಯ ಗಮನ ಸೆಳೆಯಿತು.

ಶಿವಮೊಗ್ಗ ಮೆಡಿಕಲ್ ಕಾಲೇಜು ಮುಂಭಾಗ ಜಾಥಾಗೆ ಚಾಲನೆ ನೀಡಲಾಯಿತು. ಅಲ್ಲಿಂದಲೂ ಸ್ವಯಂ ಸೇವಕರೆ ಭದ್ರತೆ ಮತ್ತು ಸ್ವಚ್ಛತೆಯ ಉಸ್ತುವಾರಿ ವಹಿಸಿಕೊಂಡಿದ್ದರು.
ದಾರಿ ಉದ್ದಕ್ಕೂ ಕ್ಲೀನ್ ಕ್ಲೀನ್
ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನೀರು ಕುಡಿದು ಬಾಟಲಿಗಳನ್ನು ಕಳಗೆ ಬಿಸಾಡಿದಾಗ ಅವುಗಳನ್ನು ಸ್ವಯಂ ಸೇವಕರೆ ಆಯ್ದುಕೊಂಡು, ಕಸದ ಬುಟ್ಟಿಗೆ ಹಾಕಿಕೊಂಡು ಹೋಗುತ್ತಿದ್ದರು. ಜಾಥಾ ಮತ್ತು ಭಾಷಣ ಮುಗಿಯುವ ತನಕ ಸ್ವಯಂ ಸೇವಕರು ನೀರಿನ ಬಾಟಲಿಗಳನ್ನು ಆಯುವುದು ಕಂಡು ಬಂತು.
ಇನ್ನು, ಸೈನ್ಸ್ ಮೈದಾನದ ಮುಂಭಾಗ ರಸ್ತೆಯಲ್ಲಿ ಸಭೆ ವೇಳೆ ಎಲ್ಲರಿಗೂ ಚಾಕ್ಲೇಟ್ ವಿತರಣೆ ಮಾಡಲಾಯಿತು. ಚಾಕ್ಲೇಟ್ ಕವರ್’ಗಳನ್ನು ಜನರು ಕೆಳಗೆ ಬಿಸಾಡಿದರೆ ಸ್ವಯಂ ಸೇವಕರು ಆವುಗಳನ್ನು ಆಯ್ದುಕೊಂಡು ತಾವೇ ತಂದಿದ್ದ ಕಸದ ಬುಟ್ಟಿಗೆ ಹಾಕಿಕೊಂಡು ಹೋಗುತ್ತಿದ್ದರು.
ಸ್ವಯಂ ಸೇವಕರಿಂದ ರಕ್ಷಣೆ
ಜಾಥಾಗೆ ಪೊಲೀಸ್ ಇಲಾಖೆ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೂ ಮೆರವಣಿಗೆ ಹಾದಿ ಉದ್ದಕ್ಕೂ ಸ್ವಯಂ ಸೇವಕರು ಕೈ ಕೈ ಹಿಡಿದು, ಚೈನ್ ಲಿಂಕ್ ಮಾಡಿಕೊಂಡು ಸಾಗಿದರು. ಹಾಗಾಗಿ ಧರ್ಮಗುರುಗಳು, ಗಣ್ಯರು ಸರಾಗವಾಗಿ ಜಾಥಾದಲ್ಲಿ ಪಾಲ್ಗೊಳ್ಳಲು ಅನುಕೂಲವಾಯಿತು.

ರಸ್ತೆ ಮೇಲೆ ಕುಳಿತ ಆಯೋಜಕರು
‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾಗಾಗಿ ಯಾವುದೆ ವೇದಿಕೆ ನಿರ್ಮಾಣ ಮಾಡಿರಲಿಲ್ಲ. ಸೈನ್ಸ್ ಮೈದಾನ ಮುಂಭಾಗ ಬಸ್ ನಿಲ್ದಾಣವನ್ನೇ ವೇದಿಕೆಯಾಗಿ ಪರಿವರ್ತಿಸಲಾಯಿತು. ಧರ್ಮಗುರುಗಳು ಮಾತ್ರ ವೇದಿಕೆ ಮೇಲೆ ಕುಳಿತಿದ್ದರು. ಉಳಿದಂತೆ ಜಾಥಾ ಆಯೋಜಿಸಿದ್ದ ವಿವಿಧ ಸಂಘಟೆನೆಗಳ ಪ್ರಮುಖರು ರಸ್ತೆ ಮೇಲೆ ಕುಳಿತು ಧರ್ಮಗುರುಗಳ ಮಾತು ಆಲಿಸಿದರು. ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ.ಧನಂಜಯ ಸರ್ಜಿ, ವಕೀಲ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಕೆ.ಎಲ್.ಅಶೋಕ್, ಅನನ್ಯ ಶಿವಕುಮಾರ್ ಸೇರಿದಂತೆ ಹಲವರು ರಸ್ತೆ ಮೇಲೆ ಕುಳಿತು ಧರ್ಮಗುರುಗಳ ಮಾತು ಕೇಳಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾ, ಹೇಗಿತ್ತು? ಯಾರೆಲ್ಲ ಪಾಲ್ಗೊಂಡಿದ್ದರು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















