ಶಿವಮೊಗ್ಗ ಜಿಲ್ಲೆಯಿಂದ 45 ಮಂದಿ ಗಡಿಪಾರಿಗೆ ಪ್ರಸ್ತಾವನೆ, ಈವರೆಗು ಗಡಿಪಾರಾದವರೆಷ್ಟು?

SHIVAMOGGA LIVE NEWS | 14 DECEMBER 2022

ಶಿವಮೊಗ್ಗ : ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು 45 ಜನರನ್ನು ಗಡಿಪಾರು (deport) ಮಾಡುವಂತೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೆ ಮೂವರನ್ನು ಗಡಿಪಾರು ಮಾಡಲಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

Shimoga Nanjappa Hospital

2022ರ ಜನವರಿ 1 ರಿಂದ ಈವರೆಗೆ 45 ಮಂದಿ ಗಡಿಪಾರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಶಿವಮೊಗ್ಗ ಉಪ ವಿಭಾಗದಿಂದ 31 ಮಂದಿ, ಭದ್ರಾವತಿ ಮತ್ತು ಸಾಗರ ಉಪ ವಿಭಾಗದಿಂದ ತಲಾ ಇಬ್ಬರು. ಶಿಕಾರಿಪುರ ಮತ್ತು ತೀರ್ಥಹಳ್ಳಿ ಉಪ ವಿಭಾಗದಿಂದ ತಲಾ 5 ಮಂದಿಯ ಗಡಿಪಾರು (deport) ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ.

Nanjappa Hospital Advertisement

ಎರಡು ತಿಂಗಳಲ್ಲೆ ಅಧಿಕ (deport)

45 ಮಂದಿ ಪೈಕಿ ಕಳೆದ 2 ತಿಂಗಳಲ್ಲೆ ಅಧಿಕ ಮಂದಿ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 22 ಮಂದಿಯನ್ನು ಗಡಿಪಾರು ಮಾಡುವಂತೆ ಕಳೆದ 2 ತಿಂಗಳಲ್ಲಿ ಪ್ರಸ್ತಾವಣೆ ಸಲ್ಲಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕ್ಲಬ್ ಮೇಲೆ ರಾತ್ರಿ ಪೊಲೀಸರ ದಾಳಿ, ಮ್ಯಾನೇಜರ್ ಸೇರಿ 12 ಮಂದಿ ಅರೆಸ್ಟ್

ರೌಡಿಗಳು ಮತ್ತು ರೂಢಿಗತ ಅಪರಾಧಿಗಳಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಪಾರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Shimoga Nanjappa HOspital

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment