SHIVAMOGGA LIVE NEWS | 19 JANUARY 2023
SHIMOGA | ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಕಂಪ್ಯೂಟರ್, ಪೀಠೋಪಕರಣಗಳನ್ನು ಜಪ್ತಿ (Seize) ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆ ಜಪ್ತಿ ಕಾರ್ಯ ನಡೆಸಲಾಯಿತು.
ಶಿವಮೊಗ್ಗ ತಾಲೂಕು ಕಚೇರಿ ಕಟ್ಟಡದಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಇದೆ. ಇಲ್ಲಿನ 5 ಕುರ್ಚಿ, 5 ಕಂಪ್ಯೂಟರ್, 2 ಟೇಬಲ್ ಜಪ್ತಿ (Seize) ಮಾಡಲಾಗಿದೆ.
![]() |
ಜಪ್ತಿಗೆ ಕಾರಣವೇನು?
ತುಂಗಾ ಮೇಲ್ದಂಡೆ ಯೋಜನೆಗಾಗಿ 1997ರಲ್ಲಿ ರೈತರಿಂದ ಜಮೀನು ಪಡೆಯಲಾಗಿತ್ತು. ಎಕರೆಗೆ 3 ಲಕ್ಷ ರೂ. ನೀಡುವುದಾಗಿ ಆಗ ತಿಳಿಸಲಾಗಿತ್ತು. ಆದರೆ ಹಲವು ರೈತರಿಗೆ ಪರಿಹಾರ ನೀಡಿಲ್ಲ. ಗಾಡಿಕೊಪ್ಪದ ವೆಂಕಟೇಶ್ ಅವರು ಸರ್ವೆ ನಂಬರ್ 75ರಲ್ಲಿ 5 ಎಕರೆ ಜಮೀನನ್ನು ಯೋಜನೆಗಾಗಿ ಬಿಟ್ಟು ಕೊಟ್ಟಿದ್ದರು.
‘ನೀರಾವರಿ ಇಲಾಖೆ ಅರ್ಧದಷ್ಟು ಜನರಿಗೆ ಪರಿಹಾರ ನೀಡಿಲ್ಲ. ಪರಿಹಾರ ವಿಳಂಬ ಮಾಡಿದ್ದರಿಂದ ಹೊಸ ದರದಂತೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆವು. ಹೆಚ್ಚಿನ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದ್ದರೂ ಅಧಿಕಾರಿಗಳು ವಿಳಂಬ ಮಾಡಿದ್ದಾರೆ’ ಎಂದು ಗಾಡಿಕೊಪ್ಪದ ವೆಂಕಟೇಶ್ ಅವರು ಆರೋಪಿಸಿದರು.
ಹೈಕೋರ್ಟಿಗೆ ಮೇಲ್ಮನವಿ
‘ವೆಂಕಟೇಶ್ ಅವರ ಪ್ರಕರಣದಲ್ಲಿ ಪ್ರತಿ ಚದರ ಅಡಿಗೆ 105 ರೂ. ನಂತೆ ಒಟ್ಟು 2.40 ಕೋಟಿ ರೂ. ಪರಿಹಾರ ನೀಡುವಂತೆ ಜಪ್ತಿ ಆದೇಶದಲ್ಲಿ ತಿಳಿಸಲಾಗಿದೆ. ಈ ಮೊತ್ತ ಹೆಚ್ಚಾಗಿದೆ ಎಂದು ಕಚೇರಿಯಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ. ತಡೆಯಾಜ್ಞೆ ಪ್ರತಿ ಸಿಕ್ಕಿಲ್ಲ. ನೀರಾವರಿ ನಿಗಮ ಹಣ ಬಿಡುಗಡೆ ಮಾಡಿದಲ್ಲಿ ಅದನ್ನು ನ್ಯಾಯಾಲಯಕ್ಕೆ ಜಮೆ ಮಾಡಲಿದ್ದೇವೆ’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಉಸ್ತುವಾರಿ ವ್ಯವಸ್ಥಾಪಕ ಸತೀಶ್ ತಿಳಿಸಿದರು.
ಪರಿಹಾರ ವಿತರಣೆ ವಿಳಂಬ ಮಾಡಿದರಿಂದ ಪೀಠೋಪಕರಣ, ಕಂಪ್ಯೂಟರ್ ಗಳ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಅಧಿಕಾರಿಗಳು ತುಂಗಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಗಳನ್ನು ವಶಕ್ಕೆ ಪಡೆದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಫೈನಲ್, ಕಾಮಗಾರಿ ಪರಿಶೀಲಿಸಿದ ಮಾಜಿ ಸಿಎಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200