SHIVAMOGGA LIVE NEWS | 23 JANUARY 2023
SHIMOGA | ಹಳೆ ಪಿಂಚಣಿಗಾಗಿ ಆಗ್ರಹಿಸಿ ಸರ್ಕಾರಿ ನೌಕರರು (Government Employees) ಶಿವಮೊಗ್ಗದಲ್ಲಿ ಬೈಕ್ ಜಾಥಾ ನಡೆಸಿದರು. ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಫ್ರೀಡಂ ಪಾರ್ಕಿನಲ್ಲಿ ಸಮಾವೇಶ ನಡೆಸಲಾಯಿತು.
ಎನ್.ಪಿ.ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಅವರು ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಾಥಾಗೆ ಚಾಲನೆ ನೀಡಿದರು. ಒಪಿಎಸ್ ಜಾರಿಗೊಳಿಸಬೇಕು ಎಂದು ಘೋಷಣೆ ಕೂಗುತ್ತ ಸರ್ಕಾರಿ ನೌಕರರು (Government Employees) ಮೆರವಣಿಗೆಯಲ್ಲಿ ಪಾಲ್ಗೊಂಡರು.
ಬಜೆಟ್ ಮೊದಲು ಸಿಎಂ ಜೊತೆ ಸಭೆ
ನಿರ್ಣಾಯಕ ಹಂತಕ್ಕೆ ಹೋರಾಟ
ಇದೆ ವೇಳೆ ಪ್ರತಿಭಟನಾನಿರತನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಶಾಂತಾರಾಮ್ ಅವರು, ಹಳೆ ಪಿಂಚಣಿ ನೀತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ. ಪ್ರತಿ ತಾಲೂಕು ಹಂತಕ್ಕೆ ಒಪಿಎಸ್ ಹೋರಾಟ ವಿಸ್ತರಣೆಯಾಗಿದೆ. ಒಪಿಎಸ್ ನಮಗೆ ಸಂವಿಧಾನ ನೀಡಿದ ಹಕ್ಕು. ಇದು ನಮ್ಮ ಬದುಕಿಗಾಗಿ ನಡೆಯುತ್ತಿರುವ ಹೋರಾಟ ಎಂದು ತಿಳಿಸಿದರು.
ವಿವಿಧೆಡೆಯ ನೌಕರರು
ಒಪಿಎಸ್ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಎನ್.ಪಿ.ಎಸ್ ನೌಕರರು ಆಗಮಿಸಿದ್ದರು. ಶಿವಪ್ಪನಾಯಕ ಪ್ರತಿಮೆಯಿಂದ ಬಿ.ಹೆಚ್.ರಸ್ತೆ, ಸರ್.ಎಂ.ವಿ.ರಸ್ತೆ, ಡಿವಿಎಸ್ ಸರ್ಕಲ್, ಮಹಾವೀರ ವೃತ್ತ, ಸವಳಂಗ ರಸ್ತೆ ಮೂಲಕ ಫ್ರೀಡಂ ಪಾರ್ಕ್ ತಲುಪಿದರು. ಸಮಾವೇಶದಲ್ಲಿ ದೊಡ್ಡ ಸಂಖ್ಯೆಯ ನೌಕರರು ಪಾಲ್ಗೊಂಡಿದ್ದರು.
ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪರ್ಯಾನಾಯ್ಕ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ, ಚಂದ್ರಕಾಂತ್, ತಾಲೂಕು ಅಧ್ಯಕ್ಷ ಪ್ರಭಾಕರ್, ಪ್ರಮುಖರಾದ ಗುರುಸ್ವಾಮಿ, ಮಹಾಬಲೇಶ್ವರ ಹೆಗಡೆ, ಡಾ. ನಾಗರಾಜ್ ಪರಿಸರ, ರಾಧಾ, ಕೇಶವಪ್ರಸಾದ್, ರವಿ, ವಿವಿಧ ಜಿಲ್ಲೆಗಳ ಅಧ್ಯಕ್ಷರು, ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ – ಬ್ಯಾಂಕಿನಲ್ಲಿ ಹಣ ಬಿಡಿಸಲು ಚೆಕ್ ನೀಡಿದ ಶಿವಮೊಗ್ಗದ ನೌಕರನಿಗೆ ಕಾದಿತ್ತ ಶಾಕ್, SMS ತಂದ ಸಂಕಷ್ಟ
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು