ಮೇಷ
ಸ್ನೇಹಿತನಿಂದ ವ್ಯಾಪಾರದಲ್ಲಿ ಅನುಕೂಲ. ಬಿಡುವಿಲ್ಲದ ಕೆಲಸದ ನಡುವೆಯು ನಿಮಗಾಗಿ ಸಮಯ ಹೊಂದಿಸಿಕೊಳ್ಳುವುದು ಉಚಿತ. ಹಣದಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂಗಾತಿಯೊಂದಿಗೆ ಮುನಿಸು.
ವೃಷಭ
ಮನಸಿನ ಶಾಂತಿಗಾಗಿ ಆಧ್ಯಾತ್ಮದ ಮೊರೆ ಹೋಗಿ. ಭೂಮಿ ಮಾರಾಟ ಸಫಲ. ನಿರೀಕ್ಷೆಗಿಂತಲು ಹೆಚ್ಚು ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಕಸಿವಿಸಿ. ಸಂಗಾತಿಗೆ ಅನಾರೋಗ್ಯ.
ಮಿಥುನ
ಧಾರ್ಮಿಕ ಚುಟುವಟಿಕೆಯಲ್ಲಿ ಭಾಗಿ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ. ಅಪವ್ಯಯದ ಕುರಿತು ಎಚ್ಚರವಿರಲಿ. ವಿದ್ಯಾರ್ಥಿಗಳು ಓದಿನೆಡೆ ಇನ್ನಷ್ಟು ಹೆಚ್ಚು ಗಮನ ಹರಿಸಬೇಕು.
ಕರ್ಕಾಟಕ
ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತೀರಿ. ಸ್ವಂತ ನಿರ್ಧಾರ ಮಾಡಿ ದೃಢವಾಗಿ ಹೆಜ್ಜೆ ಇಡಿ. ಸ್ನೇಹಿತರು ಸಾಲಕ್ಕೆ ಬೇಡಿಕೆ ಇಡುತ್ತಾರೆ. ಹಠಾತ್ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಪ್ರಯಾಣದಿಂದ ಅನುಕೂಲವಾಗಲಿದೆ.
ಸಿಂಹ
ಅನಿರೀಕ್ಷಿತವಾಗಿ ಹಣ ಕೈಗೆ ತಲುಪಲಿದ್ದು, ನಿಮ್ಮ ಬಹುದಿನದ ಸಮಸ್ಯೆ ಬಗೆಹರಿಯಲಿದೆ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯೋಗದಲ್ಲಿ ಲಾಭ. ಉತ್ತಮ ವಿಚಾರ, ಚಟುವಟಿಕೆಯಿಂದ ನಿಮ್ಮ ಆದಾಯ ಹೆಚ್ಚಿಸಲಿದೆ.
ಕನ್ಯಾ
ಒತ್ತಡದ ದಿನ. ವ್ಯವಹಾರ ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಲಿದೆ. ಸ್ನೇಹಿತನಿಂದ ನೆರವು ದೊರೆಯಲಿದೆ. ಧ್ಯಾನ ಮಾಡಿ ಶಾಂತವಾಗಿರಲು ಪ್ರಯತ್ನಿಸಿ.
ತುಲಾ
ಉದ್ಯೋಗ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಹೆಜ್ಜೆ ಇಡುವ ಮುನ್ನ ಎರಡು ಬಾರಿ ಯೋಚಿಸುವುದು ಉತ್ತಮ. ಸಮಯ ವ್ಯರ್ಥ ಮಾಡಬೇಡಿ. ಪ್ರತಿ ನಿಮಿಷಕ್ಕೂ ದೊಡ್ಡ ಬೆಲೆ ತೆರಬೇಕಾಗುತ್ತದೆ.
ವೃಶ್ಚಿಕ
ಮುಂಗೋಪ. ಸಣ್ಣಪುಟ್ಟ ವಿಚಾರಕ್ಕು ಉದ್ವೇಗಕ್ಕೊಳಗಾಗುತ್ತೀರಿ. ಶಾಂತಿಯುತವಾಗಿದ್ದರೆ ಉತ್ತಮ. ಹಣದ ಅಪವ್ಯಯದಿಂದ ದಿನದ ಅಂತ್ಯದಲ್ಲಿ ಮನಸಿಗೆ ನೋವು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಧನು
ಮನಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇದರಿಂದ ನೀವು ಅಂದುಕೊಂಡ ಕೆಲಸಗಳು ನೆರವೇರಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು.
ಮಕರ
ಕೆಲಸದ ಸ್ಥಳದಲ್ಲಿ ಪ್ರಶಂಸೆ ಲಭಿಸಲಿದೆ. ಉದ್ಯಮಿಗಳು ಹಿರಿಯರ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತೋಹಾರಿ ಬೆಳವಣಿಗೆ.
ಕುಂಭ
ಪ್ರೀತಿಪಾತ್ರರಿಂದ ಸ್ವಲ್ಪ ಕಿರಿಕಿರಿ. ಅತಿಯಾದ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಸಮಸ್ಯೆ. ಮಾನಸಿಕ ಒತ್ತಡ.
ಮೀನ
ಕೆಲಸದ ಸ್ಥಳದಲ್ಲಿ ಪ್ರತಿಸ್ಪರ್ಧಿಗಳಿಗಿಂತಲೂ ಉತ್ತಮವಾಗಿರುತ್ತೀರಿ. ಹಣವನ್ನು ಕೂಡಿಡಲು ಆರಂಭಿಸಿ, ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ. ಮನೆಯ ಸದಸ್ಯರೊಂದಿಗೆ ಪ್ರೀತಿಯಿಂದ ಇರುವುದು ಸೂಕ್ತ.
ಹೊಸ್ತಿಲ ಮೇಲೆ ನಿಲ್ಲುವುದು ಸರಿಯಾದ ಕ್ರಮವಲ್ಲ. ಅದರಲ್ಲಿಯು ಮನೆಯ ಮುಂಬಾಗಿಲಿನ ಹೊಸ್ತಿಲ ಮೇಲೆ ನಿಲ್ಲಬೇಡಿ. ಬೇರೆ ಯಾರೂ ನಿಲ್ಲದ ಹಾಗೆ ನೋಡಿಕೊಳ್ಳಿ. ಹೊಸ್ತಿಲ ಮೇಲೆ ಕಾಲಿಡದೆ, ನಿಲ್ಲದೆ ಇದ್ದರೆ ಮನೆಯವರಿಗೆ ಶ್ರಯಸ್ಸು ಲಭಿಸಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200