ಹೊಳಲೂರು ಬಳಿ ಅಪಘಾತ, ಹೊನ್ನಾಳಿಯ ವ್ಯಕ್ತಿ ದುರ್ಮರಣ, ಏರ್‌ಬ್ಯಾಗ್‌ ಉಳಿಸಿತು ತಾಯಿ, ಮಗನ ಪ್ರಾಣ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 6 JUNE 2023

KIA-car-Accident-near-Holehonnuru-in-Shimoga-taluk

SHIMOGA : ನಿಯಂತ್ರಣ ತಪ್ಪಿದ ಕಾರು ಮರಕ್ಕೆ (Car Collision) ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ. ಹೊಳಲೂರು ರಸ್ತೆಯ ಹೊಳೆಹಟ್ಟಿ ಬಳಿ ಘಟನೆ ಸಂಭವಿಸಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಶರತ್‌ (42) ಮೃತ ವ್ಯಕ್ತಿ. ಶರತ್‌ ಅವರ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್‌ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಕೆಲಸದ ನಿಮಿತ್ತ ಶರತ್‌ ಅವರು ಕುಟುಂಬ ಸಹಿತ ಶಿವಮೊಗ್ಗಕ್ಕೆ ಬಂದು ಮನೆಗೆ ಮರಳುತ್ತಿದ್ದರು. ಶರತ್‌ ಚಲಾಯಿಸುತ್ತಿದ್ದ ಕಾರು ಹೊಳೆಹಟ್ಟಿ ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ (Car Collision) ಹೊಡದಿದೆ. ಸ್ಥಳದಲ್ಲೇ ಶರತ್‌ ಅಸುನೀಗಿದ್ದಾರೆ. ಕಾರಿನಲ್ಲಿ ಏರ್‌ ಬಲೂನ್‌ ಓಪನ್‌ ಆಗಿದ್ದರಿಂದ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್‌ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ – ಆಯನೂರು ಹತ್ಯೆ ಕೇಸ್‌, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? ಸತೀಶನ ಕಾಲಿಗೆ ಗುಂಡು ಹಾರಿಸಿದ್ದೇಕೆ? ಕಂಪ್ಲೀಟ್‌ ಮಾಹಿತಿ

ಪ್ರೀತಿ ಅವರ ಬಲಗೈಗೆ ಹೊಡೆತ ಬಿದ್ದಿದೆ. ಕುಶಾಲ್‌ ತಲೆಗೆ ಗಾಯವಾಗಿದೆ. ಕಾರಿನ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Shivamogga Live Promotion

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment