ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 AUGUST 2023
ಸಿ.ಟಿ.ರವಿ ನ್ಯಾಯಮೂರ್ತಿಗಳ ಕ್ಷಮೆ ಕೇಳಬೇಕು
ಈಗ ಸುಲಭಕ್ಕೆ ಸಿಗಲಿದೆ ಸಾಲ
ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ.
ಕೂಡಲೆ ಕರೆ ಮಾಡಿ 9972194422
SHIMOGA : ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ವಿರುದ್ಧ ಬಿಜೆಪಿ (bjp) ಮುಖಂಡ ಸಿ.ಟಿ.ರವಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಕ್ಷಮೆ ಯಾಚಿಸಬೇಕು. ಇಲ್ಲವಾದರಲ್ಲಿ ಸಿ.ಟಿ.ರವಿ (C.T Ravi) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಕೀಲ ಮತ್ತು ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ಕೆ.ಪಿ.ಶ್ರೀಪಾಲ್ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 40 ಪರ್ಸೆಂಟ್ ಹಗರಣದ ತನಿಖೆಗೆ ರಾಜ್ಯ ಸರ್ಕಾರ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ನ್ಯಾಯಮೂರ್ತಿ ಅವರ ಗೌರವಕ್ಕೆ ಧಕ್ಕೆ ಬರುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿದರು.
ಭದ್ರಾವತಿಯ 9 ಕಡೆ ಗೃಹಲಕ್ಷ್ಮಿ ನೇರ ಸಂವಾದ
BHADRAVATHI : ನಗರಸಭೆ ವ್ಯಾಪ್ತಿಯಲ್ಲಿ ಆ.30 ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಜೊತೆ ನೇರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. 9 ಕಡೆ ಕಾರ್ಯಕ್ರಮ ನಡೆಯಲಿದೆ. ತಾಲೂಕು ಕಚೇರಿ ರಸ್ತೆಯ ವೀರಶೈವ ಸಭಾ ಭವನ, ಜನ್ನಾಪುರದ ಮಲ್ಲೇಶ್ವರ ಕಲ್ಯಾಣ ಮಂಟಪ, ಮಾದವನಗರದ ಬಸವ ಮಂಟಪ, ಕಡದಕಟ್ಟೆಯ ಶ್ರೀ ವಿದ್ಯಾಧಿರಾಜ ಸಭಾ ಭವನ, ಅನ್ವರ್ ಕಾಲೋನಿಯ ಮದರಸ ಶಾದಿ ಮಹಲ್, ಹೊಸಮನೆ ಹಿಂದು ಮಹಾಸಭಾ ಗಣಪತಿ ಸಮುದಾಯ ಭವನ, ನ್ಯೂ ಟೌನ್ ಲಯನ್ಸ್ ಕಮ್ಯೂನಿಟಿ ಹಾಲ್, ಉಜ್ಜನೀಪುರದ ಡಾನ್ ಬಾಸ್ಕೊ ಐಟಿಐ ಆಡಿಟೋರಿಯಂ, ಬೊಮ್ಮನಕಟ್ಟೆಯ ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜು ಆಡಿಟೋರಿಯಂನಲ್ಲಿ ಸಂವಾದ ನಡೆಯಲಿದೆ. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಗರಸಭೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ಅಟ್ಯಾಕ್, ಕಾರಣವೇನು?
ಕರ್ನಾಟಕ ಸಂಘದಲ್ಲಿ ತಿಂಗಳ ಅತಿಥಿ
SHIMOGA : ಕರ್ನಾಟಕ ಸಂಘದಲ್ಲಿ ತಿಂಗಳ ಅತಿಥಿ ಕಾರ್ಯಕ್ರಮ ಮಾಲಿಕೆಯಲ್ಲಿ ಆ.26ರ ಸಂಜೆ 5.30ಕ್ಕೆ ಸಾಹಿತಿ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಕನ್ನಡ ಅನುಭಾವ ಕಾವ್ಯದ ಒಂದು ಪಕ್ಷಿನೋಟ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗೌರವ ಕಾರ್ಯದರ್ಶಿ ಪ್ರೊ. ಎಂ.ಆಶಾಲತಾ ತಿಳಿಸಿದ್ದಾರೆ.
- ಗೃಹಲಕ್ಷ್ಮಿ ಯೋಜನೆ, ಮಹತ್ವದ ಅಪ್ಡೇಟ್ ನೀಡಿದ ಪ್ರಾಧಿಕಾರ, ಏನದು?
- ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ
- ಅಡಿಕೆ ಧಾರಣೆ | 8 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮನೆ ಬಾಗಿಲು ತೆಗೆದಿತ್ತು, ಪತ್ನಿ ಇರಬೇಕೆಂದು ಒಳ ಬಂದ ವ್ಯಕ್ತಿಗೆ ಆಘಾತ ಕಾದಿತ್ತು, ಆಗಿದ್ದೇನು?
- ಶಿವಮೊಗ್ಗದಲ್ಲಿ ಐದು ತಿಂಗಳ ಹಿಂದೆಯೇ ಪತ್ತೆಯಾಗಿತ್ತು HMP ಸೋಂಕು, ಡಾ.ಸರ್ಜಿ ಹೇಳಿದ್ದೇನು?
- ಹುಲಿಕಲ್ ಘಾಟ್ನಲ್ಲಿ ಪ್ರಪಾತಕ್ಕೆ ಉರುಳಿದ ಬಸ್, ಆಗಿದ್ದೇನು?