ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 NOVEMBER 2023
SHIMOGA : ಕೆಲಸಕ್ಕಿದ್ದ ಮಹಿಳೆಯರಿಬ್ಬರು ನಕಲಿ ಬಿಲ್ ಸೃಷ್ಟಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ದೂರು ನೀಡುವುದಾಗಿ ಮಾಲೀಕರು ಎಚ್ಚರಿಸಿದಾಗ ವಿಡಿಯೋ ಬಹಿರಂಗ ಪಡಿಸುವುದಾಗಿ ಮಹಿಳೆಯರು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಶಿವಮೊಗ್ಗ ಎಪಿಎಂಸಿ ಆವರಣದಲ್ಲಿರುವ ಅಡಿಕೆ ಮಂಡಿಯಲ್ಲಿ ಘಟನೆ ಸಂಭವಿಸಿದೆ. ಮಂಡಿ ಮಾಲೀಕ ಮಂಜುನಾಥ್ ಎಂಬುವವರು ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.
ಖಾಲಿ ಚೆಕ್ ದುರ್ಬಳಕೆ, ಅಡಿಕೆ ಮಾಯ
ಪತ್ನಿ ಕ್ಯಾನ್ಸರ್‌ಗೆ ತುತ್ತಾಗಿದ್ದು ಆರೈಕೆ ಹಿನ್ನೆಲೆ ಮಂಡಿ ಮಾಲೀಕ ಮಂಜುನಾಥ್ ತಮ್ಮೂರಿನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದರು. ಕಳೆದ ಮೂರು ವರ್ಷದಿಂದ ಮಂಡಿ ನಿರ್ವಹಣೆಯ ಜವಾಬ್ದಾರಿಯನ್ನು ಕೆಲಸಕ್ಕಿದ್ದ ಇಬ್ಬರು ಮಹಿಳೆಯರಿಗೆ ವಹಿಸಿದ್ದರು. ಖಾಲಿ ಚೆಕ್‌ಗಳಿಗೆ ಸಹಿ ಮಾಡಿ ರೈತರಿಗೆ ನೀಡುವಂತೆ ತಿಳಿಸಿದ್ದರು. ಆದರೆ ಈ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು, ಮಂಡಿಯಲ್ಲಿ 2071 ಚೀಲ ಅಡಿಕೆ ಸ್ಟಾಕ್ ಇರಬೇಕು. ಆದರೆ 33 ಚೀಲಗಳು ಮಾತ್ರವೆ ಇದೆ. ಅಡಿಕೆ ಮಾರಾಟದ ಹಣ ಕೇಳಿದರೆ ರೈತರಿಗೆ ಮುಂಗಡವಾಗಿ ನೀಡಿರುವಾಗಿ ತಿಳಿಸಿದ್ದರು. ಆಡಿಟರ್ ಪರಿಶೀಲಿಸಿದಾಗ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಐಷಾರಾಮಿ ಬದುಕಿನಿಂದ ಅನುಮಾನ
ಮಹಿಳೆಯರ ಐಷಾರಾಮಿ ಬದುಕಿನಿಂದ ಅನುಮಾನಗೊಂಡು ಮಂಡಿಯ ಲೆಕ್ಕಪತ್ರ ಪರಿಶೀಲಿಸಿದಾಗ ವಂಚನೆ ಆಗಿರುವುದು ಗೊತ್ತಾಗಿದೆ. ಸುಮಾರು 7 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ದೂರು ನೀಡುವುದಾಗಿ ಮಹಿಳೆಯರಿಗೆ ತಿಳಿಸಿದಾಗ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ 15 ನಿಮಿಷದ ನಿಮ್ಮ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಮಂಜುನಾಥ್ ದೂರಿನಲ್ಲಿ ಆಪಾದಿಸಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ರೈಲಿಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ಸಾವು, ಶಿವಮೊಗ್ಗ ರೈಲ್ವೆ ಪೊಲೀಸರಿಂದ ತನಿಖೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422