ಎರಡೆ ದಿನಕ್ಕೆ ಕುವೆಂಪು ವಿವಿ ಕುಲಸಚಿವರು ಬದಲು, ಅಧಿಕಾರ ಸ್ವೀಕಾರಕ್ಕು ಮುನ್ನವೆ ಹೊಸಬರ ನೇಮಕ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 2 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರನ್ನು ನೇಮಿಸಿದ್ದ ಸರ್ಕಾರ ಎರಡನೇ ದಿನದಲ್ಲಿ ಆದೇಶ ಬದಲಿಸಿದೆ. ಮತ್ತೊಬ್ಬ ಅಧಿಕಾರಿಯನ್ನು ಆ ಸ್ಥಾನಕ್ಕೆ ನೇಮಿಸಿದೆ.

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಕೆಎಎಸ್‌ ಅಧಿಕಾರಿ ವಿಜಯ ಕುಮಾರ್‌.ಹೆಚ್‌.ಬಿ ಅವರನ್ನು ನೇಮಿಸಲಾಗಿದೆ.

ಎರಡೆ ದಿನದಲ್ಲಿ ಆದೇಶ ಬದಲು

KAS Officer Vijay Kumar
ವಿಜಯ ಕುಮಾರ್

ಜ.31ರಂದು ಕೆಎಎಸ್‌ ಅಧಿಕಾರಿ ಶಿವರಾಜು.ಪಿ ಅವರನ್ನು ಕುವೆಂಪು ವಿವಿ ಆಡಳಿತ ಕುಲಸಚಿವರಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಶಿವರಾಜು ಅವರು ಅವರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಆಗಲೆ ಅವರ ಆದೇಶ ಬದಲಿಸಿರುವ ಸರ್ಕಾರ, ವಿಜಯಕುಮಾರ್‌ ಅವರನ್ನು ನೇಮಿಸಿದೆ. ಜ.31ರ ಆದೇಶದಲ್ಲಿ ವಿಜಯ ಕುಮಾರ್‌ ಅವರನ್ನು ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನೇಮಿಸಲಾಗಿತ್ತು.

ಡಿವೈಎಸ್‌ಪಿ ವಿಚಾರದಲ್ಲು ಹೀಗೆ ಆಗಿದೆ

ಶಿವಮೊಗ್ಗ ಉಪ ವಿಭಾಗದಲ್ಲಿ ಖಾಲಿ ಇದ್ದ ಡಿವೈಎಸ್‌ಪಿ ಹುದ್ದೆಗೆ ಲೋಕಾಯುಕ್ತ ಡಿವೈಎಸ್‌ಪಿ ಜೆ.ಜೆ.ತಿರುಮಲೇಶ್‌ ಅವರನ್ನು ಸರ್ಕಾರ ನೇಮಿಸಿತ್ತು. ಆದರೆ ಎರಡೆ ದಿನದಲ್ಲಿ ತಿರುಮಲೇಶ್‌ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿತ್ತು. ಆ ಸ್ಥಾನಕ್ಕೆ ರಾಜ್ಯ ಗುಪ್ತವಾರ್ತೆ ಡಿವೈಎಸ್‌ಪಿ ಬಾಬು ಆಂಜನಪ್ಪ ಅವರನ್ನು ನೇಮಿಸಲಾಗಿದೆ. ಈ ಬೆಳವಣಿಗೆ ಬೆನ್ನಿಗೆ ಕುವೆಂಪು ವಿವಿ ಆಡಳಿತ ಕುಲಸಚಿವರ ನೇಮಕಾತಿ ಆದೇಶವು ಎರಡೆ ದಿನಕ್ಕೆ ಬದಲಾಗಿದೆ.

ಇದನ್ನೂ ಓದಿ – ಡಿವೈಎಸ್‌ಪಿಗಳ ವರ್ಗಾವಣೆ, ಜಿಲ್ಲೆಯಲ್ಲಿ ಯಾರೆಲ್ಲರ ವರ್ಗವಾಗಿದೆ? ತಿರುಮಲೇಶ್‌ ವರ್ಗಾವಣೆ ರದ್ದಾಗಿದ್ದೇಕೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment