ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
LOKSABHA NEWS : ಮೇ 7ರಂದು ಲೋಕಸಭೆ ಚುನಾವಣೆ ಮತದಾನ ನಡೆಯಲಿದೆ. 48 ಗಂಟೆ ಮೊದಲು ವಿವಿಧ ನಿರ್ಬಂಧ ವಿಧಿಸಲಾಗುತ್ತಿದೆ. ಈ ಸಂಬಂಧ ಚುನಾವಣ ಆಯೋಗ ಆರು ಪ್ರಮುಖ ಮಾರ್ಗಸೂಚಿ ಹೊರಡಿಸಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾರ್ಗಸೂಚಿ ಪ್ರಕಟಿಸಿದರು.
ಆರು ಮಾರ್ಗಸೂಚಿ
ಮಾರ್ಗಸೂಚಿ 1 : ಕ್ಷೇತ್ರ ವ್ಯಾಪ್ತಿಯ ಮತದಾರರು ಹೊರತು ಉಳಿದೆಲ್ಲ ಸ್ಟಾರ್ ಪ್ರಚಾರಕರು, ರಾಜಕೀಯ ವ್ಯಕ್ತಿಗಳು ಲೋಕಸಭೆ ಕ್ಷೇತ್ರದಿಂದ ಹೊರಗೆ ತೆರಳಬೇಕು. ‘ಹೊರಗಿನವರು ಇಲ್ಲಿ ಅಭ್ಯರ್ಥಿಯಾಗಿದ್ದರೆ ಅವರು ಇಲ್ಲಿ ಉಳಿಬಹುದು. ಅದರ ಹೊರತು ಹೊರಗಿನವರು ಕ್ಷೇತ್ರ ತೊರೆಯಬೇಕು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಮಾರ್ಗಸೂಚಿ 2 : ಬಹಿರಂಗ ರಾಜಕೀಯ ಪ್ರಚಾರ ಸಭೆ, ಸಮಾವೇಶ, ರಾಲಿಗಳನ್ನು ನಿರ್ಬಂಧಿಸಲಾಗಿದೆ. ಬಲ್ಕ್ ಎಸ್‌ಎಂಎಸ್ ಬಳಕೆ ಮಾಡುವಂತಿಲ್ಲ. ‘ರಾಜಕೀಯ ಪಕ್ಷದವರು ಐದು ಜನಕ್ಕಿಂತಲು ಹೆಚ್ಚಿರಬಾರದು. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅವಕಾಶವಿದೆ’ ಎಂದು ಗುರುದತ್ತ ಹೆಗಡೆ ಹೇಳಿದರು.
ಮಾರ್ಗಸೂಚಿ 3 : ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಅನ್ಯ ಪಕ್ಷ ಅಥವಾ ಅಭ್ಯರ್ಥಿಯ ಬಗ್ಗೆ ಅವಹೇಳನ ಮಾಡುವಂತ್ತಿಲ್ಲ. ಜಾತಿ, ಧರ್ಮದ ಉದ್ವಿಗ್ನತೆ ಸೃಷ್ಟಿಸುವಂತ್ತಿಲ್ಲ.
ಮಾರ್ಗಸೂಚಿ 4 : ಮನೆ ಮನೆ ಪ್ರಚಾರದ ವೇಳೆ ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ.
ಮಾರ್ಗಸೂಚಿ 5 : ಮೇ 5ರ ಸಂಜೆ 5 ಗಂಟೆಯಿಂದ ಮತ್ತು ಮೇ 7ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮಾರ್ಗಸೂಚಿ 6 : ಚೆಕ್‌ಪೋಸ್ಟ್ ಮತ್ತು ವಿವಿಧೆಡೆ ತಪಾಸಣೆಗಳನ್ನು ತೀವ್ರಗೊಳಿಸಲಾಗುತ್ತದೆ.
ಇದನ್ನೂ ಓದಿ – ಮದ್ಯ ಪ್ರಿಯರ ಗಮನಕ್ಕೆ, ನಾಳೆ ಸಂಜೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ