ಶಿವಮೊಗ್ಗದಲ್ಲಿ ಅಚ್ಚರಿ ಪ್ರಮಾಣದ ಮತ ಗಳಿಸಿದ ಜೊಮಾಟೊ ಡೆಲಿವರಿ ಬಾಯ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 JUNE 2024

RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜೊಮಾಟೋ ಡಿಲೆವರಿ ಬಾಯ್‌ (Zomato) ಬಂಡಿ ರಂಗನಾಥ ಅಚ್ಚರಿ ಪ್ರಮಾಣದ ಮತ ಗಳಿಸಿದ್ದಾರೆ. ಇನ್ನೊಂದೆಡೆ ಅಖಾಡಕ್ಕಿಳಿದಿದ್ದ ಮತ್ತೊಬ್ಬ ಈಶ್ವರಪ್ಪ ಸಾವಿರ ಮತ ಪಡೆಯಲು ಸಾಧ್ಯವಾಗಿಲ್ಲ. ಈ ಮೂಲಕ ಶಿವಮೊಗ್ಗ ಲೋಕಸಭೆ ಚುನಾವಣೆ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ.

ಜೊಮಾಟೊ ಡಿಲೆವರಿ ಬಾಯ್‌ ಕಮಾಲ್‌

BANDI%20FINALಜೊಮಾಟೊ ಡಿಲೆವರಿ ಬಾಯ್‌ ಕೆಲಸ ಮಾಡುತ್ತಿರುವ ಬಂಡಿ ರಂಗನಾಥ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇವರು ತುಮಕೂರು ಜಿಲ್ಲೆಯ ಕಲ್ಲಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮದ ನಿವಾಸಿ. ಚುನಾವಣೆಯಲ್ಲಿ ಬಂಡಿ ರಂಗನಾಥ ಹೆಚ್ಚು ಮತ ಪಡೆದ ನಾಲ್ಕನೆಯವರಾಗಿದ್ದಾರೆ. ಒಟ್ಟು 7266 ಮತ ಗಳಿಸಿದ್ದಾರೆ.

ಇಂಜಿನಿಯರಿಂಗ್‌ ಪದವೀಧರೆಗೆ ಸಾವಿರ ಸಾವಿರ ಮತ

ವ್ಯವಸಾಯ ಮಾಡಿ ಜೀವ ಕಟ್ಟುಕೊಂಡಿರುವ ತ್ಯಾಗರ್ತಿಯ ಬೆಳಂದೂರು ನಿವಾಸಿ ರವಿಕುಮಾರ್‌ 4552 ಮತ ಗಳಿಸಿದ್ದಾರೆ. ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರಿಂಗ್‌ ಪದವೀಧರೆ, ಬೆಂಗಳೂರು ನಾಗರಬಾವಿ ನಿವಾಸಿ ಪೂಜಾ ಅಣ್ಣಯ್ಯ 3457 ಮತ, ಬಿಎಸ್‌ಪಿಯ ಎ.ಡಿ.ಶಿವಪ್ಪ 2779 ಮತ, ಶಿವಮೊಗ್ಗ ವಿನೋಬನಗರ ನಿವಾಸಿ ಎನ್‌.ವಿ.ನವೀನ್‌ ಕುಮಾರ್‌ 1993 ಮತ ಗಳಿಸಿದ್ದಾರೆ. ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿ 1478 ಮತ ಪಡೆದಿದ್ದಾರೆ.

ಮತ್ತೊಬ್ಬ ಈಶ್ವರಪ್ಪ ಗಳಿಸಿದ್ದೆಷ್ಟು?

ಚುನಾವಣೆಯಲ್ಲಿ ಈಶ್ವರಪ್ಪ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸಿದ್ದು ಕುತೂಹಲ ಮೂಡಿಸಿತ್ತು. ಆದರೆ ಶಿಕಾರಿಪುರದ ಡಿ.ಎಸ್.ಈಶ್ವರಪ್ಪ 695 ಮತ ಗಳಿಸಲು ಮಾತ್ರ ಸಾಧ್ಯವಾಯಿತು. ಪಕ್ಷೇತರ ಅಭ್ಯರ್ಥಿಗಳಾದ ಈ.ಹೆಚ್‌.ನಾಯಕ 954, ಜಾನ್‌ ಬೆನ್ನಿ 867, ಗಣೇಶ.ಬಿ (ಬೆಳ್ಳಿ ) 747, ಕುಣಜೆ ಮಂಜುನಾಥ ಗೌಡ 683, ಕೆಆರ್‌ಎಸ್‌ ಪಕ್ಷದ ಎಸ್‌.ಕೆ.ಪ್ರಭು 617, ಶಿವರುದ್ರಯ್ಯ ಸ್ವಾಮಿ 599, ಇಮ್ತಿಯಾಜ್‌ ಅತ್ತಾರ್‌ 442, ಮೊಹಮ್ಮದ್‌ ಯುಸುಫ್‌ ಖಾನ್‌ 404, ಜಿ.ಜಯದೇವ 368, ಚಂದ್ರೇಖರ್‌.ಹೆಚ್.ಸಿ 357, ಶ್ರೀಪತಿ ಭಟ್‌ 344, ಸಂದೇಶ ಶೆಟ್ಟಿ 293, ಸುರೇಶ್‌ ಪೂಜಾರಿ 220 ಮತ ಪಡೆದಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಠೇವಣಿ ಕಳೆದುಕೊಂಡ ಈ‍ಶ್ವರಪ್ಪ, ಏನಿದು ಠೇವಣಿ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 4, 2024

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್‌? 16 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್‌? 16 ಮಾರ್ಚ್‌ 2026 – ಅಡಿಕೆ ಧಾರಣೆ

ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್‌ ಡಿಕ್ಕಿ, ಆಗಿದ್ದೇನು?

ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್‌ ಡಿಕ್ಕಿ, ಆಗಿದ್ದೇನು?

ಶಿವಮೊಗ್ಗದ ಇಂಜಿನಿಯರ್‌ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್‌ ಬಳಿ ಆಗಿದ್ದೇನು? ಕೇಸ್‌ ದಾಖಲು

ಶಿವಮೊಗ್ಗದ ಇಂಜಿನಿಯರ್‌ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್‌ ಬಳಿ ಆಗಿದ್ದೇನು? ಕೇಸ್‌ ದಾಖಲು

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

Leave a Comment