ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 15 JUNE 2024
SHIMOGA : ಚುನಾವಣೆಗೆ ಸಹಾಯ ಮಾಡಲಿಲ್ಲ ಎಂಬ ದ್ವೇಷಕ್ಕೆ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ (Life Term) ಮತ್ತು 23,500 ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 3 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಹೊಳೆಬೆನವಳ್ಳಿದೊಡ್ಡ ತಾಂಡಾದ ಕುಮಾರನಾಯ್ಕ(43) ಶಿಕ್ಷೆಗೆ ಗುರಿಯಾದವ. ಈತ 2017ರಲ್ಲಿ ತಾಂಡಾದಲ್ಲಿ ನಡೆದಿದ್ದ ಪಂಚಾಯಿತಿ ಚುನಾವಣೆಗೆ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಅದೇ ಗ್ರಾಮದ ಮಹೇಶ್‌ನಾಯ್ಕ (40) ಎಂಬಾತನ ಮೇಲೆ ಸಹಚರರೊಂದಿಗೆ ಸೇರಿ ಹಲ್ಲೆ ಮಾಡಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ನಾಯ್ಕ ಮೃತಪಟ್ಟಿದ್ದ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಶಿವಮೊಗ್ಗ ಗ್ರಾಮಾಂತರ ಸಿಪಿಐ ಲೋಕೇಶ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಅವರು ಕುಮಾರ ನಾಯ್ಕನಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಪುಷ್ಪಾವತಿ ವಾದ ಮಂಡಿಸಿದ್ದರು.
ಇದನ್ನೂ ಓದಿ – ವಿದ್ಯಾನಗರ ದರೋಡೆ ಕೇಸ್, ಲಲ್ಲಾಗೆ ಐದು ವರ್ಷ ಕಠಿಣ ಜೈಲು, 8 ಸಾವಿರ ಫೈನ್
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

- ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?

- ಶಿವಮೊಗ್ಗದ ಇಂಜಿನಿಯರ್‌ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್ ಬಳಿ ಆಗಿದ್ದೇನು? ಕೇಸ್ ದಾಖಲು

- ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















