ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 JULY 2024
SAGARA : ಶರಾವತಿ ಕಣಿವೆಯಲ್ಲಿ ಮಳೆ ಬಿರುಸು ಪಡೆದ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ (Jog Falls) ಜೀವ ಕಳೆ ಬಂದಿದೆ. ಭಾನುವಾರ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಲಪಾತ ವೀಕ್ಷಿಸಿದ್ದಾರೆ. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತದ ವೈಭವಕ್ಕೆ ಮನಸೋತಿದ್ದಾರೆ.
ಮಳೆ, ಮಂಜು ಮತ್ತು ಜಲಪಾತ
ಜೋಗದ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳು ಮೈದುಂಬಿಕೊಂಡಿವೆ. ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ಜಲಪಾತವನ್ನು ಸಾವಿರಾರು ಜನರು ಕಣ್ತುಂಬಿಕೊಂಡು, ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಫೋಟೊ ಸೆರೆ ಹಿಡಿದರು. ಆಗಾಗ ದಟ್ಟವಾಗಿ ಕವಿಯುತ್ತಿದ್ದ ಮಂಜಿನ ನಡುವೆ ಜಲಪಾತ ವೀಕ್ಷಿಸುವುದು ಪ್ರವಾಸಿಗರಿಗೆ ಖುಷಿ ನೀಡಿತು.

ಸಾವಿರ ಸಾವಿರ ಪ್ರವಾಸಿಗರು
ಕಳೆದ ಮೂರ್ನಾಲ್ಕು ದಿನದಿಂದ ಜೋಗ ಜಲಪಾತದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದೆ ಎಂದು ಹಳೆಯ ಫೋಟೊ, ವಿಡಿಯೋಗಳು ವೈರಲ್ ಆಗಿದ್ದವು. ಇದರ ಬೆನ್ನಿಗೆ ವೀಕೆಂಡ್ನಲ್ಲಿ ದೊಡ್ಡ ಸಂಖ್ಯೆಯ ಪ್ರವಾಸಿಗರು ಜೋಗಕ್ಕೆ ಆಗಮಿಸಿದ್ದರು. ಸುತ್ತಮುತ್ತಲ ಹೋಟೇಲ್ಗಳು, ಹೋಮ್ ಸ್ಟೇಗಳಿಗೆ ಡಿಮಾಂಡ್ ಹೆಚ್ಚಾಗಿದೆ. ಇನ್ನು ನೂರಾರು ಕಾರುಗಳು, ಸಾವಿರಾರು ಪ್ರವಾಸಿಗರು ಜೋಗಕ್ಕೆ ಆಗಮಿಸಿ ಜಲಪಾತದ ವೈಭವ ವೀಕ್ಷಿಸಿದರು.

ಮಳೆ ಮುಂದುವರೆದರೆ ಮುಂದಿನ ವೀಕೆಂಡ್ಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳದ ನಿರೀಕ್ಷೆ ಇದೆ.
ಇದನ್ನೂ ಓದಿ – ಭದ್ರಾ ಜಲಾಶಯ ಒಳ ಹರಿವು ಮತ್ತಷ್ಟು ಕುಸಿತ, ಇವತ್ತು ಎಷ್ಟು ನೀರು ಹರಿದು ಬರುತ್ತಿದೆ?
LATEST NEWS
- ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು















