ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಆರು ಕತ್ತೆಗಳ ಕಳ್ಳತನ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA NEWS, 8 OCTOBER 2024 : ತೋಟದಲ್ಲಿ ಕಟ್ಟಿದ್ದ ಆರು ಕತ್ತೆಗಳು (Donkeys) ಕಳ್ಳತನವಾಗಿವೆ. ಮಾಲೀಕರು ಬೆಳಗ್ಗೆ ತೋಟಕ್ಕೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಆರು ಕತ್ತೆಗಳು ನಾಪತ್ತೆ

ಮಿಳಘಟ್ಟದ ನಾಗರತ್ನ ಎಂಬುವವರು ಕತ್ತೆ ಸಾಕಾಣಿಕೆ ಮಾಡುತ್ತಿದ್ದಾರೆ. ತಮ್ಮ ಬಳಿ ಇದ್ದ ಆರು ಕತ್ತೆಗಳನ್ನು ಸಂತೆ ಕಡೂರಿನ ತೋಟವೊಂದರಲ್ಲಿ ಕಟ್ಟುತ್ತಿದ್ದರು. ಸೆ.27ರಂದು ರಾತ್ರಿ ತೋಟದಲ್ಲಿ ಕತ್ತೆಗಳನ್ನು ಕಟ್ಟಿ ಹಾಕಿ ಹೋಗಿದ್ದರು. ಮರುದಿನ ಬೆಳಗ್ಗೆ ತೋಟಕ್ಕೆ ಬಂದಾಗ ಕತ್ತೆಗಳು ನಾಪತ್ತೆಯಾಗಿದ್ದವು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ. 

sante kadur in Shimoga

ಇಬ್ಬರ ಮೇಲೆ ಅನುಮಾನ

ಶಿವಮೊಗ್ಗದ ಇಬ್ಬರು ಯುವಕರು ಸಂತೆ ಕಡೂರಿನಲ್ಲಿ ನಾಗರತ್ನ ಅವರು ಕತ್ತೆಗಳನ್ನು ಎಲ್ಲಿ ಕಟ್ಟುತ್ತಾರೆ ಎಂದು ಸ್ಥಳೀಯರಲ್ಲಿ ವಿಚಾರಿಸಿದ್ದರು. ಅವರೆ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ಸೆ.27ರ ರಾತ್ರಿ ಇಬ್ಬರು ಅಪರಿಚಿತರು ಕತ್ತೆಗಳನ್ನು ಕಟ್ಟಿದ್ದ ತೋಟದ ಸಮೀಪ ಓಡಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಈ ಹಿನ್ನೆಲ ಇಬ್ಬರ ವಿರುದ್ಧ ದೂರು ನೀಡಲಾಗಿದೆ.

90 ಸಾವಿರ ರೂ. ಮೌಲ್ಯದ ಆರು ಕತ್ತೆಗಳು ಕಳುವಾಗಿವೆ ಎಂದು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಶಿವಮೊಗ್ಗದ NESನಲ್ಲಿ ಶಿಕ್ಷಕ, ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

Leave a Comment