ದಿನ ಭವಿಷ್ಯ | 21 ಫೆಬ್ರವರಿ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ? ಸಮಸ್ಯೆಗಳಿಗೆ ಪರಿಹಾರವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಮೇಷ : ವಿವಾಹಕ್ಕೆ ಅನುಕೂಲ. ಅಧಿಕ ವ್ಯಯ. ಶತೃ ಬಾಧೆ. ಅನ್ಯರಿಂದ ಅನುಕೂಲ. ಮಿಶ್ರ ಫಲ. (Bhavishya)

ಪರಿಹಾರ : ತೊಗರಿಬೇಳೆ ಹೊಳಿಗೆ ನಾಗನಿಗೆ ಸಮರ್ಪಿಸಿ ಹಂಚಿ.

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

ವೃಷಭ : ಗುರುವು ಲಾಭ ಮಾಡಿದರೂ ಅದು ಅನ್ಯರ ಪಾಲು. ಸ್ನೇಹಿತರ ಸಂಬಂಧದಲ್ಲಿ ಹುಷಾರು. ಆಲಸ್ಯ ಬಿಡಿ. ಕಾರ್ಯದಲ್ಲಿ ಮುನ್ನುಗ್ಗಿ.

ಪರಿಹಾರ : ಆದಿತ್ಯಹೃದಯ ಓದಿ ಕೆಲಸದಲ್ಲಿ ಜಯವಾಗುತ್ತದೆ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

ಮಿಥುನ : ಅನಿಷ್ಟಕ್ಕೆ ನೀವೇ ಕಾರಣ ಎಂಬಂತೆ ಆಗಿದೆ. ಆದರೆ ಮಿತ್ರರ ಬಲದಿಂದ ತೊಂದರೆ ತಪ್ಪೀತು. ತಂದೆಯ ಆರೋಗ್ಯ ಕೆಟ್ಟೀತು. ಕುಟುಂಬದ ಬಗ್ಗೆ ಗಮನವಿರಲಿ.

ಪರಿಹಾರ : ಲಕ್ಷ್ಮೀನಾರಾಯಣ ದೇವರಿಗೆ ಪಂಚಾಮೃತ ಪೂಜೆ ಮಾಡಿಸಿ. ಶುಭವಿದೆ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

ಕರ್ಕ : ನಿಮ್ಮ ಯೋಚನೆಯಂತೆ ಹಣದ ಪ್ರಭಾವವಿಲ್ಲ. ಭ್ರಾತೃತ್ವದ ಕಡೆಯಿಂದ ನಷ್ಟ. ಮನಸ್ಸಿಗೆ ಚಿಂತೆ. ಉದ್ಯೋಗದಲ್ಲಿ ಉತ್ತಮ ಸ್ಥಿತಿಯೇ ನಿಮಗೆ ನೆಮ್ಮದಿ.

ಪರಿಹಾರ : ಈಶ್ವರನಿಗೆ ಹಾಲಿನ ಅಭಿಷೇಕ ಮಾಡಿ. ಕ್ಲೇಷ ದೂರವಾಗುತ್ತದೆ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

SANDESH-UPADHYA-DINA-BHAVISHYA-SHIMOGA

ಸಿಂಹ : ವಿವಾಹಕ್ಕೆ ತೊಂದರೆ. ಆಯಾಸ. ಆಲಸ್ಯ. ಬಂಧುಗಳಿಂದ ಖುಷಿ. ದೂರದ ಪ್ರಯಾಣ. ಈದಿನ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ.

ಪರಿಹಾರ : ಮಕ್ಕಳೊಂದಿಗೆ ದಿನ ಕಳೆಯಿರಿ. ಭಗವತಿಯ ಅನುಗ್ರಹವಿದೆ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

ಕನ್ಯಾ : ಶರೀರ ಬಾಧೆ ಎದ್ದು ಕಾಡುತ್ತಿದೆ. ಆರೋಗ್ಯದ ಮೇಲೆ ನಿಗಾ ಇರಲಿ. ವಿವಾಹಕ್ಕೆ ಅನುಕೂಲಕರ ದಿನವಲ್ಲ.

ಪರಿಹಾರ : ಕಡಲೇಬೇಳೆ ಪದಾರ್ಥ ಮಾಡಿ. ಎಲ್ಲರಿಗೂ ಹಂಚಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

Parishrama

ತುಲಾ : ಮನಸ್ಸಿಗೆ ನೋವು. ಹತ್ತಿರದವರೇ ಶತೃಗಳು. ಕೆಲಸದಲ್ಲಿ ಮುನ್ನಡೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಪರಿಹಾರ : ಅಶಕ್ತರಿಗೆ ದಾನ ಮಾಡಿ ಮನಸ್ಸಿಗೆ ಖುಷಿ ಸಿಗುತ್ತದೆ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

ವೃಶ್ಚಿಕ : ಅಷ್ಟಮದ ಬಾಧೆ ಎದ್ದು ಕಾಣುತ್ತದೆ. ಸ್ಥಿರಾಸ್ತಿಗೆ ಯೋಗ್ಯವಲ್ಲದ ದಿನ. ಮನಸ್ಸಿನಂತೆ ಕಾರ್ಯ ಸಾಧು. ದುಃಖದೊಂದಿಗೆ ಸುಖವೂ ಇದೆ.

ಪರಿಹಾರ : ಹಾಲನ್ನು ದಾನ ಮಾಡಿ. ಖುಷಿ ಸಿಗುತ್ತದೆ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

ಧನು : ಸಮಯದಂತೆ ನಿಮ್ಮ ಕಾರ್ಯ.. ನಿಮ್ಮನ್ನು  ನಂಬುವುದು ಕಷ್ಟ  ಎನ್ನುವ ಜನರು..  ಯಾರೊಂದಿಗೂ ಮಾತು ಬೇಡ..  ತೊಂದರೆ ಆದೀತು..

ಪರಿಹಾರ : ಸದ್ಗುರುಗಳಿಗೆ ವಸ್ತ್ರ ಸಮರ್ಪಿಸಿ. ಪಾಪ ಪರಿಹಾರವಾಗುತ್ತದೆ.

ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

NATIONAL-PUBLIC-SCHOOL-scaled

ಮಕರ : ಅನಾಯಸವಾಗಿ ಆಗಮಿಸುವ ಹಣ. ನಿಮ್ಮ ಕಷ್ಟ ಪರಿಹರಿಸುತ್ತದೆ. ನಿಮ್ಮ ಸುಖದ ದಿನ ಇಂದು. ಎಲ್ಲರೊಂದಿಗೂ ಸೇರುವ ದಿನ.

ಪರಿಹಾರ : ದೇವರ ಆರಾಧನೆಯೇ ನಿಮ್ಮ  ಎಲ್ಲ ಕೆಲಸಕ್ಕೂ ದಾರಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

ಕುಂಭ : ನಿಮ್ಮ ಯೋಜನೆಯಂತೆ ಇರಿ. ಯಾರಿಗೂ ನಷ್ಟವಿಲ್ಲ. ಹಣ ಅಬಾಧಿತ. ಸಂಬಂಧಿಕರ ಆಗಮನ. ವೃಥಾ ತಿರುಗಾಟ. ಕೆಲಸದಲ್ಲಿ ತೇರ್ಗಡೆ.

ಪರಿಹಾರ : ನಿಮ್ಮ ಖುಷಿಯಂತೆ ನಿಮ್ಮ ಇಷ್ಟಮಿತ್ರರಿಗೆ ಆಹ್ರ ದಾನ ಮಾಡಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

ಮೀನ : ಸಿಟ್ಟು ಬಿಡಿ. ಅನುಮಾನ ಬೇಡ. ಒಂಟಿಯಾಗುವ ಸಂಭವ. ಕೆಟ್ಟ ಯೋಚನೆ ಕೆಟ್ಟ ಫಲವೇ ನಿಮಗೆ. ಕುಟುಂಬದಲ್ಲಿ ಸಹನೆಯಿರಲಿ.

ಪರಿಹಾರ : ಗೋ ಪೂಜೆ ಮಾಡಿ ಸತ್ಕರಿಸಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ತಾಳಗುಪ್ಪ, ಶಿವಮೊಗ್ಗ, ಭದ್ರಾವತಿ : ದಿನ ಎಷ್ಟು ರೈಲು, ಯಾವ್ಯಾವ ಟೈಮ್‌ಗೆ ಹೊರಡುತ್ತವೆ? ಇಲ್ಲಿದೆ ಲಿಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment