ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ (Cylinder) ಸ್ಪೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಸ್ಪೋಟದ ಶಬ್ದಕ್ಕೆ ನೆರೆಹೊರೆಯ ನಿವಾಸಿಗಳು ಅಂತಕಕ್ಕೀಡಾಗಿದ್ದಾರೆ.
ಇದನ್ನೂ ಓದಿ » ಮಿನಿಸ್ಟರ್ ವಿಡಿಯೋ ತಿರುಚಿದ್ದಕ್ಕೆ ಆಕ್ರೋಶ, ಸಿಗಂದೂರು ಚೌಡೇಶ್ವರಿದೇವಿ ಭಕ್ತ ಮಂಡಳಿಯಿಂದ ದೂರು
ಶಿವಮೊಗ್ಗದ ಶರಾವತಿ ನಗರದ 1ನೇ ಅಡ್ಡರಸ್ತೆಯ ಸುನ್ನಿ ಮಾಸ್ಜಿದ್ ಏ ಶೆಹ್ಜಾದಿ ಅಸ್ಗರ್ ಮಸೀದಿ ಪಕ್ಕದ ಓಣಿಯಲ್ಲಿದ್ದ ಪೀರಾನ್ ಸಾಬ್ ಎಂಬುವವರ ಮನೆಯಲ್ಲಿ ಇಂದು ಸಂಜೆ ಸಿಲಿಂಡರ್ ಸ್ಪೋಟಗೊಂಡಿದೆ.

ಮನೆಯಲ್ಲಿದ್ದ ಎಂ.ಬಿ.ಪೀರಾನ್ ಸಾಬ್, ಅವರ ಪತ್ನಿ ಸಾಹೇರಾ, ಸೊಸೆ ಜಯೇಬಾ ಗಾಯಗೊಂಡಿದ್ದಾರೆ. ಕೂಡಲೆ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮನೆಯ ಛಾವಣಿ ಹಾರಿ ಹೋಗಿದೆ. ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ.
ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

LATEST NEWS
- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 18 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

About The Editor
ನಿತಿನ್ ಆರ್.ಕೈದೊಟ್ಲು















