ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಜೋರು ಮಳೆಯಾಗುತ್ತಿದೆ. ಭಾನುವಾರ ಮಳೆ ಪ್ರಮಾಣ ತಗ್ಗಿದೆ. ಆದರೆ ಮೇಲ್ಮೈ ಗಾಳಿ ರಭಸ ಜೋರಾಗಿದೆ. ಇದರಿಂದ ಹಲವೆಡೆ ಹಾನಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್ ಅಪ್‌ಡೇಟ್ (Shimoga Rain).
ರೈಲ್ವೆ ಹಳಿ ಮೇಲೆ ಬಿದ್ದ ಮರ
ಶಿವಮೊಗ್ಗ: ಶಿವಮೊಗ್ಗ – ಭದ್ರಾವತಿ ಮಧ್ಯೆ ಕೊಪ್ಪದಾಳು ಬಳಿ ಭಾರಿ ಗಾಳಿಗೆ ಮರ ಉರುಳಿ ರೈಲ್ವೆ ಮಾರ್ಗದ ಮೇಲೆ ಬಿದ್ದಿತ್ತು. ಇದರಿಂದ ಶಿವಮೊಗ್ಗದಿಂದ ಯಶವಂತಪುರಕ್ಕೆ ತೆರಳುವ ರೈಲು 2 ಗಂಟೆ ವಿಳಂಬವಾಗಿತ್ತು. ಯಶವಂತಪುರದಿಂದ ಶಿವಮೊಗ್ಗಕ್ಕೆ ಅಗಮಿಸುವ ರೈಲು 1.20 ಗಂಟೆ ವಿಳಂಬವಾಗಿತ್ತು. ಮರ ಬಿದ್ದಿದ್ದರಿಂದ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿತ್ತು. ರೈಲ್ವೆ ಇಲಾಖೆ ಸಿಬ್ಬಂದಿ ಅದನ್ನು ಸರಿಪಡಿಸಿ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ ಸೇರಿ 7 ಜಿಲ್ಲೆಗಳಿಗೆ ಇವತ್ತು ಅಲರ್ಟ್, ಹೇಗಿರುತ್ತೆ ಇವತ್ತು ಮಳೆ? ಎಷ್ಟಿರುತ್ತೆ ತಾಪಮಾನ?
ಬಾಳೆಬರೆ ಘಾಟಿಯಲ್ಲಿ ಧರೆ ಕುಸಿತ
ಹೊಸನಗರ: ಬಾಳೆಬರೆ ಘಾಟಿಯಲ್ಲಿ ಧರೆ ಕುಸಿದಿತ್ತು. ರಸ್ತೆ ಮೇಲೆ ಮಣ್ಣ ಬಿದ್ದಿದ್ದರಿಂದ ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು. ಘಾಟಿಯಲ್ಲಿ ಮತ್ತಷ್ಟು ಧರೆ ಕುಸಿಯುವ ಆತಂಕವಿದೆ. ಸದ್ಯ ಮಣ್ಣು ತೆರವು ಮಾಡಲಾಗಿದ್ದು, ವಾಹನ ಸಂಚಾರ ಪುನಾರಂಭವಾಗಿದೆ.
ಮರ ಬಿದ್ದು ವಿದ್ಯುತ್ ಕಡಿತ
ಶಿವಮೊಗ್ಗ: ಗೋಪಾಲಗೌಡ ಬಡಾವಣೆ ಬಿ ಬ್ಲಾಕ್‌ನಲ್ಲಿ ಮರ ಧರೆಗುರುಳಿದೆ. ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಮೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಯುವತಿ ಇದ್ದ ಆಂಬುಲೆನ್ಸ್‌ಗೆ ಜೀರೋ ಟ್ರಾಫಿಕ್, ವಿಮಾನ ನಿಲ್ದಾಣದಿಂದ ಮುಂಬೈಗೆ ಶಿಫ್ಟ್
ಯಡೇಹಳ್ಳಿಯಲ್ಲಿ ಮನೆ ಗೋಡೆ ಕುಸಿತ
ಹೊಳೆಹೊನ್ನೂರು: ಯಡೇಹಳ್ಳಿ ಗ್ರಾಮದಲ್ಲಿನ ನಿವೃತ್ತ ಶಿಕ್ಷಕ ಅಲಗಾಚಾರ್ ಅವರ ಮನೆ ಗೋಡೆ ಕುಸಿದಿದೆ. ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. (Shimoga Rain)
ಮರ ಉರುಳಿ ಹಾನಿ, ಧರೆ ಕುಸಿತ
ಹೊಸನಗರ: ನಗರ ಹೋಬಳಿಯ ಮೂಡುಗೊಪ್ಪದಲ್ಲಿ ಮರ ಧರೆಗುರುಳಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ವಿನಾಯಕ ಎಂಬುವವರ ಅಡಿಕೆ ತೋಟಕ್ಕು ಹಾನಿಯಾಗಿದೆ. ನಿಟ್ಟೂರು ಬಳಿ ಜಾಲ ಗ್ರಾಮದಲ್ಲಿ ಮರ ಉರುಳಿ ಶಾರದಮ್ಮ ಎಂಬುವವರ ಮನೆಗೆ ಹಾನಿಯಾಗಿದೆ. ನಗರ ಸಮೀಪದ ಬಸವನಬ್ಯಾಣ ಗ್ರಾಮದಲ್ಲಿ ಧರೆ ಕುಸಿತುಅಡಿಕೆ ತೋಟಕ್ಕೆ ಹಾನಿಯಾಗಿದೆ.
ಕಂಬಗಳಿಗೆ ಹಾನಿ, ವಿದ್ಯುತ್ ಕಡಿತ
ಹೊಸನಗರ: ಹೊಸನಗರ ತಾಲೂಕಿನಾದ್ಯಂತ 118ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಹಲವೆಡೆ ಕಳೆದ ಎರಡು ದಿನದಿಂದ ವಿದ್ಯುತ್ ವ್ಯತ್ಯಯವಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಸ್ಥಳಿಯರು ಸಂಕಷ್ಟಕ್ಕೀಡಾಗಿದ್ದಾರೆ. (Shimoga Rain)
ಭದ್ರಾವತಿಯಲ್ಲಿ ಸೇತುವೆ ಮುಳುಗಡೆ
ಭದ್ರಾವತಿ: ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ಹೊಸ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದ್ದರಿಂದ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸೇತುವೆಯ ಎರಡು ಬದಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಭದ್ರಾ ನದಿಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದ್ದರಿಂದ ನೆರೆ ಭೀತಿ ಎದುರಾಗಿದೆ.

ಕೆರೆ ಕೋಡಿಗೆ ಬಿದ್ದು ಹೋರಿ ಸಾವು
ಸೊರಬ: ಗಾಳಿ, ಮಳೆಗೆ ಕ್ಯಾಸನೂರು ಗ್ರಾಮದಲ್ಲಿ ಮರ ಬಿದ್ದು ವಾಸಪ್ಪ ಎಂಬುವವರ ಮನೆಗೆ ಹಾನಿಯಾಗಿದೆ. ಹೊಳೆಜೋಳದಗುಡ್ಡದಲ್ಲಿ ಮಹಾದೇವಪ್ಪ ಅವರಿಗೆ ಸೇರಿದ ಕೊಟ್ಟಿಗೆಯ ಗೋಡೆ ಕುಸಿದಿದೆ. ಮೂಗೂರು ಗ್ರಾಮದ ಬೆನಕಪ್ಪ ಅವರ ಮನೆ, ಕಾತುವಳ್ಳಿಯ ನಾಗಪ್ಪ ಅವರ ಕೊಟ್ಟಿಗೆ ಕುಸಿದಿದೆ. ಚಂದ್ರಗುತ್ತಿ ಹೋಬಳಿಯ ಕಮರೂರು ಗ್ರಾಮದಲ್ಲಿ ಹೋರಿಯೊಂದು ಕೆರೆ ಕೋಡಿಗೆ ಬಿದ್ದು ಸಾವನ್ನಪ್ಪಿದೆ.
Shimoga Rain Report
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















