ಶಿವಮೊಗ್ಗ: ಜೀ ಕನ್ನಡ ವಾಹಿನಿಯ ನಾವು ನಮ್ಮವರು ಕಾರ್ಯಕ್ರಮದಲ್ಲಿ (programme) ಶಿವಮೊಗ್ಗ ಜಿಲ್ಲೆಯ ದಂಪತಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಇತರೆ ಸ್ಪರ್ಧಿಗಳ ಜೊತೆಗೆ ಪೈಪೋಟಿಯ ಜೊತೆಗೆ ಮಲೆನಾಡಿನ ಸಂಸ್ಕೃತಿ, ಶಿವಮೊಗ್ಗ ಜಿಲ್ಲೆಯ ಪರಿಸರದ ಕತೆಯನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ನಟಿ ಪ್ರಿಯಾ ಕೆಸರೆ, ವಕೀಲ ಶಿವರಾಂ.ಬಿ.ಆರ್ ದಂಪತಿ ‘ನಾವು ನಮ್ಮವರುʼ ಕಾರ್ಯಕ್ರಮದಲ್ಲಿ ಕಳೆದ ಒಂದು ತಿಂಗಳಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಿಯಾ ಕೆಸರೆ ಮೂಲತಃ ಸಾಗರ ತಾಲೂಕಿನವರು. ರಂಗಭೂಮಿ ಕಲಾವಿದೆ. ಸಾಗರದ ಎಲ್.ಬಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಆ ಬಳಿಕ ಹಲವು ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿನ ಅದ್ಭುತ ಅಭಿಯನಕ್ಕೆ ಹಲವು ಪ್ರಶಸ್ತಿ ಇವರನ್ನು ಅರಸಿ ಬಂದಿವೆ.
ಇನ್ನು, ಹೈಕೋರ್ಟ್ ವಕೀಲ ಶಿವರಾಮ್.ಬಿ.ಆರ್ ಅವರ ಮೂಲ ಶಿಕಾರಿಪುರ. ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ಬೆಂಗಳೂರಿನಲ್ಲಿ ವಕೀಲಿ ವೃತ್ತಿಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹಲವು ರೈತರಿಗೆ ಅರಣ್ಯ ಇಲಾಖೆ ನೀಡಿದ ನೊಟೀಸ್ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹಲವು ರೈತರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
View this post on Instagram
ನಾವು ನಮ್ಮವರು ಕಾರ್ಯಕ್ರಮದಲ್ಲಿ
ಶಿವರಾಮ್ ಮತ್ತು ಪ್ರಿಯಾ ದಂಪತಿ ನಾವು ನಮ್ಮವರು ಕಾರ್ಯಕ್ರಮಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಎಪಿಸೋಡಿನಲ್ಲಿಯು ಮಲೆನಾಡು ಮತ್ತು ಶಿವಮೊಗ್ಗ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.
View this post on Instagram
ಶಿವಮೊಗ್ಗ ಜಿಲ್ಲೆಯ ದಂಪತಿಯನ್ನು ಬೆಂಬಲಿಸಲು SHPR ಎಂದು SMS ಟೈಪ್ ಮಾಡಿ 57575ಗೆ ಕಳುಹಿಸಬೇಕಿದೆ ಎಂದು ದಂಪತಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ » 17 ಗಂಟೆಯ ಅದ್ಧೂರಿ ಮೆರವಣಿಗೆ ಬಳಿಕ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆ
zee kannada programme
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






