ತನಿಷ್ಕಾಳ ಮೆಸೇಜ್‌ ನಂಬಿ ₹1.06 ಕೋಟಿ ಕಳೆದುಕೊಂಡ ವ್ಯಕ್ತಿ, ಏನಿದು ಕೇಸ್‌?

ಶಿವಮೊಗ್ಗ: ಟ್ರೇಡಿಂಗ್‌ (Trading) ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ₹1.06 ಕೋಟಿ ವಂಚಿಸಲಾಗಿದೆ.

ಹೇಗಾಯ್ತು ವಂಚನೆ?

ಶಿವಮೊಗ್ಗ ಜಿಲ್ಲೆಯ (ಹೆಸರು, ಊರು ಗೌಪ್ಯ) ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ ಟ್ರೇಡಿಂಗ್‌ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿ ವಾಟ್ಸಪ್‌ ಗ್ರೂಪ್‌ಗೆ ಸೇರುವಂತೆ ಲಿಂಕ್‌ ಕಳುಹಿಸಿದ್ದ. ವಾಟ್ಸಪ್‌ ಗ್ರೂಪ್‌ನಲ್ಲಿ ತನಿಷ್ಕಾ ಸನ್ಯಾಮ್‌ ಎಂದು ಪರಿಚಯ ಮಾಡಿಕೊಂಡು, ಟ್ರೇಡಿಂಗ್‌ ಮಾಡುವ ಮೊಬೈಲ್ ಆಪ್‌ ಲಿಂಕ್‌ ಕಳುಹಿಸಿದ್ದರು. ಅದರಲ್ಲಿ ಪೂರ್ಣ ವಿವರ ದಾಖಲಿಸುವಂತೆ ತಿಳಿಸಿದ್ದರು. ಅಂತೆಯೇ ಶಿವಮೊಗ್ಗದ ವ್ಯಕ್ತಿ ಸಂಪೂರ್ಣ ಮಾಹಿತಿ ದಾಖಲಿಸಿದ್ದರು.

ಕೊನೆಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ‌ ಶಿವಮೊಗ್ಗದ ವ್ಯಕ್ತಿಯಿಂದ ಹಂತ ಹಂತವಾಗಿ ₹1.06 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೊನೆಗೆ ಲಾಭಾಂಶದ ಹಣ ಮರಳಿಸುವಂತೆ ಕೇಳಿದಾಗ ವಿವಿಧ ಟ್ಯಾಕ್ಸ್‌ಗಳ ನೆಪ ಹೇಳಿದ್ದು, ಶಿವಮೊಗ್ಗದ ವ್ಯಕ್ತಿಗೆ ಅನುಮಾನ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

JNNCE-Admission-Advt-scaled

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮುಗಿಬಿದ್ದು ಫೈನ್‌ ಕಟ್ಟಿದ ಜನ, ಕೊನೆ ದಿನ ಸಂಗ್ರಹವಾಯ್ತು ₹50 ಲಕ್ಷ ದಂಡ, ಒಟ್ಟು ಎಷ್ಟಾಗಿದೆ?

Prashanth-Loan-Advertisement.

Trading Scam 

Online-Fraud-Case-image

Leave a Comment