ಶಿವಮೊಗ್ಗ: ನಶೆ ಮುಕ್ತ ಭಾರತಕ್ಕಾಗಿ ಸೆ.21ರಂದು ದೇಶದ 100 ನಗರಗಳಲ್ಲಿ ನಮೋ ಯುವ ರನ್ ಮ್ಯಾರಾಥಾನ್ ನಡೆಯಲಿದೆ. ಅಂದು ಬೆಳಗ್ಗೆ 6.30ಕ್ಕೆ ಶಿವಮೊಗ್ಗ ನಗರದಲ್ಲಿಯು ಮ್ಯಾರಥಾನ್ (Marathon) ನಡೆಯಲಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ತಿಳಿಸಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಶಾಂತ್ ಕುಕ್ಕೆ, ಅಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 7ಕ್ಕೆ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ಈ ಮ್ಯಾರಥಾನ್ ಗಿನ್ನಿಸ್ ದಾಖಲೆಗೆ ಸೇರಲಿದೆ ಎಂದು ತಿಳಿಸಿದರು.
ಶಿವಮೊಗ್ಗದ ಶಿವಮೂರ್ತಿ ಸರ್ಕಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ವಯೋಮಿತಿ ಆಧಾರದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಆರು ಪ್ರತ್ಯೇಕ ವಿಭಾಗ ಮಾಡಲಾಗಿದೆ. 3.5 ಕಿ.ಮೀ ಮ್ಯಾರಥಾನ್ ಇರಲಿದೆ. ಈಗಾಗಲೇ ಕ್ಯೂಆರ್ ಕೋಡ್ ಬಳಸಿ 4700 ಮಂದಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್ ಅಂತಿದ್ದಾರೆ ಜನ, ಏನಿದು ಅಭಿಯಾನ?
ಉಚಿತ ನೋಂದಣಿ ಇದ್ದು ಮಾಹಿತಿ ಮತ್ತು ನೋಂದಣಿಗಾಗಿ ಧ್ರುವಕುಮಾರ್ 96113 12971, ಸಂಜಯ್ ಕುಮಾರ್ 99802 99905, ರಾಹುಲ್ ಬಿದರೆ 80953 37876ರಲ್ಲಿ ಸಂಪರ್ಕಿಸಬಹುದು. ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಹುಲ್ ಬಿದರೆ, ದರ್ಶನ್, ಅಭಿ, ಅರುಣ್ ಕುಗ್ವೆ, ಧ್ರುವಕುಮಾರ್ ಇದ್ದರು.

#news, #Shivamogga, #marathon, #Namo Yuva Run, #drug free India, #race, #public event, #fitness, #youth, #Guinness World Record, #BY Vijayendra.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





