ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.22ರಿಂದ ಅ.1ರವರೆಗೆ ಶರನ್ನವರಾತ್ರ್ಯೋತ್ಸವ (Navaratri) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿ ದಿನ ಹೋಮ, ಪೂಜಾ ಕೈಂಕರ್ಯಗಳು ನಡೆಯಲಿವೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾದ್ಯಾಯ, ಈ ಭಾರಿ ಶೈಲಪುತ್ರಿ ಅವತಾರದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಶಿಲ್ಪಿ ಪ್ರವೀಣ್ ಕವೇಡ್ಕರ್ ಅವರು ಮೂರ್ತಿಯನ್ನು ಸಿದ್ದಪಡಿಸಿದ್ದಾರೆ. ಸೆ.22ರಂದು ಸಂಜೆ 6 ಗಂಟೆಗೆ ನ್ಯಾಯಾಧೀಶರಾದ ಎಂ.ಎಸ್.ಸಂತೋಷ್ ಕುಮಾರ್ ಅವರು ಶರನ್ನವರಾತ್ರ್ಯೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ನಗರದ ವಿವಿಧ ಭಜನಾ ಮಂಡಳಿಗಳಿಂದ ಪ್ರತಿದಿನ ಸಂಜೆ 5.30ರಿಂದ ಭಜನೆ ಇರಲಿದೆ. ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಚಕ ಸಂದೇಶ ಉಪಾದ್ಯಾಯ ತಿಳಿಸಿದರು.
ಯಾವ್ಯಾವ ದಿನ ಏನೇನು ಕಾರ್ಯಕ್ರಮ?
ಸೆ.22ರಂದು ಅನುಶ್ರೀ ಅರ್ಪಿತ್ ಅಗಜೆ ಸಂಗೀತಾ ವಿದ್ಯಾಲಯದಿಂದ ಸಂಗೀತ ಕಾರ್ಯಕ್ರಮ, ಸೆ.23ರಂದು ಶೃಂಗೇರಿಯ ಭಗವತಿ ಆರ್ಟ್ ಸೆಂಟರ್ ವತಿಯಿಂದ ಭರತನಾಟ್ಯ, ಸೆ.24ರಂದು ಪುಷ್ಪಾ ಕೃಷ್ಣಮೂರ್ತಿ ಅವರಿಂದ ಭರತನಾಟ್ಯ, ಸೆ.25ರಂದು ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದಿಂದ ನವ ದುರ್ಗ ವೈಭವ ನೃತ್ಯ ರೂಪಕ, ಸೆ.26ರಂದು ಮಯೂರಿ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್ ಅಂತಿದ್ದಾರೆ ಜನ, ಏನಿದು ಅಭಿಯಾನ?
ಸೆ.27ರಂದು ಸದ್ಯೋಜಾತ ಗುರುಕುಲದ ಮಕ್ಕಳಿಂದ ದೇವಿ ಕೃತಿಗಳ ಗಾಯನ ಸ್ತೋತಗಳ ಪಠಣ, ಸೆ.28ರಂದು ಪೂಜಾರ್ ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ಹಿಂದೂಸ್ಥಾನಿ ಸಂಗೀತ, ಸೌಮ್ಯಾ ಪ್ರವೀಣ್ ತಂಡದಿಂದ ಕಥಕ್ ನೃತ್ಯ, ಸೆ.29ರಂದು ಆರ್ಟ್ ಆಫ್ ಲಿವಿಂಗ್ ವತಿಯಿಂದ ಸತ್ಸಂಗ, ಶಬರೀಶ್ ಕಣ್ಣನ್ ತಂಡದಿಂದ ಸಾಮೂಹಿಕ ಗಾನ ಧ್ಯಾನ ಜ್ಞಾನ ಕಾರ್ಯಕ್ರಮ, ಸೆ.30ರಂದು ಯಕ್ಷ ಸಂವರ್ಧನ ತಂಡದಿಂದ ಯಕ್ಷಗಾನ, ಅ.1ರಂದು ಮಹಿಳೆಯರಿಂದ ನಾಟಕ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಅಧ್ಯಕ್ಷ ಹೆಚ್.ರಾಮಲಿಂಗಪ್ಪ, ಕಾರ್ಯದರ್ಶಿ ಕೆ.ಎ.ರಮೇಶ್ ಇದ್ದರು.

#news, #Shivamogga, #Navaratri, #Sharannavaratri, #festival, #temple, #Hindu festival, #cultural events, #puja, #bhajans, #celebrations.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





