ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ (Zoo) ನೂತನ ಸದಸ್ಯರ ಆಗಮನವಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದಾಗಿನಿಂದ ಕ್ವಾರಂಟೈನ್‌ನಲ್ಲಿದ್ದ ಪ್ರಾಣಿಗಳು ಈಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಧಿಕಾರಿಗಳು ಫೋಟೊ ರಿಲೀಸ್‌ ಮಾಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದೇ ಮೊದಲ ಬಾರಿ ಶಿವಮೊಗ್ಗದ ಮೃಗಾಲಯಕ್ಕೆ ಬಿಳಿ ಹುಲಿ ಆಗಮನವಾಗಿದೆ. ಇನ್ನು, ಇದೇ ಮೊದಲ ಬಾರಿ ಹೊರ ರಾಜ್ಯದಿಂದ ಹುಲಿ, ಸಿಂಹಗಳನ್ನು ತರಿಸಲಾಗಿದೆ.

ಯಾವೆಲ್ಲ ಪ್ರಾಣಿಗಳು ಬಂದಿವೆ? ಇಲ್ಲಿದೆ ಫೋಟೊ ಮಾಹಿತಿ

» ಬಿಳಿ ಹುಲಿ

ಶಿವಮೊಗ್ಗ ಮೃಗಾಲಯಕ್ಕೆ ಇದೆ ಮೊದಲ ಬಾರಿ ಬಿಳಿ ಹುಲಿ ಆಗಮನವಾಗಿದೆ. ಔರಂಗಾಬಾದ್‌ ಮೃಗಾಲಯದಿಂದ 2 ವರ್ಷದ ವಿಕ್ರಂ ಹುಲಿ ತರಿಸಲಾಗಿದೆ. ಇಲ್ಲಿದೆ ಫೋಟೊ

White Tiger To Shimoga Zoo

» ಮೂರು ಬಂಗಾಳ ಹುಲಿಗಳು

ತ್ಯಾವರೆಕೊಪ್ಪ ಸಫಾರಿಗೆ ಮೂರು ಬಂಗಾಳ ಹುಲಿಗಳು ಆಗಮಿಸಿವೆ. ಔರಂಗಾಬಾದ್‌ ಸಫಾರಿಯಿಂದ ಎರಡು ಹೆಣ್ಣು ಹುಲಿಗಳು 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ, ಇಂದೋರ್‌ ಮೃಗಾಲಯದಿಂದ 3 ವರ್ಷ ಭದ್ರಾ ಆಗಮಿಸಿದೆ. ಇಲ್ಲಿದೆ ಫೋಟೊ

Bengal Tiger To Shimoga Zoo

» ಎರಡು ಸಿಂಹಗಳು

ಇಂದೋರ್‌ ಮೃಗಾಲಯದಿಂದ ಎರಡು ಸಿಂಹಗಳು ಆಗಮಿಸಿವೆ. 2 ವರ್ಷದ ಸಿಂಹ ಶಿವ, 2 ವರ್ಷದ ಸಿಂಹಿಣಿ ಸಾರಾ ಆಗಮಿಸಿವೆ. ಇಲ್ಲಿದೆ ಫೋಟೊ

Lions to Shimoga Zoo

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಹಲವು ಸಬ್‌ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ಟ್ರಾನ್ಸ್‌ಫರ್‌ ಆಗಿದ್ದಾರೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment