ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ನಮ್ ಟೀಮ್ ವತಿಯಿಂದ ಎರಡು ದಿನ ನೀನಾಸಂ ನಾಟಕೋತ್ಸವ (Drama Festival) ಆಯೋಜಿಸಲಾಗಿದೆ ಎಂದು ನಮ್ ಟೀಮ್ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಚಂದ್ರಶೇಖರ್, ಅಕ್ಟೋಬರ್ 8 ಮತ್ತು 9ರಂದು ಸಂಜೆ 7 ಗಂಟೆಗೆ ನಾಟಕ ಆಯೋಜಿಸಲಾಗಿದೆ ಎಂದರು.
ಅಕ್ಟೋಬರ್ 8: ಬಾನುಮುಸ್ತಾಕ್ ಅವರ ಕಥೆ ಆಧಾರಿತ ‘ಹೃದಯದ ತೀರ್ಪುʼ ನಾಟಕ ಪ್ರದರ್ಶನವಾಗಲಿದೆ. ಡಾ. ಎಂ.ಗಣೇಶ್ ಅವರ ರಂಗರೂಪ ಮತ್ತು ನಿರ್ದೇಶನ ಮಾಡಲಿದ್ದಾರೆ.
ಅಕ್ಟೋಬರ್ 9: ಜಿ.ಶಂಕರ್ ಅವರ ‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನವಾಗಲಿದೆ. ಶಂಕರ್ ವೆಂಕಟೇಶ್ವರನ್ ನಿರ್ದೇಶನ ಮಾಡಲಿದ್ದಾರೆ.

ಯಾವುದೆ ಸಭಾ ಕಾರ್ಯಕ್ರಮ ಇರುವುದಿಲ್ಲ. ಪ್ರತಿ ನಾಟಕಕ್ಕೆ ಒಬ್ಬರಿಗೆ ₹50 ಪ್ರವೇಶ ದರ ನಿಗದಿಪಡಿಸಾಗಿದೆ. ಹೆಚ್ಚಿನ ಮಾಹಿತಿಗೆ 9108237446 ಸಂಪರ್ಕಿಸಬಹುದು ಎಂದು ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಮ್ ಟೀಮ್ನ ಖಜಾಂಚಿ ಸಮನ್ವಯ ಕಾಶಿ, ಸದಸ್ಯೆ ನಂದಿನಿ ಸಾಗರ ಇದ್ದರು.
ಇದನ್ನೂ ಓದಿ » ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?
Drama Festival
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು















