ಕಾರಿನಲ್ಲಿ ಬಂದು ಹೊಟೇಲ್‌ನಲ್ಲಿ ಊಟ ಕೇಳಿ ಮಾಲೀಕನತ್ತ ಮಚ್ಚು ಬೀಸಿದ ವ್ಯಕ್ತಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಭದ್ರಾವತಿ: ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹೊಟೇಲ್‌ (Hotel) ಮಾಲೀಕನತ್ತ ಮಚ್ಚು ಬೀಸಿದ್ದಾನೆ. ಆದೃಷ್ಟವಶಾತ್‌ ಹೊಟೇಲ್‌ ಮಾಲೀಕ ಪಾರಾಗಿದ್ದಾರೆ. ಭದ್ರಾವತಿಯ ವೀರಶೈವ ಸಭಾಭವನದ ಸಮೀಪ ರಾಮಾವರಂ ಹೊಟೇಲ್‌ನಲ್ಲಿ ಘಟನೆ ನಡೆದಿದೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ರಾತ್ರಿ 10 ಗಂಟೆ ಹೊತ್ತಿಗೆ ಹೊಟೇಲ್‌ ಬಂದ್‌ ಮಾಡುವಾಗ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಬಂದಿದ್ದ. ಊಟ ಕೊಡುವಂತೆ ಕೇಳಿದ್ದ. ಹೊಟೇಲ್‌ ಬಂದ್‌ ಮಾಡುತ್ತಿರುವುದರಿಂದ ಊಟವಿಲ್ಲ ಎಂದು ಮಾಲೀಕ ರವೀಂದ್ರ ತಿಳಿಸಿದ್ದರು. ಹೊಟೇಲ್‌ ಬಾಗಿಲು ಹಾಕಿ ಮಾಲೀಕ ರವೀಂದ್ರ ಹೊರಗೆ ತೆರಳುತ್ತಿದ್ದಂತೆ ಅಲ್ಲಿಯೇ ಇದ್ದ ವ್ಯಕ್ತಿ ಏಕಾಏಕಿ ಮಚ್ಚು ಬೀಸಿದ್ದಾನೆ. ರವೀಂದ್ರ ಪಾರಾಗಿದ್ದು ಕೆಳಗೆ ಬಿದ್ದಿದ್ದಾರೆ.

ಹೊಟೇಲ್‌ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಆಗ ಮಚ್ಚು ಹಿಡಿದುಕೊಂಡಿದ್ದ ವ್ಯಕ್ತಿ ಕಾರಿನಲ್ಲಿ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ‘ಕರಿ ಟೋಪಿ, ಗಣವೇಷವೇ ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯಲಿದೆʼ

Hotel

Leave a Comment