ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

Published On : ಫೆಬ್ರವರಿ 17, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಫೆಬ್ರವರಿ 24ರಿಂದ ಐದು ದಿನ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು (Kote Marikamba Jatre) ವೈಭವದಿಂದ ನಡೆಯಲಿದೆ. ಈ ಬಾರಿ ದೇವಿಗೆ ಚಿನ್ನದ ಮುಖವಾಡ, ಗರ್ಭಗುಡಿಗೆ ಬೆಳ್ಳಿ ಬಾಗಿಲು ಅರ್ಪಿಸಲಾಗುತ್ತಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌, ಫೆ.24ರಂದು ತವರುಮನೆ ಗಾಂಧಿ ಬಜಾರ್‌ನಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

m3

ಸಮಿತಿಯವರು ಏನೆಲ್ಲ ಹೇಳಿದರು? ಇಲ್ಲಿದೆ ಪ್ರಮುಖಾಂಶ

1ಗಾಂಧಿ ಬಜಾರ್‌ನಲ್ಲಿ ಜರ್ಮನ್‌ ಟೆಂಟ್‌ ಹಾಕಲಾಗುತ್ತದೆ. ಯಾವುದೆ ಗೊಂದಲ ಇಲ್ಲದೆ ಭಕ್ತರು ದೇವಿಯ ದರ್ಶನ ಪಡೆದು ಹೋಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರಿಗೆ ಪಾನಕ, ನೀರು, ಮಜ್ಜಿಗೆ, ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಶಿವಪ್ಪನಾಯಕ ಪ್ರತಿಮೆಯಿಂದ ಕರ್ನಾಟಕ ಸಂಘದವರೆಗೆ ಪೆಂಡಾಲ್‌ ಹಾಕಲಾಗುತ್ತದೆ.

2ಬೆಳಗಿವ ಜಾವ ನಾಡಿಗರ ಮನೆಯಿಂದ ಮದುವೆ ಆಚರಣೆಯಂತೆ ಎಲ್ಲ ಪೂಜೆ ನಡೆಯಲಿದೆ. ವಿಶ್ವಕರ್ಮ ಸಮುದಾಯದವರು ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಫೆ.24ರ ರಾತ್ರಿ 9 ಗಂಟೆಗೆ ತವರುಮನೆಯಿಂದ ಉತ್ಸವದೊಂದಿಗೆ ಗದ್ದುಗೆಯತ್ತ ಕರೆತರಲಾಗುತ್ತದೆ.

m2
3ಮೆರವಣಿಗೆಯಲ್ಲಿ ಗಂಗಾಮತಸ್ಥರು ಗಂಗೆ ಪೂಜೆ ನಡೆಸುತ್ತಾರೆ. ವಿದ್ಯಾನಗರದ ನಾಗರಿಕರು ಬೇವಿನ ಉಡುಗೆಯೊಂದಿಗೆ ದೇವಿಗೆ ಎದುರಾಗಲಿದ್ದಾರೆ. ರಾತ್ರಿ ಉಪ್ಪಾರ ಸಮಾಜದವರು ದೇವಿಯನ್ನು ಗದ್ದುಗೆ ಮೇಲೆ ಕೂರಿಸಲಿದ್ದಾರೆ. ಕುರುಬ, ವಾಲ್ಮೀಕಿ, ಮಡಿವಾಳ ಸಮುದಾಯದಿಂದ ಪೂಜೆ ನೆರವೇರಲಿದೆ. ಚಿತ್ರದುರ್ಗ, ಹೊನ್ನಾಳಿಯಿಂದ ಕಲಾ ತಂಡಗಳು ಆಗಮಿಸಲಿವೆ.

4ಫೆ.25 ರಿಂದ 28ರವರೆಗೆ ಮಾರಿಕಾಂಬ ದೇವಸ್ಥಾನದ ಗದ್ದುಗೆ ಮೇಲೆ ದೇವಿಯ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರತಿದಿನ ಬೆಳಗ್ಗೆ 6.30 ರಿಂದ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹರಕೆ, ಪೂಜೆ, ಪ್ರಸಾದ ವಿನಿಯೋಗ ಇರಲಿದೆ. ಫೆ.28ರ ಸಂಜೆ 6.30ಕ್ಕೆ ಮಹಾಮಂಗಳಾರತಿ ನಡೆಯಲಿದೆ.

5ಫೆ.28ರ ರಾತ್ರಿ 7ಕ್ಕೆ ಶ್ರೀ ಮಾರಿಕಾಂಬ ದೇವಿಯ ರಾಜಬೀದಿ ಉತ್ಸವ ನಡೆಯಲಿದೆ. ಅಂದು ಗಾಂಧಿ ಬಜಾರ್‌, ಬಿ.ಹೆಚ್‌.ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್‌ವರೆಗೆ ಉತ್ಸವ ನಡೆಯಲಿದೆ. ಅಲ್ಲಿಂದ ನಂತರ ದೇವಿಯ ವನ ಪ್ರವೇಶ ಮಾಡಲಿದ್ದಾಳೆ.

m1

ಚಿನ್ನದ ಮುಖವಾಡ, ಬೆಳ್ಳಿ ಬಾಗಿಲು

ಈ ಬಾರಿ ಮಾರಿಕಾಂಬ ದೇವಿಗೆ ಚಿನ್ನದ ಮುಖವಾಡ ಮತ್ತು ಗರ್ಭಗುಡಿಗೆ ಬೆಳ್ಳಿ ಬಾಗಿಲು ಅರ್ಪಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ತಿಳಿಸಿದರು. ದೇವಿಗೆ 1 ಕೆ.ಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ ಅರ್ಪಣೆ ಮಾಡಲಾಗುತ್ತಿದೆ. ಗರ್ಭಗುಡಿಗೆ 16 ಕೆ.ಜಿ ತೂಕದ ಬಾಗಿಲು ನೀಡಲಾಗುತ್ತಿದೆ. ಇದೆಲ್ಲವು ಭಕ್ತರು ಅರ್ಪಣೆ ಮಾಡಿದ್ದಾರೆ. ಇದಕ್ಕಾಗಿ ದೇವಸ್ಥಾನ ಸಮಿತಿ ಚಂದಾ ಸಂಗ್ರಹ ಮಾಡಿಲ್ಲ ಎಂದರು.

ಗಾಂಧಿ ಬಜಾರ್‌ನಲ್ಲಿ ಮಹಾದ್ವಾರ

ಜಾತ್ರೆ ಅಂಗವಾಗಿ ಗಾಂಧಿ ಬಜಾರ್‌ ಪ್ರವೇಶದಲ್ಲಿ ಮಹಾದ್ವಾರ ನಿರ್ಮಿಸಲಾಗುತಿದೆ. ಕಾಳಿ ಅಲಂಕಾರದ 20 ಅಡಿ ಎತ್ತರ, 22 ಅಡಿ ಅಗಲದ ಪ್ರತಿಮೆ ನಿಲ್ಲಿಸಲಾಗುತ್ತದೆ. ಕಳೆದ ಬಾರಿಯು ಮಹಾದ್ವಾರಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು.

ಇದನ್ನೂ ಓದಿ – ಫುಡ್‌ ಕೋರ್ಟ್‌ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್‌ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮಾಪತಿ, ಹನುಂತಪ್ಪ, ರಾಮಯ್ಯ, ಸತ್ಯನಾರಾಯಣ, ತಿಮ್ಮಯ್ಯ, ಲೋಕೇಶ್, ಚಂದ್ರಶೇಖರ್, ಶ್ರೀಧರಮೂರ್ತಿ, ಪ್ರಕಾಶ್, ಹರೀಶ್ ರಾಜ್ ಸೇರಿದಂತೆ ಹಲವರು ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 17, 2026

Leave a Comment