ಶಿವಮೊಗ್ಗದ ಟಿಪ್ಪು ನಗರದ ಶೆಡ್‌ ಮೇಲೆ ಪೊಲೀಸರು, ಅಧಿಕಾರಿಗಳಿಂದ ಜಂಟಿ ದಾಳಿ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ನಗರದ ಟಿಪ್ಪುನಗರದಲ್ಲಿ ಅಕ್ರಮವಾಗಿ ಎಲ್‌ಪಿಜಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ದಾಳಿ (raid) ನಡೆಸಿದ್ದಾರೆ. ಶೆಡ್‌ ಒಂದರಲ್ಲಿ ಪರವಾನಗಿ ಇಲ್ಲದೆ ಸಿಲಿಂಡರ್‌ಗಳಿಂದ ಗ್ಯಾಸ್ ಸಂಗ್ರಹಿಸಿ, ಸಾರ್ವಜನಿಕರಿಗೆ ಮಾರಾಟ ಮಾಡಲು ಬೇರೆ ಸಿಲಿಂಡರ್‌ಗಳಿಗೆ ರಿಫಿಲ್ಲಿಂಗ್ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಸ್ಥಳದಲ್ಲಿ ಗ್ಯಾಸ್ ರಿಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ಮೋಟಾರ್, ಹೋಸ್ ಪೈಪ್, ನಾಜಲ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ವಿವಿಧ ಗಾತ್ರದ ನಾಲ್ಕು ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿಯ ಸುಳಿವು ಅರಿತ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Police-Jeep-at-Shimoga-General-Image

Police-Jeep-at-Shimoga-General-Image

ಈ ಸಂಬಂಧ ಆಹಾರ ಇಲಾಖೆಯ ನಿರೀಕ್ಷಕ ರಾಜಪ್ಪ ಎಸ್.ಪಿ. ಅವರು ನೀಡಿದ ದೂರಿನನ್ವಯ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ರೈಲ್ವೆ ಹಳಿ ಮೇಲೆ ಯುವತಿ ಮೃತದೇಹ, ಸಾವಿನ ಕುರಿತು ಅನುಮಾನ

ಹೆಚ್ಚಿನ Shimoga News, Shivamogga News ಮತ್ತು CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 15, 2026

Leave a Comment