ಜೆಸಿಐ ಶಿವಮೊಗ್ಗ ಸಹ್ಯಾದ್ರಿ ತಂಡ ಮತ್ತೊಮ್ಮೆ ಚಾಂಪಿಯನ್‌

Published On : ಏಪ್ರಿಲ್ 17, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜೆಸಿಐ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಬಾಕ್ಸ್ ಕ್ರಿಕೆಟ್ (Box Cricket) ಟೂರ್ನಮೆಂಟ್ 2.0 ಕ್ರೀಡಾಕೂಟದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ತಂಡವು ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಗಾಡಿಕೊಪ್ಪದ ಸ್ಪೋರ್ಟ್ಸ್ ಜೋನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯು, ಸತತ ಎರಡನೇ ಬಾರಿಯೂ ಪ್ರಥಮ ಸ್ಥಾನ ಪಡೆದಿದೆ.

JCI-Cricket-Championship-in-Shimoga

ಸಹ್ಯಾದ್ರಿ ಸ್ಮ್ಯಾಶರ್ಸ್ ತಂಡದ ನಾಯಕ ಸಂತೋಷ್ ಕುಮಾರ್ ಅವರು ಒಟ್ಟು 16 ವಿಕೆಟ್ ಮತ್ತು 86 ರನ್ ಗಳಿಸಿ ಹೈಯೆಸ್ಟ್ ವಿಕೆಟ್ ಟೇಕರ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ತಂಡದ ಆಟಗಾರರಾದ ಈಶ್ವರ್, ನಿತಿನ್, ಸಂತೂ, ಅಭಿಷೇಕ್, ಅನುಷ್ ಗೌಡ, ಉಮಾಮಣಿ, ಸಿಂಚನ, ಸಿ.ಕೆ.ವಿಜಯ್ ಕುಮಾರ್ ಹಾಗೂ ದಿಗಂತ್ ಮಂಜುನಾಥ್ ಅವರು ಸಂಘಟಿತ ಪ್ರದರ್ಶನ ನೀಡಿದರು. ತಂಡದ ಮಾಲೀಕ ಸುರೇಂದ್ರ ಕೋಟ್ಯಾನ್ ಅವರು ಉತ್ತಮ ಓನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ : ಶಿವಮೊಗ್ಗದ ಒಂದು ರೈಲಿನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ, ರೈಲ್ವೆ ಇಲಾಖೆ ಪ್ರಕಟಣೆ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಜೆಸಿಐ ವಲಯ ನಿರ್ದೇಶಕ ಜಿ. ಗಣೇಶ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಜೆಸಿಐ ವಲಯ 24ರ ಜೆಎಸಿ ಹಾಗೂ ಜೆಕಾಮ್ ಸಹಯೋಗದೊಂದಿಗೆ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 17, 2026

Leave a Comment