ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020

ಸ್ಥಾಯಿ ಸಮಿತಿ ಸದಸ್ಯತ್ವ ಬೇಡವೇ ಬೇಡ ಅಂದರು..! ಚುನಾವಣೆ ಪ್ರಕ್ರಿಯೆ ಮುಗಿಯೋವರೆಗು ಮೌನವಾಗಿ ಕುಳಿತರು..! ವೇದಿಕೆ ಕೆಳಗೆ ನಿಂತು ವಿಷ್ ಮಾಡುತ್ತಿದ್ದವರನ್ನು ವೇದಿಕೆಗೆ ಎಳೆದೊಯ್ದ ನಿರ್ಗಮಿತ ಉಪ ಮೇಯರ್..!

ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಅನಿತಾ ರವಿಶಂಕರ್, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗು ಮೌನಕ್ಕೆ ಶರಣಾಗಿದ್ದರು. ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸುವರ್ಣ ಶಂಕರ್ ಅವರಿಗೆ ಪಕ್ಷ ಗ್ರೀನ್ ಸಿಗ್ನಲ್ ನೀಡಿತು. ಇದು ಅನಿತಾ ರವಿಶಂಕರ್ ಅವರಿಗೆ ಬೇಸರ ತರಿಸಿತ್ತು. ಹಾಗಾಗಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಚುನಾವಣೆಗಳು ನಡೆದ ಅವಧಿಯಲ್ಲಿ ಮೌನವಾಗಿಯೇ ಕುಳಿತಿದ್ದರು.
ಸ್ಥಾಯಿ ಸಮಿತಿಯು ಬೇಕಿಲ್ಲ
ಮೇಯರ್, ಉಪ ಮೇಯರ್ ಆಯ್ಕೆ ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. ಒಂದೆರಡು ಸ್ಥಾಯಿ ಸಮಿತಿಗೆ ಸದಸ್ಯರಾಗುವಂತೆ ಅನಿತಾ ರವಿಶಂಕರ್ ಅವರಿಗೆ ಪಕ್ಷದ ಪಾಲಿಕೆ ಸದಸ್ಯರು ಕೇಳಿಕೊಂಡರು. ಅನಿತಾ ರವಿಶಂಕರ್ ಅವರ ಪಕ್ಕದಲ್ಲೇ ಕುಳಿತಿದ್ದ ನಿರ್ಗಮಿತ ಮೇಯರ್ ಲತಾ ಗಣೇಶ್ ಅವರು ಸ್ಥಾಯಿ ಸಮಿತಿಗೆ ಹೆಸರು ಬರೆಸುವಂತೆ ತಿಳಿಸಿದರು. ಆದರೆ ಅನಿತಾ ರವಿಶಂಕರ್ ಅವರು ಯಾವುದು ಬೇಡ ಎಂದು ತಲೆ ಆಡಿಸಿದರು.
ವೇದಿಕೆಗೆ ಎಳೆದೊಯ್ದು ವಿಷ್ ಮಾಡಿಸಿದರು
ಇನ್ನು, ನೂತನ ಮೇಯರ್ ಮತ್ತು ಉಪ ಮೇಯರ್’ಗೆ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿಯ ಪಾಲಿಕೆ ಸದಸ್ಯರು ಹೂವಿನ ಹಾರ ಹಾಕಿ, ಹೂಗುಚ್ಛ ನೀಡಿ ಶುಭ ಹಾರೈಸಿದರು. ಈ ವೇಳೆ ದೂರದಲ್ಲೇ ನಿಂತು ವೀಕ್ಷಿಸುತ್ತಿದ್ದ ಅನಿತಾ ರವಿಶಂಕರ್ ಅವರು, ಬಳಿಕ ವೇದಿಕೆ ಬಳಿ ಬಂದು ಶುಭ ಹಾರೈಸಿದರು. ಆದರೆ ನಿರ್ಗಮಿತ ಉಪ ಮೇಯರ್ ಚನ್ನಬಸಪ್ಪ ಅವರು, ಅನಿತಾ ರವಿಶಂಕರ್ ಅವರನ್ನು ವೇದಿಕೆಗೆ ಬರುವಂತೆ ಮನವಿ ಮಾಡಿದರು.

ಕೊನೆಗೆ ಚನ್ನಬಸಪ್ಪ ಅವರೆ ಅನಿತಾ ರವಿಶಂಕರ್ ಅವರನ್ನು ವೇದಿಕೆಗೆ ಕರೆದೊಯ್ದು ನಿಲ್ಲಿಸಿ, ನೂತನ ಮೇಯರ್, ಉಪ ಮೇಯರ್ ಜೊತೆಗೆ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿದರು.
- ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್ ಬಸ್ಗಳ ಪೈಕಿ 8 ಬಸ್ ವಾಪಸ್, ಈ ನಿರ್ಧಾರವೇಕೆ?
- ಜೋಗ ಸಮೀಪ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ, ಬ್ಯಾಂಕ್ ಉದ್ಯೋಗಿ ಸಾವು
- ಶಿವಮೊಗ್ಗದ ಜೈಲ್ ಸರ್ಕಲ್ನಲ್ಲಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ
- ಆಲ್ಕೊಳ ಸರ್ಕಲ್ ಸಮೀಪ 6 ಮಂದಿಗೆ ಚಾಕು ಇರಿದಿದ್ದ 9 ಮಂದಿ ಅರೆಸ್ಟ್
- ಶಿವಮೊಗ್ಗ ಉಸ್ತುವಾರಿ ಸಚಿವರ ಪ್ರವಾಸ, ಜನತಾ ದರ್ಶನ ಸೇರಿ ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]