ಬಿಸ್ಕತ್ತು, ಕೇಕ್‌, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?

Agriculture-University-Iruvakki-sagara-campus-board

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು (University) ಡಿ.15ರಿಂದ ಜನವರಿ 13ರವರೆಗೆ 1 ತಿಂಗಳು ನವುಲೆ ಕೃಷಿ ಮಹಾವಿದ್ಯಾಲಯದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ (Bakery) ಉತ್ಪನ್ನಗಳ ತಯಾರಿಕೆ ಕೌಶಲಾಭಿವೃದ್ಧಿತರಬೇತಿ ಹಮ್ಮಿಕೊಂಡಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್‌ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು? ತರಬೇತಿಯಲ್ಲಿ ವಿವಿಧ ರೀತಿಯ ಬಿಸ್ಕತ್ತುಗಳು, ಕೇಕ್, ಬ್ರೆಡ್, ಬನ್, ರಸ್ಕ್, ಕಾರ, ಫಿಜ್ಜಾ, ದಿಲ್ ಪಸಂದ್ ಮತ್ತು ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯನ್ನು ಕಲಿಸಿಕೊಡಲಾಗುತ್ತದೆ. ಆಸಕ್ತರು ತರಬೇತಿ … Read more

ಕ್ರೆಡಿಟ್‌ ಕಾರ್ಡ್‌ನಿಂದ ಹಣ ಕಡಿತ, ಎಸ್‌ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ

Shimoga-Consumer-Court.

ಶಿವಮೊಗ್ಗ: ಕ್ರೆಡಿಟ್ ಕಾರ್ಡಿನಿಂದ (Credit Card) ಅನಧಿಕೃತವಾಗಿ ಕಡಿತ ಮಾಡಿದ ಹಣವನ್ನು ಗ್ರಾಹಕರಿಗೆ ಮರುಪಾವತಿಸದ ಪ್ರಕರಣದಲ್ಲಿ ಸೇವಾ ನ್ಯೂನತೆ ಎಸಗಿರುವುದು ಸಾಬೀತಾದ ಹಿನ್ನೆಲೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಬೆಂಗಳೂರಿನ ಎಸ್‌ಬಿಐ ಕಾರ್ಡ್ಸ್ (SBI Cards) ಮತ್ತು ಪೇಮೆಂಟ್ ಸರ್ವೀಸ್, ಕಾರ್ಡ್‌ದಾರ ಮಂಜುನಾಥ್ ಅವರಿಗೆ ಹಣ ಮರುಪಾವತಿಸುವಂತೆ ಆದೇಶ ನೀಡಿದೆ. ತಿಲಕ್‌ನಗರದ ವಾಸಿ ಮಂಜುನಾಥ್ ಸೇವಾ ನ್ಯೂನತೆ ಕುರಿತು ಆಯೋಗಕ್ಕೆ ದೂರು ನೀಡಿದ್ದರು. ತಿಲಕ್‌ ನಗರದ ಎಸ್‌ಬಿಐ ಬ್ಯಾಂಕ್‌ನಿಂದ ನೀಡಿದ್ದ ಕ್ರೆಡಿಟ್ ಕಾರ್ಡನ್ನು ಬಳಸುತ್ತಾ, ವಾರ್ಷಿಕ … Read more

ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?

BY-Vijayendra-Protest-in-Shikaripura

ಶಿಕಾರಿಪುರ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭ 50,000 ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ (Gherao) ಹಾಕಲಾಗುವುದು. ಆ ಮೂಲಕ ರೈತ (Farmers) ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿಕಾರಿಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ (Protest) ಪಾಲ್ಗೊಂಡಿದ್ದ ಬಿ.ವೈ.ವಿಜಯೇಂದ್ರ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿಯಲ್ಲಿ ಪಾಲ್ಗೊಂಡು ಗಮನಸೆಳೆದರು. ವಿಜಯೇಂದ್ರ ಏನೇನು ಹೇಳಿದರು? ಪಾಯಿಂಟ್‌ 1: ರೈತರ ಹಿತಕಾಯುವುದಾಗಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು … Read more

ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್‌ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?

Crime-News-General-Image

ಶಿವಮೊಗ್ಗ: ಪೆಸೆಟ್‌ ಕಾಲೇಜು ಬಸ್‌ (College Bus) ಅಡ್ಡಗಟ್ಟಿ ಚಾಲಕನಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆಸೆಟ್‌ (PESIT) ಕಾಲೇಜು ಬಸ್‌ ಚಾಲಕ ಹುಚ್ಚರಾಯ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿನೋಬನಗರ ಆಟೋ ನಿಲ್ದಾಣದ ಬಳಿ ಪೆಸೆಟ್‌ ಕಾಲೇಜು ಬಸ್‌ ಅಡ್ಡಗಟ್ಟಿ ಚಾಲಕನಿಗೆ ನಿಂದಿಸಿದ್ದಾರೆ. ಬಸ್ಸು ಉಷಾ ನರ್ಸಿಂಗ್‌ ಹೋಂ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಮೂವರು ಪುನಃ ಅಡ್ಡಗಟ್ಟಿ ಚಾಲಕ … Read more

BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ

First Flight - Indigo ATR 72 Flight in Shimoga Airport

ಶಿವಮೊಗ್ಗ: ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಯಾನ (Indigo Flight) ಸೇವೆ ವ್ಯತ್ಯಯವಾಗಿದೆ. ಕಳೆದ ಮೂರು ದಿನದಲ್ಲಿ ಒಂದು ಸಾವಿರಕ್ಕು ಹೆಚ್ಚು ವಿಮಾನ ಹಾರಾಟ ರದ್ದಾಗಿದೆ ‍(Flight Cancel) ಎಂದು ವರದಿಯಾಗಿದೆ. ಈ ಮಧ್ಯೆ ಶಿವಮೊಗ್ಗಕ್ಕು ಬಿಸಿ ತಟ್ಟಿದೆ. ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರತಿದಿನ ಇಂಡಿಗೋ ವಿಮಾನ ಸೇವೆ ಇದೆ. ಆದರೆ ಸೇವೆಯಲ್ಲಿ ವ್ಯತ್ಯಯದಿಂದಾಗಿ ಇಂದು ಇಂಡಿಗೋ ವಿಮಾನ ಸಂಚಾರ ರದ್ದಾಗಿದೆ. ಇವತ್ತು 60 ಮಂದಿ ಪ್ರಯಾಣಿಕರು ಇಂಡಿಗೋ … Read more

BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ, ಯಾಕೆ?

Shimoga-DC-Car.

ಶಿವಮೊಗ್ಗ: ರೈತರೊಬ್ಬರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯ ಕಾರು (Innova Car) ಜಪ್ತಿ (seizure) ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ವಸತಿ ಯೋಜನೆಗಾಗಿ ಹರಮಘಟ್ಟದ ಕೃಷಿಕ ನಂದಾಯಪ್ಪ ಅವರ ಒಂದು ಎಕರೆ ಜಮೀನನ್ನು 1992ರಲ್ಲಿ ಸರ್ಕಾರ ವಶಕ್ಕೆ ಪಡೆದಿತ್ತು. ಇದಕ್ಕೆ ₹22 ಲಕ್ಷ ಪರಿಹಾರ ನೀಡವುದಾಗಿ ತಿಳಿಸಿದ್ದ ಸರ್ಕಾರ ಕೇವಲ ₹9 ಲಕ್ಷ ನೀಡಿತ್ತು. ಬಾಕಿ ಹಣಕ್ಕಾಗಿ ರೈತ ನಂದಾಯಪ್ಪ ಕಚೇರಿಗೆ ಅಲೆದಾಡಿದರು ಫಲ ಸಿಕ್ಕಿರಲಿಲ್ಲ. ಕೊನೆಗೆ ನಂದಾಯಪ್ಪ ಕೋರ್ಟ್‌ (Shiomga Court) ಮೊರೆ ಹೋಗಿದ್ದರು. … Read more

ಶಿವಮೊಗ್ಗದಲ್ಲಿ ಬಸ್‌ ಹತ್ತಿ ಆಧಾರ್‌ ಕಾರ್ಡ್‌ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image-Shimoga-Bangalore

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ (Bus) ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್‌, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಗಾಂಧಿ ಬಜಾರ್‌ನ ಧರ್ಮರಾಯನ ಬೀದಿಯ ಗಾಯತ್ರಿ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚನ್ನದ ಸರ, ನಗದು ಮತ್ತು ಆಧಾರ್‌ ಕಾರ್ಡ್‌ ಕಳ್ಳತನ ಮಾಡಲಾಗಿದೆ. ಗಾಯತ್ರಿ ಅವರು ಹಿರೇಕೆರೂರಿನಲ್ಲಿರುವ ತಾಯಿ ಮನೆಗೆ ತೆರಳುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ರಶ್‌ ಇದ್ದಿದ್ದರಿಂದ ನೂಕುನುಗ್ಗಲಿನಲ್ಲೆ ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ ತೋರಿಸಲು ವ್ಯಾನಿಟಿ ಬ್ಯಾಗ್‌ಗೆ ಕೈ … Read more

ಕೋಟೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ, ಏನೇನೆಲ್ಲ ಪೂಜೆ ನೆರವೇರಿತು?

Brahma-Ratotsava-held-at-Kote-Chandika-durga-parameshwari-temple

ಶಿವಮೊಗ್ಗ: ನಗರದ ಕೋಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿರುವ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮರಥೋತ್ಸವ (Brahma Ratotsava) ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ದೇವಿಯ ಘೋಷಣೆ ಕೂಗುತ್ತ ರಥವನ್ನು ಎಳೆದು ಪುನೀತರಾದರು. ಬ್ರಹ್ಮರಥೋತ್ಸವ ಹಿನ್ನೆಲೆ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ (Temple) ಮೂರು ದಿನ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಬುಧವಾರ ದೇವಸ್ಥಾನದಲ್ಲಿ ಮಹಾಗಣಪತಿ ಪೂಜೆ, ಕಲಶಸ್ಥಾಪನೆ, ಚಂಡಿಕಾ ಪಾರಾಯಣ, ದುರ್ಗಾ ಜಪ, ರಾಜಬೀದಿ ಉತ್ಸವ, ಪ್ರಾಕಾರೋತ್ಸವ ನಡೆದಿತ್ತು. ಗುರುವಾರ ಬ್ರಹ್ಮರಥೋತ್ಸವ ನಡೆಯಿತು. ಬಳಿಕ … Read more

ಅಡಿಕೆ ಧಾರಣೆ | 4 ಡಿಸೆಂಬರ್‌ 2025 | ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಸಾಗರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ತೀರ್ಥಹಳ್ಳಿ ಮಾರುಕಟ್ಟೆ ಸಿಪ್ಪೆಗೋಟು 14000 14000 ಭದ್ರಾವತಿ ಮಾರುಕಟ್ಟೆ ಇತರೆ 20500 28500 ಚೂರು 18000 18000 ಸಿಪ್ಪೆಗೋಟು 11000 11000 ಸಾಗರ ಮಾರುಕಟ್ಟೆ ಕೆಂಪುಗೋಟು 34299 42399 ಕೋಕ 12099 35599 ಚಾಲಿ 32599 42509 ಬಿಳೆ ಗೋಟು 17254 36599 ರಾಶಿ 36599 62888 ಸಿಪ್ಪೆಗೋಟು 10399 23500 ಶಿವಮೊಗ್ಗ ಮಾರುಕಟ್ಟೆ ಗೊರಬಲು 19000 42119 ನ್ಯೂ … Read more

ಶಿವಮೊಗ್ಗ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

POWER-CUT-UPDATE-NEWs ELECTRICITY

ಶಿವಮೊಗ್ಗ: ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-5ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಡಿ.5 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಬಿ.ಎಸ್.ಎನ್.ಎಲ್ ಭವನ ಬಿ ಮತ್ತು ಸಿ ಬ್ಲಾಕ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Power Cut). ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗ-3 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದ ಮೊಬೈಲ್‌ ಅಂಗಡಿಯಿಂದ ಹೊರ ಬಂದ ಮೆಕಾನಿಕ್‌ಗೆ … Read more