ತೀರ್ಥಹಳ್ಳಿ ಅಕ್ರಮ ಮರಳು ದಂಧೆಕೋರರಿಗೆ ಶಾಕ್, ಏಕಕಾಲಕ್ಕೆ ಮರಳು ಅಡ್ಡೆಗಳ ಮೇಲೆ ಡಿಸಿಬಿ ರೇಡ್

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ತೀರ್ಥಹಳ್ಳಿಯ ಅಕ್ರಮ ಮರಳು ದಂಧೆಕೋರರ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಬಿ) ಚುರುಕು ಮುಟ್ಟಿಸಿದೆ. ಇವತ್ತು ಏಕಕಾಲಕ್ಕೆ ವಿವಿಧೆಡೆ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ ಡಿಸಿಬಿ ಪೊಲೀಸರು, ಸುಮಾರು 58 ಲೋಡ್ ಮರಳು ವಶಕ್ಕೆ ಪಡೆದಿದೆ. ಎಲ್ಲೆಲ್ಲಿ ದಾಳಿಯಾಯ್ತು? ಎಷ್ಟೆಷ್ಟು ಮರಳು ಸಿಕ್ತು? ದಾಳಿ 1 | ಕುಶಾವತಿ ಹೊಳೆ ಹಾಗೂ ಮಜ್ಜಿಗೆ ಹೊಳೆ ಸೇರುವ, ಕಿತ್ತನೆಗದ್ದೆ ಗ್ರಾಮದ ಅವಿನ್ ಡಿಸೋಜ ಎಂಬುವರ ಮನೆ ಹಿಂಭಾಗದ ಹೊಳೆಪಾತ್ರದ … Read more

ಕುಟುಂಬ ಸಹಿತ ಸಿಎಂ ಫಾರಿನ್ ಟೂರ್, ಶಿವಮೊಗ್ಗದಲ್ಲಿ ಮಾಜಿ ಸಿಎಂ ಗರಂ

Yedyurappa at Vinobhanagara General Image 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ, ಕುಟುಂಬದವರ ಜೊತೆಗೆ ಹೊಸ ವರ್ಷಾಚರಣೆಗೆ ವಿದೇಶಕ್ಕೆ ತೆರಳಿದ್ದಾರೆ ಅಂತಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದ 150 ತಾಲೂಕುಗಳಲ್ಲಿ ಬರವಿದೆ. ಬರಪೀಡಿತ ಪ್ರದೇಶಗಳಲ್ಲಿ ಬಿಜೆಪಿ ತಂಡ ತೆರಳಿ ವಸ್ತುಸ್ಥಿತಿ ಅಧ್ಯಯನ ಮಾಡಿದೆ. ಈ ತಾಲೂಕಿನ ಜನರ ಬವಣೆ ಕುರಿತು ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಲು ಶುರು ಮಾಡಿದ ನಂತರ ರಾಜ್ಯ ಸರ್ಕಾರ ಪ್ರತೀ ತಾಲೂಕಿಗೆ … Read more

‘ರಾಜ್ಯದ ಸಾಲಮನ್ನಾವನ್ನು ಬಿಜೆಪಿಯವರು ಹಳದಿ ಕಣ್ಣಿಂದ ನೋಡೋದನ್ನು ಬಿಡಲಿ’

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಬಿಜೆಪಿ ಮುಖಂಡರು ಹಳದಿ ಕಣ್ಣಿನಿಂದ ನೋಡುವುದನ್ನು ಬಿಡಬೇಕು ಅಂತಾ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲಮನ್ನಾ ಯೋಜನೆಯ ಸಂಪೂರ್ಣ ಮಾಹಿತಿಯನ್ನೇ ತಿಳಿಯದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರು, ಹಣವೇ ಬಿಡುಗಡೆಯಾಗಿಲ್ಲ, 800 ರೈತರಿಗಷ್ಟೇ ಸಾಲ ಮನ್ನಾ ಆಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರದಿಂದ ಎಷ್ಟು ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ಉತ್ತರಿಸಲಿ ಎಂದು ಮಂಜುನಾಥಗೌಡ … Read more

ಸಾಗರದಲ್ಲಿ ಮುಂದುವರೆದ ಮಂಗನ ಕಾಯಿಲೆ ಆತಂಕ, ಮತ್ತೊಬ್ಬ ಶಂಕಿತ ಬಲಿ, ಮಂಗಗಳ ಮೃತದೇಹ ಪತ್ತೆ

030119 Mangana Kayale Monkey Death 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ಸಾಗರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಅಸಹಜ ಸಾವು ಮುಂದುವರೆದಿದ್ದು, ಮಂಗನ ಕಾಯಿಲೆ ಆತಂಕ ಇಮ್ಮಡಿಯಾಗಿದೆ. ಇನ್ನು, ಮಂಗನ ಕಾಯಿಲೆ ಶಂಕಿತರೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಂಚಿಕೈ ಮಂಜುನಾಥ (22) ಮೃತಪಟ್ಟಿದ್ದಾರೆ. ಮಂಜುನಾಥ ಅವರಿಗೆ ತೀವ್ರ ಜ್ವರ ಮತ್ತು ಜಾಂಡೀಸ್ ಇತ್ತು. ಮಂಗನ ಕಾಯಿಲೆ ಶಂಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್’ಗೆ ಕಳುಹಿಸಲಾಗಿದೆ. ಮುಂದುವರೆದ ಮಂಗಗಳ ಸಾವು ಭಾರಂಗಿ ಹೋಬಳಿಯ ಅರಳಗೋಡು … Read more

ಮಂಗನ ಕಾಯಿಲೆ ಭಯ, ಮುಪ್ಪಾನೆಯಲ್ಲಿ ಚಾರಣ ನಿರ್ಬಂಧ, ಸಿಗಂದೂರು ಭಕ್ತರಿಗೂ ಸದ್ಯದಲ್ಲೇ ಮಾರ್ಗಸೂಚಿ

010119 Muppane Treckking Ban Monkey Fever 1

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ದಿನೇ ದಿನೇ ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಶರಾವತಿ ಕಣಿವೆ ಅಭಯಾಯರಣ್ಯದ ಮುಪ್ಪಾನೆ ಪ್ರಕೃತಿ ಶಿಬಿರ ಅರಣ್ಯ ವ್ಯಾಪ್ತಿಯಲ್ಲಿ, ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾ ವನ್ಯಜೀವಿ ವಿಭಾಗದ ವತಿಯಿಂದ ಈ ಆದೇಶ ಹೊರಡಿಸಲಾಗಿದೆ. ಮುಪ್ಪಾನೆ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆ, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಜ.1ರಿಂದ ಮುಂದಿನ ಆದೇಶದವರೆಗೂ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಸದ್ಯದಲ್ಲೇ ಸಿಗಂದೂರು ಭಕ್ತರಿಗೂ ಮಾರ್ಗಸೂಚಿ … Read more

ನೀರಿಗಾಗಿ ಭದ್ರಾವತಿ ಮಿಲ್ಟ್ರಿಕ್ಯಾಂಪ್ ಬಳಿ ರೈತರ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಅನ್ನದಾತರು ಗರಂ

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ಭದ್ರಾ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಿಲ್ಟ್ರಿಕ್ಯಾಂಪ್’ನ ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಲಾಯಿತು. ನೀರು ಹರಿಸುವುದನ್ನು ನಿಲ್ಲಿಸಿ 46 ದಿನ ಕಳೆದಿದೆ. ನೀರು ಹರಿಸಲು ಇದು ಸಕಾಲವಾಗಿದೆ. ಆದ್ದರಿಂದ ಸರ್ಕಾರ ಮತ್ತು ನೀರಾವರಿ ಇಲಾಖೆ ತಡ ಮಾಡದೆ ನಾಲೆಗಳಲ್ಲಿ ನೀರು ಹರಿಸಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೈತ ಮುಖಂಡರಾದ … Read more

ಸಾಗರ ತಾಲೂಕಿನಲ್ಲಿ ಗಾಂಜಾ, ಡ್ರಗ್ಸ್ ಹಾವಳಿ, ಕಟ್ಟುನಿಟ್ಟಿನ ಕ್ರಮಕ್ಕೆ ಮಹತ್ವದ ಮೀಟಿಂಗ್ ಫಿಕ್ಸ್

Haratalu-Halappa

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ಯುವಕರಲ್ಲಿ ಗಾಂಜಾ ಮತ್ತು ಡ್ರಗ್ಸ್ ಸೇವನೆ ವ್ಯಾಪಕವಾಗುತ್ತಿದೆ. ವ್ಯಸನದ ಕುರಿತು ಮೃದು ಧೋರಣೆಯಿಂದ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಜ.10ರಂದು ಜಿಲ್ಲಾ ರಕ್ಷಣಾಧಿಕಾರಿ, ಎಸಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಗಾಂಜಾ ಸೇವನೆ ಹೆಚ್ಚುತ್ತಿರುವ ಹಿನ್ನಲೆ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಹರತಾಳು ಹಾಲಪ್ಪ, ಶಿಘ್ರದಲ್ಲೇ ನಗರ ಮತ್ತು ಗ್ರಾಮೀಣ ಭಾಗದ ಕಾಲೇಜುಗಳ … Read more

ಮೊದಲು ಈ ಬಸ್ ಸ್ಟಾಪ್’ನಲ್ಲಿ ನಿಲ್ಲೋಕೆ ಹೆದರುತ್ತಿದ್ದ ಭದ್ರಾವತಿ ಜನ, ಈಗ ಬಹು ಹೊತ್ತು ಇಲ್ಲಿ ಬಸ್ಸಿಗೆ ಕಾಯುತ್ತಾರೆ

261218 Yuva Brigade VISL Bus Stop Cleaning 1

ಶಿವಮೊಗ್ಗ ಲೈವ್.ಕಾಂ | 26 ಡಿಸೆಂಬರ್ 2018 ಎಲ್ಲೆಂದರಲ್ಲಿ ಬಿದ್ದಿದ್ದ ಕಸ. ಇಲ್ಲಿಗೆ ಬಂದವರಿಗೆ ಕಾಡುತ್ತಿತ್ತು ಸಾಂಕ್ರಾಮಿಕ ರೋಗದ ಆತಂಕ. ಆಸ್ಪತ್ರೆ ಎದುರಲ್ಲೇ ಇತ್ತು ಕಾಯಿಲೆಗಳ ಕಾರ್ಖಾನೆ..! ಇದು ಭದ್ರಾವತಿಯ ವಿಐಎಸ್ಎಲ್ ಆಸ್ಪತ್ರೆ ಮುಂಭಾಗದ ಬಸ್ ತಂಗುದಾಣದ ದುಸ್ಥಿತಿ. ಎಲ್ಲೆಂದರಲ್ಲಿ ಕಸದ ರಾಶಿ, ಸುತ್ತಲು ಬೆಳೆದಿದ್ದ ಗಿಡಗಂಟಿಯಿಂದಾಗಿ, ಹಂದಿಗಳ ವಾಸ ಸ್ಥಾನವಾಗಿತ್ತು. ಅಕ್ರಮ ಚಟುವಟಿಕೆಗೆ ಈ ತಂಗುದಾಣ ಆಶ್ರಯ ತಾಣದಂತಾಗಿತ್ತು. ಇದೇ ಕಾರಣಕ್ಕೆ, ಈ ಬಸ್ ತಂಗುದಾಣದ ಬಳಿಗೆ ಬರಲು ಜನರು ಹೆದರುತ್ತಿದ್ದರು. ಆದರೆ ಕಳೆದೆರಡು ದಿನದಿಂದ, … Read more

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗರಂ ಆಗಿದ್ದ ಭದ್ರಾವತಿ ಎಂಎಲ್ಎ ಈಗ ಕೂಲ್ ಕೂಲ್, ಮುಂದಿನ ನಡೆ ಏನು ಗೊತ್ತಾ?

BK Sangameshwara Bhadravathi BDVT 1

ಶಿವಮೊಗ್ಗ ಲೈವ್.ಕಾಂ | 26 ಡಿಸೆಂಬರ್ 2018 ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ, ಬೇಸರಗೊಂಡಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ತಾಳ್ಮೆಯ ಹಾದಿ ತುಳಿಯಲು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಿಲ್ಲ ಅಂತಾ ಖಡಕ್ ಆಗಿ ಹೇಳಿದ್ದ ಅವರೀಗ, ಭೂ ಸೇನಾ ನಿಗಮದ ಅಧ್ಯಕ್ಷರಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕುತೂಹಲ ಮೂಡಿಸಿತ್ತು ಬೆಂಬಲಿಗರ ಸಭೆ ಮಿನಿಸ್ಟರ್ ಪಟ್ಟ ಸಿಗದೆ ಬೇಸರಗೊಂಡಿದ್ದ ಸಂಗಮೇಶ್ವರ್, ಬೆಂಬಲಿಗರ ಸಭೆ ನಡೆಸಿ, ಮುಂದಿನ ನಡೆಯ ಕುರಿತು ಪ್ರಕಟಿಸುವುದಾಗಿ ಹೇಳಿದ್ದರು. ಈಗ … Read more

ಶಿವಮೊಗ್ಗ ಕಾಂಗ್ರೆಸ್’ಗೆ ಹೊಸ ಅಧ್ಯಕ್ಷ, ಅಧಿಕಾರ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್

H-S-Sundaresh-Congress-President

ಶಿವಮೊಗ್ಗ ಲೈವ್.ಕಾಂ | 24 ಡಿಸೆಂಬರ್ 2018 ಜಿಲ್ಲಾ ಕಾಂಗ್ರೆಸ್’ಗೆ ಹೊಸ ಸಾರಥಿ ನೇಮಕ ಮಾಡಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶ ಹೊರಡಿಸಿದ್ದಾರೆ. ಡಿ.27ರಂದು ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದಾರೆ. ಡಿ.27ರಂದು ಬೆಳಗ್ಗೆ 11 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ತಾಲೂಕು, ಬ್ಲಾಕ್ ಘಟಕದ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುವುದಾಗಿ ಸ್ಪಷ್ಟಪಡಿಸಿದರು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ … Read more