ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ, ಜೊತೆಗಿದ್ದ ವ್ಯಕ್ತಿ ಯಾರು? ‌SP ಫಸ್ಟ್‌ ರಿಯಾಕ್ಷನ್?

Shimoga-Lodge-incident-Doddapete-police-visit-the-spot

ಶಿವಮೊಗ್ಗ: ನಗರದ ಸಾಗರ ರಸ್ತೆಯ ಅಶೋಕ ಗ್ರ್ಯಾಂಡ್‌ ಲಾಡ್ಜ್‌ನ ಕೊಠಡಿಯಲ್ಲಿ ಮಹಿಳೆಯೊಬ್ಬರು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆ ಸಂದರ್ಭ ಕೊಠಡಿಯಲ್ಲಿದ್ದ ಪರಿಚಿತ ವ್ಯಕ್ತಿಗು ಸುಟ್ಟ ಗಾಯಗಳಾಗಿವೆ. ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರೂಮ್‌ನಲ್ಲಿ ಗೀತಾ ಜೊತೆಗೆ ಗಿರೀಶ್‌ ದಾವಣಗೆರೆಯ ಗಿರೀಶ್‌ ಎಂಬುವವರ ಹೆಸರಿನಲ್ಲಿ ಅಶೋಕ ಗ್ರ್ಯಾಂಡ್‌ ಲಾಡ್ಜ್‌ನಲ್ಲಿ ರೂಂ ಬುಕ್‌ ಆಗಿತ್ತು. ರೂಂ ನಂಬರ್‌ 211ರಲ್ಲಿ ಗಿರೀಶ್‌ ಜೊತೆಗೆ ಗೀತಾ (45) ಎಂಬುವವರು ತಂಗಿದ್ದರು. ಕಳೆದ ರಾತ್ರಿ … Read more

ಶಿವಮೊಗ್ಗದ ಲಾಡ್ಜ್‌ನಲ್ಲಿ ‘ಆಕಸ್ಮಿಕ ಬೆಂಕಿ’, ಮಹಿಳೆಗೆ ಗಂಭೀರ ಗಾಯ, ರಾತ್ರೋರಾತ್ರಿ ಬೆಂಗಳೂರಿಗೆ ರವಾನೆ

SHIMOGA-BREAKING-NEWS.jpg

ಶಿವಮೊಗ್ಗ: ‘ಆಕಸ್ಮಿಕ ಬೆಂಕಿʼಗೆ ಲಾಡ್ಜ್‌ ಕೊಠಡಿಯಲ್ಲಿದ್ದ ಮಹಿಳೆಯೊಬ್ಬರು ಭಾಗಶಃ ಸುಟ್ಟು ಹೋಗಿದ್ದಾರೆ. ಶಿವಮೊಗ್ಗದಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ದಾವಣಗೆರೆ ಮೂಲದ ಗೀತಾ ಎಂಬಾಕೆ ಬೆಂಕಿಗೆ ಸುಟ್ಟು ಹೋಗಿದ್ದಾರೆ. ಆಕೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದೇಹದ ಬಹುಭಾಗ ಸುಟ್ಟಿದ್ದರಿಂದ ಕೂಡಲೆ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಲಾಡ್ಜ್‌ ರೂಂನಲ್ಲಿ ‘ಅಕಸ್ಮಿಕ ಬೆಂಕಿ’ ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಕಳೆದ ರಾತ್ರಿ 1 ಗಂಟೆ ಹೊತ್ತಿಗೆ … Read more

ಶಿವಮೊಗ್ಗದ ವಿದ್ಯಾನಗರದಲ್ಲಿ ಯುವಕನ ಮೇಲೆ ಹರಿದ ಲಾರಿ

Vidyanagara-Truck-and-Bike-incident - ಲಾರಿ

ಶಿವಮೊಗ್ಗ: ಹೆದ್ದಾರಿಯಲ್ಲಿ ಲಾರಿ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಲಾರಿ ನಿಲ್ಲಿಸದೆ ಪರಾರಿಯಾಗಿದೆ. ವಿದ್ಯಾನಗರದ ಎಸ್‌ಬಿಐ ಬ್ಯಾಂಕ್‌ ಮುಂಭಾಗ ಇಂದು ಸಂಜೆ ಘಟನೆ ಸಂಭವಿಸಿದೆ. ಮೃತರನ್ನ ಮಣಿ (21) ಎಂದು ಗುರುತಿಸಲಾಗಿದೆ. ಬೈಕ್‌ ಹಿಂಭಾಗ ನಜ್ಜುಗುಜ್ಜಾಗಿದೆ. ಟಿಲ್ಲರನ್ನು ಬೈಕ್‌ ಓವರ್‌ ಟೇಕ್‌ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು, ಅಪಘಾತದ ಬಳಿ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೂರ್ವ ಸಂಚಾರ ಠಾಣೆ … Read more

ಶಿವಮೊಗ್ಗದ ಮಹಿಳೆಗೆ 10 ದಿನದಲ್ಲಿ ₹11,46,273 ಮೋಸ, ಆಗಿದ್ದೇನು?

Instagram-Cyber-Crime-Shimoga-Station.

ಶಿವಮೊಗ್ಗ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸಂಸ್ಥೆಯಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದ್ದು, ವಿವಿಧ ಟಾಸ್ಕ್‌ ಪೂರೈಸಿದರೆ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹11,46,273 ವಂಚಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಲೆಗೆ ಕೆಡವಿಕೊಂಡರು ಶಿವಮೊಗ್ಗದ ಮಹಿಳೆ ಇನ್‌ಸ್ಟಾಗ್ರಾಂ ವಿಕ್ಷಿಸುತ್ತಿದ್ದಾಗ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದೆ ಎಂಬ ಜಾಹೀರಾತು ಗಮನಿಸಿದ್ದರು. ಇದನ್ನು ಕ್ಲಿಕ್‌ ಮಾಡಿದಾಗ ವಿವಿಧ ಟಾಸ್ಕ್‌ ಪೂರೈಸಿ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ನಂಬಿದ ಮಹಿಳೆ ಹಣ ಪಾವತಿಸಿ ವಿವಿಧ ಟಾಸ್ಕ್‌ ಪೂರೈಸಿದ್ದಾರೆ. … Read more

ಅಡ್ಡಗಟ್ಟಿ ಚಿನ್ನ, ನಗದು ಕಸಿದವನು ಅರೆಸ್ಟ್‌, ರಂಗೋಲೆ ಹಾಕುತ್ತಿದ್ದ ಮಹಿಳೆ ಸರ ಕಿತ್ತುಕೊಂಡವನು ಜೈಲಿಗೆ

Thieves-nabbed-by-Vinobanagara-Police-in-shimoga.

ಶಿವಮೊಗ್ಗ: ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿನೋಬನಗರ ಠಾಣೆ ಪೊಲೀಸರು ಇಬ್ಬರು ಕಳ್ಳರನ್ನು ಅರೆಸ್ಟ್‌ ಮಾಡಿ, ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ 1 ನವುಲೆಯ ಶಿವಬಸವ ನಗರ ಕ್ರಾಸ್‌ ಬಳಿ ಅಕ್ಟೋಬರ್‌ 10ರಂದು ಬೆಳಗಿನ ಜಾವ 4 ಗಂಟೆಗೆ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅಡ್ಡಗಟ್ಟಿದ್ದ. ಉಂಗುರ, ನಗದು ಕಸಿದುಕೊಂಡು ವ್ಯಕ್ತಿಯನ್ನ ತಳ್ಳಿ ಪರಾರಿಯಾಗಿದ್ದ. ಈ ಪ್ರಕರಣ ಸಂಬಂಧ ಸಚಿನ್‌ ಅಲಿಯಾಸ್‌ ಶ್ಯಾಡೋ (27) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ₹55,000 … Read more

ರಿಂಗ್‌ ರಸ್ತೆಯಲ್ಲಿ ಓಡಾಡುವಾಗ ಹುಷಾರ್‌, ಬೈಕಿನಲ್ಲಿ ತೆರಳಿದ್ದ ಯುವಕ, ಯುವತಿಯಿಂದ ಕೇಸ್‌ ದಾಖಲು

Police-Jeep-at-Shimoga-General-Image

ಶಿವಮೊಗ್ಗ: ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆಗೆ (ಇಬ್ಬರ ಹೆಸರು ಗೌಪ್ಯ) ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಚಿನ್ನದ ಸರಗಳು, ಮೊಬೈಲ್‌ ಫೋನ್‌ ಕಸಿದು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹೊಸ ರಿಂಗ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆ ಪೆಸೆಟ್‌ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ಯಾಂಪಸ್‌ ಸೆಲೆಕ್ಷನ್‌ಗೆ ಬೈಕಿನಲ್ಲಿ ತೆರಳುತ್ತಿದ್ದರು. ರಿಂಗ್‌ ರಸ್ತೆಯಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ ಬೈಕ್‌ ನಿಲ್ಲಿಸಿ ಇಬ್ಬರು ಫೋಟೊ ಕ್ಲಿಕ್ಕಿಸಿಕೊಳ್ಳೂತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿದ್ಯಾರ್ಥಿ ಮತ್ತು ಸ್ನೇಹಿತೆಗೆ … Read more

ಊರಿಗೆ ಹೋಗಿದ್ದಾಗ ಪಕ್ಕದ ಮನೆ ಮಹಿಳೆಯಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

crime name image

ಶಿವಮೊಗ್ಗ: ಕುಟುಂಬದವರು ಊರಿಗೆ ಹೋಗಿದ್ದಾಗ ಮನೆ ಬಾಗಿಲಿನ ಲಾಕ್‌ ಮೀಟಿ ಒಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ಮತ್ತು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಡಿ ಬ್ಲಾಕ್‌ನಲ್ಲಿರುವ ದಿನೇಶ್‌ ಕುಮಾರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ದಿನೇಶ್‌ ಕುಮಾರ್‌ ಮತ್ತು ಅವರ ಪೋಷಕರು ಸಾಗರದ ತಮ್ಮೂರಿಗೆ ತೆರಳಿದ್ದರು. ಪಕ್ಕದ ಮನೆಯ ಮಹಿಳೆ ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೆ ದಿನೇಶ್‌ ಕುಮಾರ್‌ ಮನೆಗೆ ಮರಳಿದ್ದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು … Read more

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್‌ ಕೊಟ್ಟವನಿಂದಲೇ ಕೃತ್ಯ

SHIMOGA-NEWS-UPDATE

ಶಿವಮೊಗ್ಗ: ‘ನಿಮ್ಮ ರೀಲ್ಸ್‌ನ ಅಭಿಮಾನಿಗಳು’ ಎಂದು ತಿಳಿಸಿ ಟೀಚರ್‌ (Teacher) ಒಬ್ಬರನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಕೃತ್ಯ ನಡೆದಿದೆ. ಖಾಸಗಿ ಶಾಲೆಯೊಂದರ ಶಿಕ್ಷಕ (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ವ್ಯಕ್ತಿಯೊಬ್ಬ ಮೆಸೇಜ್‌ ಮಾಡಿದ್ದ. ಶಿಕ್ಷಕನ ರೀಲ್ಸ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದ. ಕೊನೆಗೆ ಶಿಕ್ಷಕನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ.7ರ ರಾತ್ರಿ 9.30ಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ … Read more

ಬ್ಯಾಂಕಿನ ಮಹಿಳಾ ಸಿಬ್ಬಂದಿಯನ್ನು ಹೊಟೇಲ್‌ಗೆ ಕರೆಯಿಸಿ ಮೈ, ಕೈ ಮುಟ್ಟಿದ ಹಿರಿಯ ಅಧಿಕಾರಿ

Doddapete-Police-Station-General-Image.

ಶಿವಮೊಗ್ಗ: ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಬ್ಬರು (Bank Employee) ಅದೇ ಬ್ಯಾಂಕಿನ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆ ವರ್ಗಾಯಿಸಲಾಗಿದೆ. ಏನಿದು ಪ್ರಕರಣ? ಬ್ಯಾಂಕ್‌ ಒಂದರ ಶಿವಮೊಗ್ಗ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಚೇರಿ ಕೆಲಸಕ್ಕೆ ಒಬ್ಬರನ್ನೇ ಕರೆಯುವುದು, ಮೈ ಸವರುವುದನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ … Read more

ಡಿಪಿಗೆ ಸಾವರ್ಕರ್‌ ಫೋಟೊ ಬಳಸಿದ್ದಕ್ಕೆ ವಾಟ್ಸಪ್‌ ಕರೆ ಮಾಡಿ ಜೀವ ಬೆದರಿಕೆ

Kote Police station building

ಶಿವಮೊಗ್ಗ: ವಾಟ್ಸಪ್‌ ಡಿಪಿಯಲ್ಲಿ ವೀರ ಸಾವರ್ಕರ್‌ ಫೋಟೊ (Photo) ಬಳಸಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿ ಚಂದನ್‌ ದೂರು ನೀಡಿದ್ದಾರೆ. ನ.6ರಂದು ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಕರೆ ಬಂದಿದ್ದು ವ್ಯಕ್ತಿಯೊಬ್ಬ ತನ್ನನ್ನು ಪ್ರವೀಣ್‌ ಎಂದು ಪರಿಚಯಿಸಿಕೊಂಡಿದ್ದ. ವೀರ ಸಾರ್ವಕರ್‌ ಫೋಟೊವನ್ನು ಡಿಪಿಯಲ್ಲಿ ಬಳಸಿದ್ದೇಕೆ ಎಂದು ವಿಚಾರಿಸಿ, ಕೊನೆಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಚಂದನ್‌ ಅವರು ವಾಟ್ಸಪ್‌ ಪರಿಶೀಲಿಸಿದಾಗ ಶೇಖ್‌ ಎಂಬ ಹೆಸರು ತೋರಿಸುತ್ತಿತ್ತು ಎಂದು … Read more