ಶಿವಮೊಗ್ಗ ಜೈಲು ಸೇರಿದ ಮೂರೇ ದಿನಕ್ಕೆ ವಿಚಾರಣಾಧೀನ ಕೈದಿ ಸಾವು, ಏನಿದು ಕೇಸ್‌?

Shimoga-Central-Jail-Prison

ಶಿವಮೊಗ್ಗ: ವಿಚಾರಣಾಧೀನ ಕೈದಿಯಾಗಿ (Prisoner) ಶಿವಮೊಗ್ಗ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಮೂರೇ ದಿನಕ್ಕೆ ಮೃತಪಟ್ಟಿದ್ದಾನೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇಂದು ಬಳಗ್ಗೆ ಆತ ಸಾವನ್ನಪ್ಪಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಟಿಪ್ಪುನಗರದ ನಿವಾಸಿ ಮನ್ಸೂರ್‌ (43) ಮೃತ ವಿಚಾರಣಾಧೀನ ಕೈದಿ. ಸೆ.15ರಂದು ಮನ್ಸೂರ್‌ ಶಿವಮೊಗ್ಗ ಜೈಲು ಸೇರಿದ್ದ. ಅನಾರೋಗ್ಯದ ಹಿನ್ನೆಲೆ ಸೆ.17ರ ಮಧ್ಯರಾತ್ರಿ ಈತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ತಂದೆ ಎದೆಗೆ ಕತ್ತರಿ ಚುಚ್ಚಿದ್ದ ಸೆ.14ರಂದು ಮನ್ಸೂರ್‌ ತನ್ನ … Read more

ಮೆಗ್ಗಾನ್ ಆಸ್ಪತ್ರೆ ಮುಂದೆ ನೇಣು ಬಿಗದುಕೊಂಡ ನ್ಯಾಮತಿ ಯುವಕ

170925-Nyamathi-Youth-At-Mc-gann-hospital-cctv.webp

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ (Hospital) ಆವರಣದಲ್ಲಿ ನಾಮಫಲಕಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನ್ಯಾಮತಿ ತಾಲೂಕು ಸುರಹೊನ್ನೆಯ ನಿವಾಸಿ ಆಕಾಶ್ (28) ನೇಣಿಗೆ ಕೊರಳೊಡ್ಡಿದಾತ. ಆಕಾಶ್ ತಾಯಿಗೆ ಹುಷಾರಿಲ್ಲದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಾಯಿಯ ಅರೈಕೆಗಾಗಿ ಆಸ್ಪತ್ರೆಗೆ ಬಂದಿದ್ದ ಆಕಾಶ್ ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ಬೋರ್ಡ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಆಸ್ಪತ್ರೆ ಮುಂಭಾಗ ಈತ ನೇಣು ಬಿಗಿದುಕೊಳ್ಳುತ್ತಿದ್ದ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ … Read more

ಗಾಂಧಿ ಪಾರ್ಕ್‌ ಮುಂದೆ ನಿಲ್ಲಿಸಿದ್ದ ಮತ್ತೊಂದು ಬೈಕ್‌ ನಾಪತ್ತೆ, ಹೇಗಾಯ್ತು ಘಟನೆ?

bike theft reference image

ಶಿವಮೊಗ್ಗ: ಗಾಂಧಿ ಪಾರ್ಕ್‌ ಮುಂಭಾಗ ನಿಲ್ಲಿಸಿದ್ದ ಹೀರೋ ಹೋಂಡ ಸ್ಪ್ಲೆಂಡರ್‌ ಪ್ರೋ ಬೈಕ್‌ ಕಳ್ಳತನವಾಗಿದೆ (Bike Theft). ನ್ಯಾಮತಿಯ ಬೆಳಗುತ್ತಿಯ ಪ್ರಭಾಕರ್‌ ಎಂಬುವವರಿಗೆ ಸೇರಿದ ಬೈಕ್‌ ಕಳುವಾಗಿದೆ ಎಂದು ಆರೋಪಿಸಿ ದೂರ ನೀಡಿದ್ದಾರೆ. ಸಂಜೆ 5 ಗಂಟೆಗೆ ಡಿವಿಎಸ್‌ ಸರ್ಕಲ್‌ ಬಳಿ ಗಾಂಧಿ ಪಾರ್ಕ್‌ ಗೇಟ್‌ ಮುಂಭಾಗ ಬೈಕ್‌ ನಿಲ್ಲಿಸಿದ್ದರು. ರಾತ್ರಿ 8 ಗಂಟೆ ಹೊತ್ತಿಗೆ ಗಾಂಧಿ ಪಾರ್ಕ್‌ ಬಳಿ ಬಂದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ರವೀಂದ್ರನಗರ, ವೆಂಕಟೇಶನಗರದಲ್ಲಿ ಮಾಂಗಲ್ಯ ಸರ ಅಪಹರಣ, ಹೇಗಾಯ್ತು ಘಟನೆ?

Shimoga-Police-Jeep

ಶಿವಮೊಗ್ಗ: ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರ ಸರಗಳ್ಳತನ (Chain snatching) ಮಾಡಿದ್ದಾರೆ. ಒಂದು ಪ್ರಕರಣದಲ್ಲಿ ಮಾಂಗಲ್ಯ ಸರದ ಸ್ವಲ್ಪ ಭಾಗ ಮಾತ್ರ ಕಳ್ಳನ ಪಾಲಾಗಿದೆ. ಎಲ್ಲೆಲ್ಲಿ ಹೇಗಾಯ್ತು ಘಟನೆ? ಪ್ರಕರಣ 1 : ರವೀಂದ್ರ ನಗರ ಸೆ.11ರಂದು ಬೆಳಗ್ಗೆ 6.50ರ ಹೊತ್ತಿಗೆ ಶಿವಮೊಗ್ಗದ ರವೀಂದ್ರನಗರದ ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸುಶೀಲಮ್ಮ ಎಂಬುವವರ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಸರಗಳ್ಳ ಸುಶೀಲಮ್ಮ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ … Read more

ಮಹಿಳಾ ಅಧಿಕಾರಿಗೆ ಮತ್ತೊಬ್ಬ ಮಹಿಳಾ ಅಧಿಕಾರಿಯಿಂದ ಬಂತು ವಾಟ್ಸಪ್‌ ಮೆಸೇಜ್‌, ಆಮೇಲೆ ಕಾದಿತ್ತು ಶಾಕ್

SMS-Fraud-Shimoga-CEN-Police-Station.

ಶಿವಮೊಗ್ಗ: ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ಮತ್ತೊಬ್ಬ ಮಹಿಳಾ ಅಧಿಕಾರಿಗೆ ಹಣಕ್ಕೆ ಬೇಡಿಕೆ ಇಟ್ಟು ₹60,000 ವಂಚಿಸಲಾಗಿದೆ. ಹ್ಯಾಕ್‌ ವಿಚಾರ ಗೊತ್ತಾಗಿದ್ದರಿಂದ ಮಹಿಳಾ ಅಧಿಕಾರಿ ಇನ್ನಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ. ಶಿವಮೊಗ್ಗದ ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಮತ್ತೊಬ್ಬ ಮಹಿಳಾ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದರು. ತಮ್ಮ ಯುಪಿಐ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸಾಗರ್‌ ಕುಮಾರ್‌ ಎಂಬುವವರ ಮೊಬೈಲ್‌ ನಂಬರ್‌ಗೆ ತುರ್ತಾಗಿ ₹60,000 ಫೋನ್‌ ಪೇ ಮೂಲಕ ವರ್ಗಾಯಿಸುವಂತೆ ತಿಳಿಸಲಾಗಿತ್ತು. ಇದನ್ನು … Read more

15 ನಿಮಿಷದ ಬಳಿಕ ಗಾಂಧಿ ಪಾರ್ಕ್‌ ಗೇಟ್‌ ಬಳಿ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

crime name image

ಶಿವಮೊಗ್ಗ: ಡಿವಿಎಸ್‌ ಸರ್ಕಲ್‌ ಬಳಿ ಗಾಂಧಿ ಪಾರ್ಕ್‌ ಗೇಟ್‌ ಮುಂಭಾಗ ನಿಲ್ಲಿಸಿದ್ದ ಆರ್‌.ಎಕ್ಸ್‌..100 ಬೈಕ್‌ (Bike) ಕಳ್ಳತನವಾಗಿದೆ. ಬೈಕ್‌ ನಿಲ್ಲಿಸಿ 15 ನಿಮಿಷದೊಳಗೆ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಜೇಂದ್ರನಗರದ ರಾಜೇಶ್‌ ಎಂಬುವವರು ಸೆ.10ರ ಸಂಜೆ 7.30ರ ಹೊತ್ತಿಗೆ ತಮ್ಮ ಆರ್‌.ಎಕ್ಸ್‌.100 ಬೈಕ್‌ ನಿಲ್ಲಿಸಿ ತೆರಳಿದ್ದರು. ಸಂಜೆ 7.45ರ ಹೊತ್ತಿಗೆ ಅಲ್ಲಿಗೆ ಬಂದಾಗ ಬೈಕ್‌ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ » ಹೊಸನಗರದಲ್ಲಿ ಉಕ್ಕಡ ಮಗುಚಿ … Read more

ಶಿವಮೊಗ್ಗದ ಲೇಡಿ ಡಾಕ್ಟರ್‌ ವಾಟ್ಸಪ್‌ನಿಂದ ಬಂತು ಮೆಸೇಜ್‌, ನಂಬಿದ ವೈದ್ಯನಿಗೆ ನಂತರ ಕಾದಿತ್ತು ಶಾಕ್, ಏನಿದು ಕೇಸ್?

whatsapp-general-image

ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್‌ ಕಳುಹಿಸಿ ₹95,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ವೈದ್ಯೆಯೊಬ್ಬರ (ಹೆಸರು ಗೌಪ್ಯ) ವಾಟ್ಸಪ್‌ ನಂಬರ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್‌ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್‌ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್‌ ನಂಬರ್‌ಗೆ ಫೋನ್‌ ಪೇ ಮೂಲಕ ಎರಡು ಬಾರಿ … Read more

ಆರು ದಿನದಲ್ಲಿ ₹4.86 ಲಕ್ಷ ಕಳೆದುಕೊಂಡ ಶಿವಮೊಗ್ಗದ ವಿದ್ಯಾರ್ಥಿ, ಆಗಿದ್ದೇನು?

Instagram-Cyber-Crime-Shimoga-Station.

ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿದ್ದ (Instagram) ಜಾಹೀರಾತು ನಂಬಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಆರು ದಿನದಲ್ಲಿ ₹4.86 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್‌ ಕುರಿತು ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿದ ವಿದ್ಯಾರ್ಥಿಗೆ ವಿವಿಧ ವಾಟ್ಸಪ್‌ ನಂಬರ್‌ಗಳಿಂದ ಕರೆ ಬಂದಿತ್ತು. ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಆರು ದಿನದಲ್ಲಿ ವಿದ್ಯಾರ್ಥಿಯಿಂದ ₹4.86 ಲಕ್ಷ ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಲಾಭಾಂಶವನ್ನು ನೀಡದೆ ಇದ್ದಾಗ ವಂಚನೆಗೊಳಗಾದ ಅರಿವಾಗಿ ವಿದ್ಯಾರ್ಥಿ … Read more

ತನಿಷ್ಕಾಳ ಮೆಸೇಜ್‌ ನಂಬಿ ₹1.06 ಕೋಟಿ ಕಳೆದುಕೊಂಡ ವ್ಯಕ್ತಿ, ಏನಿದು ಕೇಸ್‌?

Online-Fraud-Case-image

ಶಿವಮೊಗ್ಗ: ಟ್ರೇಡಿಂಗ್‌ (Trading) ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ₹1.06 ಕೋಟಿ ವಂಚಿಸಲಾಗಿದೆ. ಹೇಗಾಯ್ತು ವಂಚನೆ? ಶಿವಮೊಗ್ಗ ಜಿಲ್ಲೆಯ (ಹೆಸರು, ಊರು ಗೌಪ್ಯ) ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ ಟ್ರೇಡಿಂಗ್‌ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿ ವಾಟ್ಸಪ್‌ ಗ್ರೂಪ್‌ಗೆ ಸೇರುವಂತೆ ಲಿಂಕ್‌ ಕಳುಹಿಸಿದ್ದ. ವಾಟ್ಸಪ್‌ ಗ್ರೂಪ್‌ನಲ್ಲಿ ತನಿಷ್ಕಾ ಸನ್ಯಾಮ್‌ ಎಂದು ಪರಿಚಯ ಮಾಡಿಕೊಂಡು, ಟ್ರೇಡಿಂಗ್‌ ಮಾಡುವ ಮೊಬೈಲ್ ಆಪ್‌ ಲಿಂಕ್‌ ಕಳುಹಿಸಿದ್ದರು. ಅದರಲ್ಲಿ ಪೂರ್ಣ ವಿವರ ದಾಖಲಿಸುವಂತೆ … Read more

ಗೋಪಿ ಸರ್ಕಲ್‌ನಿಂದ ರಸ್ತೆ ಉದ್ದಕ್ಕೂ ವಾಹನಗಳಿಗೆ ಡಿಕ್ಕಿ ಹೊಡೆಯುತ್ತ ಸಾಗಿದ ಕಾರು, ಏನಿದು ಕೇಸ್?

Car Mishap at Mahaveera Circle in Shimoga

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಕಾರನ್ನು (CAR) ಯದ್ವತದ್ವ ಚಲಾಯಿಸಿ ಸರಣಿ ಅಪಘಾತ ಮಾಡಿದ್ದಾನೆ. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರಿನ ಮುಂಭಾಗ ಜಖಂ ಆಗಿದೆ. ಘಟನೆ ಸಂಬಂಧ ಹೊನ್ನಾಳಿಯ ಕುಮಾರ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ಪರೀಕ್ಷೆಗೆ ಒಳಪಡಿಸಿದ್ದಾರೆ. ರಸ್ತೆ ಉದ್ದಕ್ಕೂ ವಾಹನಗಳಿಗೆ ಡಿಕ್ಕಿ ಗೋಪಿ ವೃತ್ತದ ಅಂಬಿಕಾ ಬುಕ್‌ ಸ್ಟೋರ್‌ ಸಮೀಪ ಮೊದಲು ವಾಹನವೊಂದಕ್ಕೆ ಡಿಕ್ಕಿ ಹೊಡೆದ ಕಾರು ಬಾಲರಾಜ ಅರಸ್‌ ರಸ್ತೆಯಲ್ಲಿ ಒಟ್ಟು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮಹಾವೀರ ವೃತ್ತದಲ್ಲಿ … Read more