ಎಗ್‌ ರೈಸ್‌ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ ನಾಪತ್ತೆ, ಎಲ್ಲಿ?

crime name image

ಶಿವಮೊಗ್ಗ: ಎಗ್‌ ರೈಸ್‌ ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನವಾಗಿದೆ. ನಗರದ ಕರ್ನಾಟಕ ಸಂಘ ಸಮೀಪ ಬೈಕ್‌ ನಿಲ್ಲಿಸಿದ್ದು ಸ್ವಲ್ಪ ಸಮಯದ ಬಳಿಕ ಹಿಂತಿರುಗಿ ಬಂದ ಬೈಕ್‌ ಇರಲಿಲ್ಲ ಎಂದು ಬೈಕ್‌ ಮಾಲೀಕ ಗುರುಮೂರ್ತಿ ಆರೋಪಿಸಿದ್ದಾರೆ. ಗುರುಮೂರ್ತಿ ಮಧ್ಯಾಹ್ನ 1 ಗಂಟೆಗೆ ಬೈಕ್‌ ನಿಲ್ಲಿಸಿ ಹೋಗಿದ್ದರು. ಸಂಜೆ 4 ಗಂಟೆಗೆ ವಾಪಸ್‌ ಬಂದಾಗ ಬೈಕ್‌ ಇರಲಿಲ್ಲ ಎಂದು ಆಪಾದಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ … Read more

ಪ್ರಯಾಣಿಕರಿಂದ ಬಸ್‌ ಕಂಡಕ್ಟರ್‌ಗೆ 15 ಲಕ್ಷ ವಂಚನೆ, ಏನಿದು ಪ್ರಕರಣ?

Crime-News-General-Image

ಶಿವಮೊಗ್ಗ: ಸರ್ಕಾರಿ ನೌಕರಿ (Government Job) ಕೊಡಿಸುವುದಾಗಿ ನಂಬಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ಕಂಡಕ್ಟರ್‌ ಒಬ್ಬರಿಗೆ ₹15 ಲಕ್ಷ ವಂಚಿಸಲಾಗಿದೆ. ಕೊನೆಗೆ ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೆನ್ನೂ ಓದಿ » ಗಂಟಲಲ್ಲಿ ಸಿಲುಕಿದ ಚಿಕನ್‌ ಮೂಳೆ, ಆಪರೇಷನ್‌ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಹೇಗದು? ಕೆಂಚಪ್ಪ ಕಂಡಕ್ಟರ್‌ ಆಗಿದ್ದಾಗ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರ ಪರಿಚಯವಾಗಿತ್ತು. ತಮಗೆ ಹಲವು ರಾಜಕಾರಣಿಗಳ ಪರಿಚಯವಿದ್ದು ಸರ್ಕಾರಿ ಕೆಲಸ ಕೊಡಿಸುವುದಾಗಿ … Read more

ಶಿವಮೊಗ್ಗ ಸಿಟಿ, ಬೆಳಗಿನ ಜಾವ ನಡುರಸ್ತೆಯಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ, ಏನಿದು ಕೇಸ್?

Sharavathi-Naraga-Main-Road-in-Shimoga

ಶಿವಮೊಗ್ಗ: ತಾಯಿ ಮತ್ತು ಸಹೋದರನನ್ನು ಬಸ್ಸಿಗೆ ಹತ್ತಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು (ಗುರುತು ಗೌಪ್ಯ) ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ (Attempt). ಶಿವಮೊಗ್ಗ ಸರ್ಕಿಟ್‌ ಹೌಸ್‌ ಬಳಿ ಶರಾವತಿ ನಗರ ಎ ಬ್ಲಾಕ್‌ನಲ್ಲಿ ಸೆ.8ರ ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಶಿವಮೊಗ್ಗ ನಗರದ ಯುವತಿಯೊಬ್ಬರು, ತನ್ನ ತಾಯಿ ಮತ್ತು ಸಹೋದರನನ್ನು ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಿಟ್ಟು ಮರಳುತ್ತಿದ್ದರು. ಬಸ್‌ ನಿಲ್ದಾಣದ ಬಳಿ ಇಬ್ಬರು ಯುವಕರು ನಿಂತಿದ್ದರು. … Read more

ಶಿವಮೊಗ್ಗ ಜೈಲಿಗೆ ತಡರಾತ್ರಿ ಧರ್ಮಸ್ಥಳದ ಮಾಸ್ಕ್‌ ಮ್ಯಾನ್‌ ಶಿಫ್ಟ್‌, ಕಾರಣವೇನು?

Mask-Man-chinnaiah-shifted-to-Shimoga-prison

ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ದಫನ್‌ ಮಾಡಿರುವುದಾಗಿ ತಿಳಿಸಿದ್ದ ಮಾಸ್ಕ್‌ ಮ್ಯಾನ್‌ (Mask Man) ಚಿನ್ನಯ್ಯ ಅಲಿಯಾಸ್‌ ಭೀಮನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್‌ ಮಾಡಲಾಗಿದೆ. ತಡರಾತ್ರಿ ದಕ್ಷಿಣ ಕನ್ನಡದ ಪೊಲೀಸರು ಚಿನ್ನಯ್ಯನನ್ನ ಜೈಲಿಗೆ ಕರೆ ತಂದರು. ನಡುರಾತ್ರಿ ಜೈಲಿಗೆ ಶಿಫ್ಟ್‌ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌ ವ್ಯಾನ್‌ನಲ್ಲಿ ಚಿನ್ನಯ್ಯನನ್ನು ವಾಹನದಲ್ಲಿ ಕರೆತಂದರು. ರಾತ್ರಿ 1.30ರ ಹೊತ್ತಿಗೆ ಚಿನ್ನಯ್ಯನನ್ನು ಜೈಲಿನೊಳಗೆ ಕರೆದೊಯ್ಯಲಾಯಿತು. ಕೋರ್ಟ್‌ ಆದೇಶವನ್ನು ಪರಿಶೀಲಿಸಿದ ಜೈಲು ಅಧಿಕಾರಿಗಳು ಚಿನ್ನಯ್ಯನ ತಪಾಸಣೆ ಮಾಡಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಿದ್ದಾರೆ. … Read more

ಶಿವಮೊಗ್ಗದ ಗೃಹಿಣಿಗೆ ₹19,64,391 ವಂಚನೆ, ಹೇಗಾಯ್ತು ಘಟನೆ?

Online-Fraud-Case-image

ಶಿವಮೊಗ್ಗ: ವರ್ಕ್‌ ಫ್ರಂ ಹೋಂ ಹೆಸರಿನಲ್ಲಿ ವಂಚನೆ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯ ಗೃಹಿಣಿಯೊಬ್ಬರು (House Wife) ₹19,64,391 ಹಣ ಕಳೆದುಕೊಂಡಿದ್ದಾರೆ. ಟ್ರಾವಲ್‌ ಸಂಸ್ಥೆಯೊಂದರಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದೆ ಎಂದು ಟೆಲಿಗ್ರಾಂ ಗ್ರೂಪ್‌ನಲ್ಲಿ ಮೆಸೇಜ್‌ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಗೆ ವಿವಿಧ ಟಾಸ್ಕ್‌ ನೀಡುವುದಾಗಿ ನಂಬಿಸಲಾಗಿತ್ತು. ಹಣ ಹೂಡಿಕೆ ಮಾಡಿ ಟಾಸ್ಕ್‌ ಪೂರೈಸಿದರೆ ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂದು ಗೃಹಿಣಿಗೆ ನಂಬಿಸಲಾಗಿತ್ತು. ಆ.4 ರಿಂದ ಆ.31ರವರೆಗೆ ಹಣ ಗೃಹಿಣಿ ಒಟ್ಟು ₹19,64,391 ಹಣ ಹೂಡಿಕೆ ಮಾಡಿದ್ದರು. … Read more

ಟೆಲಿಗ್ರಾಂನಲ್ಲಿ ಬಂತು ಮೆಸೇಜ್‌, ಎರಡು ದಿನದ ಬಳಿಕ ಮಹಿಳಾ ಇಂಜಿನಿಯರ್‌ಗೆ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ (Stock Exchange) ಉದ್ಯೋಗವಕಾಶವಿದೆ ಎಂದು ನಂಬಸಿ ಶಿವಮೊಗ್ಗದ ಮಹಿಳಾ ಇಂಜಿನಿಯರ್‌ ಒಬ್ಬರಿಗೆ ₹7,57,276 ವಂಚಿಸಲಾಗಿದೆ. ಟೆಲಿಗ್ರಾಂ ಆಪ್‌ನಲ್ಲಿ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಉದ್ಯೋಗವಕಾಶವಿದೆ ಎಂದು ಮೆಸೇಜ್‌ ಬಂದಿತ್ತು. ಇದನ್ನು ನಂಬಿದ ಮಹಿಳಾ ಇಂಜಿನಿಯರ್‌, ಲಿಂಕ್‌ ಕ್ಲಿಕ್‌ ಮಾಡಿದ್ದರು. ರಿಪ್ಲೆ ಮಾಡಿದ ವಂಚಕರು ಹಣ ಹೂಡಿಕೆ ಮಾಡಿ ವಿವಿಧ ಟಾಸ್ಕ್‌ ಪೂರೈಸಿದರೆ ಅಧಿಕ ಆದಾಯ ಗಳಿಸಬಹುದು ಎಂದು ನಂಬಿಸಿದ್ದರು. ಆ.27 ಮತ್ತು 28ರಂದು ವಿವಿಧ ಟಾಸ್ಕ್‌ ಪೂರೈಸಲು ವಂಚಕರ ಖಾತೆಗೆ ಮಹಿಳಾ ಇಂಜಿನಿಯರ್‌ … Read more

ಬೆಳ್ಳಂಬೆಳಗ್ಗೆ ಮನೆಯಿಂದ ಹೊರ ಬಂದ ಯುವಕನಿಗೆ ಕಾದಿತ್ತು ಶಾಕ್

bike theft reference image

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್‌ ಎನ್‌ಎಸ್‌ 200 ಬೈಕ್‌ (Bike) ಕಳ್ಳತನವಾಗಿದೆ. ಶಿವಮೊಗ್ಗದ ಬಿ.ಬಿ.ರಸ್ತೆಯ ಶರತ್‌ ಎಂಬುವವರಿಗೆ ಸೇರಿದ ಬೈಕ್‌ ನಾಪತ್ತೆಯಾಗಿದೆ. ಆ.10ರ ನಡುರಾತ್ರಿ ಶರತ್‌ ಮನೆಗೆ ಬಂದು ಬೈಕ್‌ ನಿಲ್ಲಿಸಿದ್ದರು. ಬೆಳಗ್ಗೆ 6 ಗಂಟೆ ಹೊತ್ತಿಗೆ ಮನೆಯಿಂದ ಹೊರ ಬಂದಾ ಬೈಕ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ‌ ಇದನ್ನೂ ಓದಿ » ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಬದಲು, ಹೊಸ ಟೈಮ್‌ಟೇಬಲ್‌ ಏನು? … Read more

ನಮಾಜ್‌ ಮುಗಿಸಿ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

bike theft reference image

ಶಿವಮೊಗ್ಗ: ನಮಾಜ್‌ ಮುಗಿಸಿ ಮಸೀದಿಯಿಂದ ಹೊರಗೆ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಬೈಕ್‌ ಕಳ್ಳತನವಾಗಿದೆ. ಸಯ್ಯದ್‌ ಅಬ್ಬಾಸ್‌ ಎಂಬುವವರ ಬೈಕ್‌ (Bike Theft) ಕಳುವಾಗಿದೆ. ನಗರದ ಸುಲ್ತಾನ್‌ ಮೊಹಲ್ಲಾದ ಮಸೀದಿ ಮುಂಭಾಗ ಆ.8ರಂದು ಸಯ್ಯದ್‌ ಅಬ್ಬಾಸ್‌ ಬೈಕ್‌ ನಿಲ್ಲಿಸಿದ್ದರು. ಮಸೀದಿಯಲ್ಲಿ ಮಧ್ಯಾಹ್ನ ನಮಾಜ್‌ ಮುಗಿಸಿ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಕಾರಿನಲ್ಲಿ ಬಂದು ಹೆದ್ದಾರಿಯಲ್ಲಿ ಕ್ಯಾಂಟರ್‌ ಲಾರಿ ಅಡ್ಡಗಟ್ಟಿ ₹4 ಲಕ್ಷಕ್ಕೆ ಡಿಮಾಂಡ್‌, ಡ್ರೈವರ್‌ … Read more

ಕುವೆಂಪು ರಂಗಮಂದಿರದಲ್ಲಿ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ನಾಪತ್ತೆ

20923-Kuvempu-Rangamandira-in-Shimoga.webp

ಶಿವಮೊಗ್ಗ: ಕುವೆಂಪು ರಂಗಮಂದಿರದ ಆವರಣದಲ್ಲಿ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ (Bike) ನಾಪತ್ತೆಯಾಗಿದೆ. ಟ್ಯಾಂಕ್‌ ಮೊಹಲ್ಲಾದ ನಿಖಿಲ್‌ ಮೂರ್ತಿ ಎಂಬುವವರು ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಅನ್ನು ಆ.20ರಂದು ಕುವೆಂಪು ರಂಗಮಂದಿರದ ಆವರಣದಲ್ಲಿ ನಿಲ್ಲಿಸಿದ್ದರು. ಬೆಳಗ್ಗೆ 11.30ಕ್ಕೆ ಬೈಕ್‌ ನಿಲ್ಲಿಸಿದ್ದು ಮಧ್ಯಾಹ್ನ 2.30ಕ್ಕೆ ಸ್ಥಳಕ್ಕೆ ಬಂದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ತೀರ್ಥಹಳ್ಳಿಯ ವ್ಯಕ್ತಿಗೆ 20 ವರ್ಷ ಜೈಲು, ₹75,000 ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, … Read more

ಇನ್‌ಸ್ಟಾಗ್ರಾಂನಲ್ಲಿ ಸಹೋದರಿಯ ಫೋಟೊ ಕಂಡು ಯುವಕನಿಗೆ ಶಾಕ್‌, ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

Instagram-Cyber-Crime-Shimoga-Station.

ಶಿವಮೊಗ್ಗ: ಮಹಿಳೆಯೊಬ್ಬರ ಫೋಟೊ ಮೇಲೆ ಅಶ್ಲೀಲವಾಗಿ ಬರೆದು ಇನ್‌ಸ್ಟಾಗ್ರಾಂ (Instagram) ಖಾತೆಯೊಂದರಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಗೃಹಿಣಿಯ (ಹೆಸರು ಗೌಪ್ಯ) ಸಹೋದರ ಇನ್‌ಸ್ಟಾಗ್ರಂ ನೋಡುತ್ತಿದ್ದಾಗ ಅವರ ಸಹೋದರಿಯ ಫೋಟೊ ಕಾಣಿಸಿದೆ. ಅದರ ಮೇಲೆ ಆಶ್ಲೀಲ ಬರೆವಣಿಗೆ ಇತ್ತು. ಇದನ್ನು ಸಹೋದರಿಗೆ ತೋರಿಸಿದ್ದ. ಹಾಗಾಗಿ, ತನ್ನ ಫೋಟೊವನ್ನು ಕದ್ದು ಅನುಮತಿ ಇಲ್ಲದೆ ಅಪ್ಲೋಡ್‌ ಮಾಡಿದ್ದಲ್ಲದೆ ಅದರ ಮೇಲೆ ಆಶ್ಲೀಲವಾಗಿ ಬರೆಯಲಾಗಿದೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. … Read more