ಖಾಸಗಿ ಬಸ್‌, ಟಾಟಾ ಏಸ್‌ ಮುಖಾಮುಖಿ ಡಿಕ್ಕಿ, ಹತ್ತಕ್ಕು ಹೆಚ್ಚು ಕುರಿಗಳು ಸಾವು

Bus-Tata-Ace-crash-in-Shiralakoppa-in-Shikaripura-taluk

ಶಿಕಾರಿಪುರ : ಖಾಸಗಿ ಬಸ್‌ ಮತ್ತು ಟಾಟಾ ಏಸ್‌ ವಾಹನ ಡಿಕ್ಕಿಯಾಗಿ (Crash) ಐವರು ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ನರಸಾಪುರ ಸಮೀಪ ಇಂದು ಸಂಜೆ ಘಟನೆ ಸಂಭವಿಸಿದೆ. ಶಿರಾಳಕೊಪ್ಪದ ಕಡೆಯಿಂದ ಹೋಗುತ್ತಿದ್ದ ಖಾಸಗಿ ಬಸ್ಸು, ಚಿಕ್ಕೇರೂರು ಕಡೆಯಿಂದ ಬರುತ್ತಿದ್ದ ಕುರಿಗಾಹಿಗಳ ಟಾಟಾ ಏಸ್‌ ವಾಹನ ಡಿಕ್ಕಿಯಾಗಿವೆ (Crash). ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಟಾಟಾ ಏಸ್‌ನಲ್ಲಿದ್ದ ಕುರಿಗಾಹಿಗಳು ಗಾಯಗೊಂಡಿದ್ದಾರೆ. ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ. ಟಾಟಾ ಏಸ್‌ ಸಂಪೂರ್ಣ ಹಾನಿಗೀಡಾಗಿದೆ. ಶಿರಾಳಕೊಪ್ಪ ಪೊಲೀಸ್‌ … Read more

ಶಿವಮೊಗ್ಗದ ವ್ಯಕ್ತಿಯ ವಾಟ್ಸಪ್‌ಗೆ ಬಂತು ಟ್ರಾಫಿಕ್‌ ಚಲನ್‌, ಕ್ಲಿಕ್‌ ಮಾಡಿದ ನಂತರ ಕಾದಿತ್ತು ಶಾಕ್‌, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ : ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್‌ನ ವಾಟ್ಸಪ್‌ಗೆ ಟ್ರಾಫಿಕ್‌ ಚಲನ್‌ ಎಂದು ಎ.ಪಿ.ಕೆ ಫೈಲ್‌ (APK File) ಕಳುಹಿಸಿ ಮೂರು ಬ್ಯಾಂಕ್‌ ಖಾತೆಗಳಿಂದ 7.42 ಲಕ್ಷ ರೂ. ಲಪಟಾಯಿಸಿದ್ದಾರೆ. ಈ ಕುರಿತು ನಿವೃತ್ತ ಉದ್ಯೋಗಿಯು ಶಿವಮೊಗ್ಗ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಏ.2ರಂದು ನಿವೃತ್ತ ಉದ್ಯೋಗಿಯ ವಾಟ್ಸಪ್‌ಗೆ ಟ್ರಾಪಿಕ್‌ ಚಲನ್‌ 1000 ಎಂದು ಪಿಡಿಎಫ್‌ ಫೈಲ್‌ ಮಾದರಿಯಲ್ಲಿರುವ ಎ.ಪಿ.ಕೆ ಫೈಲ್‌ (APK File)  ಬಂದಿತ್ತು. ಇದನ್ನು ಕ್ಲಿಕ್‌ ಮಾಡಿದಾಗ ಕರ್ನಾಟಕ ಸರ್ಕಾರದ ಚಿಹ್ನೆ ಇತ್ತು. ಏ.8ರಂದು … Read more

ಒಂದು ಲಕ್ಷ ರೂ. ಲಂಚದ ಜೊತೆ ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ ಚೀಫ್‌ ಇಂಜಿನಿಯರ್‌, ಏನಿದು ಕೇಸ್‌?

Lokayuktha-Raid-General-Image

ಶಿವಮೊಗ್ಗ : ಒಂದು ಲಕ್ಷ ರೂ. ಲಂಚ (Bribe) ಪಡೆಯುತ್ತಿದ್ದ ಸಂದರ್ಭ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಭಾರ ಚೀಫ್‌ ಇಂಜಿನಿಯರ್‌ ಕೃಷ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 11 ಲಕ್ಷ ರೂ. ಮೊತ್ತದ ಬಿಲ್‌ ಪಾವತಿಗೆ ಕೃಷ್ಣಪ್ಪ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇವತ್ತು ಹಣ ಪಡೆಯುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಎಕ್ಸ್‌ಟ್ರೀಮ್‌ ಮೀಡಿಯಾ ಸಂಸ್ಥೆಯ ಎಕ್ಸಿಕ್ಯೂಟಿವ್‌ ಸೈಟ್‌ ಇಂಜಿನಿಯರ್‌ ಪವನ್‌ ಅವರಿಂದ ಸ್ಮಾರ್ಟ್‌ ಸಿಟಿಯ ಪ್ರಭಾರ … Read more

ಜನರಿಂದ ತಪ್ಪಿಸಿಕೊಳ್ಳುವಾಗ ಗುಂಡಿಗೆ ಬಿದ್ದ ಕಳ್ಳ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಗ್ರಾಮಸ್ಥರು

Thirthahalli-News-Update

ತೀರ್ಥಹಳ್ಳಿ : ಮನೆಗಳ್ಳತನಕ್ಕೆ (Thief) ಬಂದಾತ ಜನರನ್ನು ಕಂಡು ಪರಾರಿಯಾಗುವಾಗ ಜಲಜೀವನ್‌ ಮಿಷನ್‌ ಯೋಜನೆಯ ಪೈಪ್‌ ಅಳವಡಿಸಲು ತೋಡಿದ್ದ ಗುಂಡಿ ಬಿದ್ದು ಗಾಯಗೊಂಡಿದ್ದಾನೆ. ಊರಿನವರೆ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ ಗೌಡಗೆ ಇ.ಡಿ ಪ್ರಶ್ನೆ, ಸತತ 11 ಗಂಟೆ ವಿಚಾರಣೆ ತೀರ್ಥಹಳ್ಳಿ ತಾಲೂಕು ದೇಮ್ಲಾಪುರ ಗ್ರಾಮದ ಚಂದ್ರಶೇಖರ್‌ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದಾಗ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಚಂದ್ರಶೇಖರ್‌ ಅವರು ತೋಟದಲ್ಲಿ ಔಷಧಿ … Read more

ರಸ್ತೆ ಬದಿ ಲಂಚ ಪಡೆಯುತ್ತಿದ್ದ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ, ಎಲ್ಲಿ? ಏನಿದು ಕೇಸ್‌?

Lokayukta-Raid-in-Sagara

ಸಾಗರ : ರೈತರೊಬ್ಬರಿಂದ ರಸ್ತೆ ಬದಿಯಲ್ಲಿ ನಿಂತು ಹಣ ಸ್ವೀಕರಿಸುತ್ತಿದ್ದ ರಾಜಸ್ವ ನಿರೀಕ್ಷಕ ಲೋಕಾಯುಕ್ತರಿಗೆ ರೆಡ್‌ ಹ್ಯಾಂಡ್‌ (Red Handed) ಆಗಿ ಸಿಕ್ಕಿಬಿದ್ದಿದ್ದಾನೆ. ಲಂಚ ಪಡೆಯುತ್ತಿದ್ದ ತಾಳಗುಪ್ಪ ಹೋಬಳಿಯ ರಾಜಸ್ವ ನಿರೀಕ್ಷಕ (ಆರ್.ಐ) ಮಂಜುನಾಥ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದ ವಿವಿಧೆಡೆ ಇ.ಡಿ ದಾಳಿ, ಬೆಂಗಳೂರಿನಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡ ವಿಚಾರಣೆ ತಾಳಗುಪ್ಪ ಹೋಬಳಿಯ ಮುಂಡಿಗೆಹಳ್ಳದ ಕೃಷ್ಣಮೂರ್ತಿ ಎಂಬುವವರ ಜಮೀನು ಸಮತಟ್ಟು ಮಾಡಲು ತಹಶೀಲ್ದಾರ್‌ ಅವರಿಗೆ ಅರ್ಜಿ ಸಲ್ಲಿಸಿದ್ದರು. … Read more

ಗೋಪಿ ಸರ್ಕಲ್‌ನಲ್ಲಿ ದಿನಸಿ ಖರೀದಿಸಿ ಮನೆಗೆ ಮರಳಿದ ದಂಪತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Police-Jeep-at-Shimoga-General-Image

ಶಿವಮೊಗ್ಗ : ದಿನಸಿ ಖರೀದಿಸಿ ಹಿಂತಿರುಗುವಷ್ಟರಲ್ಲಿ ಮನೆಯಲ್ಲಿ (House) ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಸವಳಂಗ ರಸ್ತೆಯ ಜ್ಯೋತಿನಗರದ ಪ್ರಕಾಶ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಪ್ರಕಾಶ್‌ ಅವರು ತಮ್ಮ ಪತ್ನಿಯೊಂದಿಗೆ ಗೋಪಿ ಸರ್ಕಲ್‌ನಲ್ಲಿ ದಿನಸಿ ಖರೀದಿಗೆ ತೆರಳಿದ್ದರು. ಮನೆಗೆ (House) ಹಿಂತಿರುಗಿ ಬೆಡ್‌ ರೂಂಗೆ ಹೋದಾಗ ಚಿನ್ನಾಭರಣದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬೀರುವಿನಲ್ಲಿಟ್ಟಿದ್ದ 9 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 51 ಸಾವಿರ ರೂ. ನಗದು ನಾಪತ್ತೆಯಾಗಿವೆ ಎಂದು … Read more

ಕುಡಿಯುವ ನೀರಿನ ಘಟಕದ ಕಾಯಿನ್‌ ಬಾಕ್ಸ್‌ ಒಡೆದು ಹಣ ದೋಚಿದ ಖದೀಮರು, ಎಲ್ಲಿ?

Police-Jeep-With-Light-New.

ಶಿವಮೊಗ್ಗ : ಶುದ್ಧ ಕುಡಿಯುವ ನೀರಿನ ಘಟಕದಲ್ಲಿರುವ ಕಾಯಿನ್‌ ಬಾಕ್ಸ್‌ (Coin Box) ಒಡೆದು ಹಣ ಕಳ್ಳತನ ಮಾಡಲಾಗಿದೆ. ಗೆಜ್ಜೇನಹಳ್ಳಿಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಘಟಕದಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ವತಿಯಿಂದ ಗೆಜ್ಜೇನಹಳ್ಳಿಯಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. 5 ರೂ. ಕಾಯಿನ್‌ ಹಾಕಿದರೆ 20 ಲೀಟರ್‌ ಶುದ್ಧ ಕುಡಿಯುವ ನೀರು ಬರುತ್ತದೆ. ಕಳೆದ ಗುರುವಾರ ನೀರಿನ ಘಟಕದ ಕಾಯಿನ್‌ ಬಾಕ್ಸ್‌  (Coin Box) ಒಡೆದು ಸುಮಾರು 8 ಸಾವಿರ ರೂ. ಹಣ ದೋಚಲಾಗಿದೆ ಎಂದು … Read more

ಬೆಳಗ್ಗೆ ಜಿಮ್‌ಗೆ ತೆರಳಲು ಮನೆಯಿಂದ ಹೊರ ಬಂದ ಯುವಕನಿಗೆ ಆಘಾತ, ಆಗಿದ್ದೇನು?

bike theft reference image

ಶಿವಮೊಗ್ಗ : ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಎರಡು ಬೈಕುಗಳನ್ನು ರಾತ್ರೋರಾತ್ರಿ ಕಳ್ಳತನ (Theft) ಮಾಡಲಾಗಿದೆ. ಎಲ್‌.ಬಿ.ಎಸ್‌ ನಗರದಲ್ಲಿ ಘಟನೆ ಸಂಭವಿಸಿದೆ. ರಾಜ್‌ಕಮಲ್‌ ಮತ್ತು ರಾಜೇಶ್‌ ಎಂಬುವವರ ಬೈಕುಗಳು ಕಳ್ಳತನವಾಗಿವೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ ರಾಜ್‌ಕಮಲ್‌ ಅವರ ಮನೆಯ ಕೆಳಗೆ ರಾಜೇಶ್‌ ಎಂಬುವವರು ಬಾಡಿಗೆಗೆ ವಾಸವಾಗಿದ್ದಾರೆ. ಇಬ್ಬರ ಬೈಕುಗಳನ್ನು ಮನೆಯ ಕಾಂಪೌಂಡ್‌ನ ಒಳಗೆ ರಾತ್ರಿ ನಿಲ್ಲಿಸಲಾಗಿತ್ತು. ರಾಜ್‌ಕಮಲ್‌ ಬೆಳಗ್ಗೆ ಜಿಮ್‌ಗೆ ತೆರಳಲು ಹೊರ ಬಂದಾಗ ಎರಡು … Read more

ಬ್ಯೂಟಿ ಪಾರ್ಲರ್‌ ಬಾಗಿಲು ತೆಗೆದಾಗ ಮಾಲೀಕರಿಗೆ ಶಾಕ್‌, ಸಿಸಿಟಿವಿ ಚೆಕ್‌ ಮಾಡಿದಾಗ ಕಾದಿತ್ತು ಆಘಾತ

Police-Jeep-in-Shimoga-city

ಶಿವಮೊಗ್ಗ : ಬ್ಯೂಟಿ ಪಾರ್ಲರ್‌ನ ಇಂಟೀರಿಯರ್‌ (Interior Design) ಕೆಲಸಕ್ಕೆ ಬಂದವರು ರಾತ್ರೋರಾತ್ರಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮರುದಿನ ಬೆಳಗ್ಗೆ ಬ್ಯೂಟಿ ಪಾರ್ಲರ್‌ ಮಾಲೀಕರು ಅಲ್ಲಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿನೋಬನಗರ 60 ಅಡಿ ರಸ್ತೆಯ ಶುಭಮಂಗಳ ಕಲ್ಯಾಣ ಮಂಟಪದ ಬಳಿ ನೇತ್ರಾವತಿ ಎಂಬುವವರು ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದು, ಅದರ ಇಂಟೀರಿಯರ್‌ ಡಿಸೈನಿಂಗ್‌ ಕೆಲಸ ಮಾಡಿಸುತ್ತಿದ್ದರು. ತಮಿಳುನಾಡಿನಿಂದ ಬಂದಿದ್ದ ಐವರು ಇಲ್ಲಿ ಕೆಲಸ ಮಾಡಿಕೊಂಡು, ರಾತ್ರಿ ವೇಳೆ ಬ್ಯೂಟಿ ಪಾರ್ಲರ್‌ನಲ್ಲಿಯೆ ಉಳಿದುಕೊಳ್ಳುತ್ತಿದ್ದರು. ಸಿಸಿಟಿವಿ ಪರಿಶೀಲಿಸಿದಾಗ … Read more

ಶಿವಮೊಗ್ಗದಲ್ಲಿ ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು ಕೊಂಡೊಯ್ದ, ಹಿಂತಿರುಗಲೇ ಇಲ್ಲ, ಹೇಗಾಯ್ತು ಘಟನೆ?

crime name image

ಶಿವಮೊಗ್ಗ : ಖರೀದಿಸುವವನಂತೆ ಬಂದು ಬೈಕ್‌ ಟ್ರಯಲ್‌ (Trail) ನೋಡಲು ಕೊಂಡೊಯ್ದವನು ಹಿಂತಿರುಗಿಲ್ಲ ಎಂದು ಆರೋಪಿಸಿ ಬೈಕ್‌ ಮಾಲೀಕ ದೂರು ನೀಡಿದ್ದಾನೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರದ ಪ್ರಮೋದ್‌ ಭಟ್‌ ಎಂಬುವವರು ತಮ್ಮ ಪಲ್ಸರ್‌ ಬೈಕ್‌ ಮಾರಾಟ ಮಾಡಲು ನಿರ್ಧರಿಸಿ ಫೇಸ್‌ಬುಕ್‌ನಲ್ಲಿ ವಿವರ ಪ್ರಕಟಿಸಿದ್ದರು. ಬೆಂಗಳೂರು ವಾಸಿ ನವೀನ್‌ ಎಂಬಾತ ಇದಕ್ಕೆ ರಿಪ್ಲೆ ಮಾಡಿ, ಬೈಕ್‌ನ ವಿವರ ಪಡೆದುಕೊಂಡಿದ್ದ. ಮಾ.30ರಂದು ಶಿವಮೊಗ್ಗಕ್ಕೆ ಬರುವುದಾಗಿ ಆತ ತಿಳಿಸಿದ್ದರಿಂದ ಪ್ರಮೋದ್‌ ಭಟ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ … Read more