ಬೆಳಗ್ಗೆ ತೋಟಕ್ಕೆ ಬಂದ ಮಾಲೀಕನಿಗೆ ಶಾಕ್, 68 ಮರಗಳಲ್ಲಿದ್ದ ಅಡಕೆ ಕೊನೆಗಳು ನಾಪತ್ತೆ
ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 4 ಸೆಪ್ಟೆಂಬರ್ 2021 ಒಂದೆಡೆ ಅಡಕೆ ಬೆಲೆ ಗಗನಮುಖಿಯಾಗುತ್ತಿದೆ. ಬೆಳಗಾರರಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದೆಡೆ ಅಡಕೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ರಾತ್ರೋರಾತ್ರಿ ತೋಟವೊಂದರಿಂದ ಅಡಕೆ ಕೊನೆಗಳನ್ನು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ. ಶಿಕಾರಿಪುರ ತಾಲೂಕು ಉಡುಗಣಿ ಹೋಬಳಿಯ ಕೊಡಿಕೊಪ್ಪ ಗ್ರಾಮದ ತೋಟವೊಂದರಲ್ಲಿ ಅಡಕೆ ಕೊನೆಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಜಯಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ರಾತ್ರಿ ಕಳ್ಳರು ಅಡಕೆ ಕೊನೆಗಳನ್ನು ಕೊಯ್ದುಕೊಂಡು ಹೋಗಿದ್ದಾರೆ. 68 ಮರಗಳಿಂದ ಕೊನೆ ಕಳವು ಮಾಡಲಾಗಿದೆ. … Read more