ಗಾಜನೂರು ಬಳಿ ರಸ್ತೆಗೆ ಬಂತು ತುಂಗಾ ನದಿ ನೀರು, ತೋಟ, ಗದ್ದೆಗಳು ಜಲಾವೃತ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಗಾಜನೂರು ಸಮೀಪ ತುಂಗಾ ನದಿ ನೀರು ರಸ್ತೆಗೆ ನುಗ್ಗಿದೆ. ಇದರಿಂದ ರಸ್ತೆ ಸಂಚಾರ ಕೆಲಕಾಲ ವ್ಯತ್ಯಯವಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಕಷ್ಟಪಡಬೇಕಾಯಿತು. ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದ ಸಮೀಪದಲ್ಲೇ ಹೊಳೆಯಿಂದ ನೀರು ರಸ್ತೆಗೆ ಬಂದಿದೆ. ಇಲ್ಲಿನ ತೋಟ, ಗದ್ದೆಗೆ ನೀರು ನುಗ್ಗಿದೆ. ಹಾಗಾಗಿ ಸುತ್ತಮುತ್ತಲ ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಇನ್ನು, ಗಾಜನೂರು ಕಡೆಯಿಂದ … Read more