‘ತೀರ್ಥಹಳ್ಳಿ, ಭದ್ರಾವತಿಯಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್​​ಗೆ ಅಧಿಕಾರ, ಮಧು ಬಂಗಾರಪ್ಪ ಸೇರ್ಪಡೆಯಿಂದ ಪಕ್ಷಕ್ಕೆ ಬಲ’

170721 R Prasanna Kumar MLC 1

ಶಿವಮೊಗ್ಗ ಲೈವ್.ಕಾಂ | ANAVATTI  NEWS | 17 ಜುಲೈ 2021 ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಯಾಗಲಿದೆ ಎಂದು ವಿಧಾನ ಪರಿಷತ್‍ ಸದಸ್ಯ ಆರ್. ಪ್ರಸನ್ನಕುಮಾರ್ ತಿಳಿಸಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಈ ಭಾಗದ ಪ್ರಮುಖ ನಾಯಕರಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ತಿಳಿಸಿದರು. ತೀರ್ಥಹಳ್ಳಿ, ಭದ್ರಾವತಿ ಫಲಿತಾಂಶ ಸಾಕ್ಷಿ ಜಿಲ್ಲೆಯಲ್ಲಿ … Read more

ಜೋಕಾಲಿಯ ಸೀರೆ ಕೊರಳಿಗೆ ಸುತ್ತಿಕೊಂಡು ಉಸಿರುಗಟ್ಟಿ ಬಾಲಕ ಸಾವು

HIVAMOGGA-NEWS- map

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2021 ಮಕ್ಕಳ ಆಟಕ್ಕಾಗಿ ಕಟ್ಟಿದ್ದ ಜೋಕಾಲಿಯ ಸೀರೆ ಕೊರಳಿಗೆ ಸುತ್ತಿಕೊಂಡ ಪರಿಣಾಮ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕಿಶೋರ್ (13) ಮೃತ ಬಾಲಕ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಕಿಶೋರ್, ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದವನು. ಹಾಡೋನಹಳ್ಳಿಯ ದೊಡ್ಡಮ್ಮ ಜಯಮ್ಮ ಎಂಬುವರ ಮನೆಯಲ್ಲಿದ್ದುಕೊಂಡು ಕಿಶೋರ್‌ ವಿದ್ಯಾಭ್ಯಾಸ ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಣ್ಣ ಮಗುವಿಗಾಗಿ ಕಟ್ಟಿದ ಸೀರೆಯಲ್ಲಿ ಜೋಕಾಲಿ … Read more

ಸಾಗರ ಪಟ್ಟಣದಲ್ಲಿ ಅಬಕಾರಿ ಅಧಿಕಾರಿಗಳ ದಿಢೀರ್ ದಾಳಿ

160721 Ganja Raid at Sagara City 1

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಸಾಗರ ಪಟ್ಟಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾರಾಟಕ್ಕೆ ಇರಿಸಿದ್ದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಲ್ಲಿನ ಅರಮನೆ ಕೆರೆ ಸುಭಾಷ್ ನಗರದ ಕಟ್ಟಡವೊಂದರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೊಹಮ್ಮದ್ ಫಾರೂಕ್ ಎಂಬಾತ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಇಟ್ಟುಕೊಂಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಶೋಧ ಕಾರ್ಯ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ 1.230 ಕೆ.ಜಿ ಒಣ … Read more

40 ಕೆಜಿ ಅಕ್ಕಿ ಪ್ಯಾಕೆಟ್​​​ನಲ್ಲಿ ಮೂರು ಕೆಜಿ ನಾಪತ್ತೆ, ನ್ಯಾಯಬೆಲೆ ಅಂಗಡಿಗೆ ಬಿತ್ತು ಬೀಗ

Bhadravathi News Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 16 ಜುಲೈ 2021 ತೂಕದಲ್ಲಿ ವಂಚನೆ ಮಾಡಿದ ಆರೋಪದ ಮೇಲೆ ನ್ಯಾಯಬೆಲೆ ಅಂಗಡಿಯೊಂದರ ಪರವಾನಗಿಯನ್ನೆ ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಪಡಿತರ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಈ ಕ್ರಮ ಕೈಗೊಂಡಿದ್ದಾರೆ. ಭದ್ರಾವತಿಯ ಜಿಂಕ್‍ಲೈನ್‍ನಲ್ಲಿರುವ ಕಾಮಧೇನು ನ್ಯಾಯಬೆಲೆ ಅಂಗಡಿಯನ ಪರವಾನಗಿ ಅಮಾನತು ಮಾಡಲಾಗಿದೆ. ನಗರಸಭೆ ವ್ಯಾಪ್ತಿಯ 31ನೇ ವಾರ್ಡಿಗೆ ಸೇರಿದ ನ್ಯಾಯ ಬೆಲೆ ಅಂಗಡಿ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮಾಪನ ಶಾಸ್ತ್ರ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ … Read more

ಭಾರಿ ಮಳೆಗೆ ಸಾಗರದಲ್ಲಿ ಧರೆ ಕುಸಿತ, ಎರಡು ಕಡೆ ಮನೆಗಳಿಗೆ ಹಾನಿ

160721 Sagara Arehada Rain Effect 1

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಭಾರಿ ಮಳೆಗೆ ಸಾಗರ ತಾಲೂಕಿನಲ್ಲಿ ಮನೆಯ ಗೋಡೆ ಮತ್ತು ಧರೆ ಕುಸಿದ ವರದಿಯಾಗಿದೆ. ತಾಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹದ ಗ್ರಾಮದಪ್ಪಿ ಭಾರಿ ಮಳೆಗೆ ತೋಟದ ಮೇಲಿನ ಧರೆ ಕುಸಿದಿದೆ. ಅರೆಹದ ಗ್ರಾಮದ ಸರ್ವೇ ನಂ. 72ರಲ್ಲಿ ಎಂ.ಆರ್.ಸುಬ್ಬರಾವ್ ಎಂಬುವವರಿಗೆ ಸೇರಿದ ಅಡಕೆ ತೋಟದ ಮೇಲ್ಬಾಗದ ಸುಮಾರು 30 ಅಡಿ ಎತ್ತರದ ಧರೆ ಕುಸಿದಿದ್ದು. ಅಡಕೆ ಮರಗಳು ಹಾನಿಯಾಗಿವೆ. ಸುಮಾರು 35 ಅಡಿಯಷ್ಟು … Read more

ಕುಂಚೇನಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಸಂವಾದ, ಲಂಬಾಣಿ ಭಾಷೆಗೆ ಲಿಪಿಯ ಗೌರವದ ಭರವಸೆ

218426444 3080275252192673 2809076535050331192 n 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ಸಾವಿರಾರು ವರ್ಷಗಳ ಇತಿಹಾಸ ಇರುವ ಲಂಬಾಣಿ ಭಾಷೆಗೆ ಲಿಪಿಯ ಗೌರವ ತಂದುಕೊಡುವ ಕುರಿತು ತಜ್ಞರೊಂದಿಗೆ ಸಮಾಲೋಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ತಾಂಡದಲ್ಲಿ ಲಂಬಾಣಿ ಸಮುದಾಯದವರ ಜೊತೆ ಸಂವಾದ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಂಜಾರ ಸಮುದಾಯವರು ರಾಜ್ಯದಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲೂ ಇದ್ದಾರೆ. ಲಂಬಾಣಿ ಭಾಷೆಗೆ ಲಿಪಿಯ ಗೌರವ ತಂದುಕೊಡುವುದರಿಂದ ಅದನ್ನು ಮತ್ತಷ್ಟು … Read more

ಹೊಳೆಹೊನ್ನೂರು ರಸ್ತೆ ಬಳಿ ಭದ್ರಾವತಿ ಹಳೆ ನಗರ ಠಾಣೆ ಪೊಲೀಸರಿಂದ ದಾಳಿ, ಸಿಕ್ಕಿಬಿದ್ದರು ಆರು ಮಂದಿ

Bhadravathi Name Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ಹೊಳೆಹೊನ್ನೂರು ರಸ್ತೆ ಬಳಿ ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಮಾಡುತ್ತಿದ್ದ ಯುವಕರ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಳೆ ನಗರ ಠಾಣೆ ವ್ಯಾಪ್ತಿಯ ಹಳೆಸೀಗೆಬಾಗಿ ಬಳಿ ದಾಳಿ ನಡೆಸಿದ ಪೊಲೀಸರು ಭದ್ರಾವತಿ ಹೊಸಮನೆಯ ದಕ್ಷಿಣಾ ಮೂರ್ತಿ (37), ಸುದೀಪ್ (30), ವಿಜಯನಗರದ ಡ್ಯಾನಿಯಲ್ (25), ಸಂತೆ ಮೈದಾನದ ಕಿರಣ್ (23), ಜನ್ನಾಪುರದ ಪವನ್‍ ಕುಮಾರ್ (25), ಹೊಸ ಕೋಡಿಹಳ್ಳಿಯ ನವೀನ್ ಕುಮಾರ್ … Read more

ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯದ ಜೊತೆ ಡಿ.ಕೆ.ಶಿವಕುಮಾರ್ ಸಂವಾದ, ಚರ್ಚೆಯಾಗಿದ್ದೇನು? ಡಿಕೆಶಿ ಹೇಳಿದ್ದೇನು?

160721 DK Shivakumar at Shikaripura Lambani Samvada 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 16 ಜುಲೈ 2021 ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿಕಾರಿಪುರದ ಬೇಗೂರು ಮರಡಿ ತಾಂಡಾದಲ್ಲಿ ಲಂಬಾಣಿ ಸಮುದಾಯದವರ ಜೊಎಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಡಿಕೆಶಿ ಏನೇನು ಹೇಳಿದರು? ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿರುವುದರ ವಿರುದ್ಧ ಕೇಂದ್ರ, ರಾಜ್ಯದಲ್ಲಿ ಹೋರಾಟ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವುದಕ್ಕೆ ಕಾಂಗ್ರೆಸ್ … Read more

ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ

Train engine and boggies

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಸಾಗರ ತಾಲೂಕು ಗುಡ್ಡೆಕೌತಿ ಬಳಿ ಮೈಸೂರು – ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿದೆ. ರೈಲ್ವೆ ಪೊಲೀಸರು ವ್ಯಕ್ತಿಯ ಮಾಹಿತಿ ಕಲೆ ಹಾಕಿ, ಆತನ ಸಂಬಂಧಿಕರಿಗೆ ವಿಚಾರ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ನಾಗನೂರು ಬಸವರಾಜ್ (36) ಎಂದು ಗುರುತಿಸಲಾಗಿದೆ. ಸಾಗರದಲ್ಲಿ ಬಿ.ಹೆಚ್.ರಸ್ತೆಯಲ್ಲಿ ಬಸವರಾಜ್‍ ಅವರು ನಂದಿನಿ ಹಾಲಿನ ಬೂತ್ ನಡೆಸುತ್ತಿದ್ದರು. ರೈಲಿಗೆ ಸಿಲುಕಿ ಸಾವನ್ನಪ್ಪಲು ಕಾರಣವೇನು ಎಂಬುದರ ಕುರಿತು … Read more

ಬುಡಮೇಲಾಗಿ ಹಣಗೆರೆ ರಸ್ತೆಗೆ ಬಿದ್ದ ಮರ, ಮೂರು ಗಂಟೆ ವಾಹನ ಸಂಚಾರ ಸ್ಥಗಿತ, ಮರ ತೆರವಿಗೆ ನೆರವಾದರು ಶಾಸಕ

150721 Tree fall at Hanagere Road 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಜುಲೈ 2021 ಮರ ಬಡುಮೇಲಾಗಿ ರಸ್ತೆಗೆ ಬಿದ್ದು ಆಯನೂರಿನಿಂದ ಹಣಗೆರೆ ತೆರಳುವ ಮಾರ್ಗದಲ್ಲಿ ಸುಮಾರು ಮೂರು ಗಂಟೆ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಅದೆ ಮಾರ್ಗವಾಗಿ ಬಂದ ಶಾಸಕ ಹರತಾಳು ಹಾಲಪ್ಪ ಅವರು ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಕರೆ ಮಾಡಿದ ಬಳಿಕ, ರಸ್ತೆ ಸಂಚಾರಕ್ಕೆ ವ್ಯವಸ್ಥೆಯಾಗಿದೆ. ಶಿವಮೊಗ್ಗದಿಂದ ಹಣಗೆರೆ ಮಾರ್ಗವಾಗಿ ತೀರ್ಥಹಳ್ಳಿಗೆ ತೆರಳುವ ರಸ್ತೆಯಲ್ಲಿ ಮರ ಬುಡಮೇಲಾಗಿತ್ತು. ಸಿರಿಗೆರೆ ಗೇಟ್‍ ಸಮೀಪ ಘಟನೆ ಸಂಭವಿಸಿತ್ತು. ಮೂರು ಗಂಟೆ … Read more