ಕರೋನ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ, ಟಾಸ್ಕ್ ಫೋರ್ಸ್ ಸದಸ್ಯನಿಗೆ ಆವಾಜ್

Thirthahalli Name Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 22 JUNE 2021 ಕರೋನ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಲ್ಲದೆ, ಟಾಸ್ಕ್ ಫೋರ್ಸ್‍ ಸದಸ್ಯನಿಗೆ ನಿಂದಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಬಸವಾಪುರ ಗ್ರಾಮದ ಯುವಕ ಮತ್ತು ಆತನ ಕುಟುಂಬದವರಿಗೆ ಕರೋನ ಪಾಸಿಟಿವ್ ಬಂದಿತ್ತು. ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ನಿಯಮ ಉಲ್ಲಂಘಿಸಿದ ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಮನೆಯಲ್ಲಿ ಪಾರ್ಟಿ ಮಾಡಿದ್ದಾನೆ. ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮತ್ತು … Read more

ವಿದ್ಯಾರ್ಥಿಗಳಿಗೆ ವಿತರಿಸಲು ಶಾಲೆಯಲ್ಲಿ ಇರಿಸಿದ್ದ ಯುನಿಫಾರಂ ಬಟ್ಟೆಗೆ ಬೆಂಕಿ

210621 Fire at Maruthipura High School in Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 21 JUNE 2021 ವಿದ್ಯಾರ್ಥಿಗಳಿಗೆ ವಿತರಿಸಲು ಇರಿಸಿದ್ದ ಯುನಿಫಾರಂ ಬಟ್ಟೆಗಳು ಬೆಂಕಿಗೆ ಆಹುತಿಯಾಗಿದೆ. ಶಾಲೆಯ ಕೊಠಡಿಯಲ್ಲಿ ಈ ಸಮವಸ್ತ್ರಗಳನ್ನು ಇರಿಸಲಾಗಿತ್ತು. ಹೊಸನಗರ ತಾಲೂಕು ಮಾರುತಿಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಮುಖ್ಯೋಪಾಧ್ಯಾಯರು ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸುಮಾರು 300 ವಿದ್ಯಾರ್ಥಿಗಳಿಗೆ ವಿತರಿಸಲು ಬಟ್ಟೆಯನ್ನು ಇರಿಸಲಾಗಿತ್ತು. ಬೆಂಕಿ ಹೊತ್ತಿದ್ದರಿಂದ ಬಟ್ಟೆ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಆರೋಪಿಸಿದ್ದಾರೆ. … Read more

ತೀರ್ಥಹಳ್ಳಿಯಲ್ಲಿ ಕಾಡು ಹಂದಿ ದಾಳಿ, ಮಹಿಳೆಗೆ ಗಂಭೀರ ಗಾಯ

Thirthahalli Name Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 21 ಜೂನ್ 2021 ಕಾಡು ಹಂದಿ ದಾಳಿಗೆ ಮಹಿಳೆಯೊಬ್ಬರು ತೀವ್ರ ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಬಂದ್ಯಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಲಲಿತಾ (39) ಕಾಡು ಹಂದಿ ದಾಳಿಗೆ ತುತ್ತಾದ ಮಹಿಳೆ. ಹುಲ್ಲು ಕೊಯ್ದುಕೊಂಡು ಬರಲು ಹೋದಾಗ ಘಟನೆ ಸಂಭವಿಸಿದೆ. ಭಾನುವಾರ ಸಂಜೆ ಹಂದಿ ದಾಳಿ ಮಾಡಿದೆ. ಲಲಿತಾ ಅವರ ಗಂಟಲು ಭಾಗಕ್ಕೆ ತಿವಿದಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿತ್ತು.‌ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಶಿವಮೊಗ್ಗದ … Read more

ಭಾರಿ ಮಳೆಗೆ ನಾಗೋಡಿ ಘಾಟಿಯಲ್ಲಿ ರಸ್ತೆ ಕುಸಿತ, ವಾಹನ ಸಂಚಾರ ಸ್ಥಗಿತ, ಪರ್ಯಾಯ ಮಾರ್ಗ ಯಾವುದು ಗೊತ್ತಾ?

190621 Nagodu Highway Road Blocked due to rain 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 19 JUNE 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮುಂಗಾರು ಮಳೆ ಅಬ್ಬರಕ್ಕೆ ನಾಗೋಡಿ ಘಾಟಿಯಲ್ಲಿ ರಸ್ತೆ ಕುಸಿತ ಉಂಟಾಗಿದೆ. ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನಾಗೋಡಿ ಘಾಟಿಯಲ್ಲಿ ರಸ್ತೆ ಕುಸಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶಿಸಿದ್ದಾರೆ. ಆಗಸ್ಟ್ 30 ಅಥವಾ ರಿಪೇರಿ ಕಾರ್ಯ ಮುಗಿಯುವವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯವಾಗಿ … Read more

ಸಾಗರ ನಗರಸಭೆಯಿಂದ ದಿನಸಿ ಕಿಟ್, ಫೋಟೊಗಳು ಮಿಸ್ಸಿಂಗ್, ತೀವ್ರ ವಿರೋಧ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 19 JUNE 2021 ಸಾಗರ ನಗರಸಭೆ ವಿತರಣೆ ಮಾಡಿರುವ ದಿನಸಿ ಕಿಟ್ ಮೇಲೆ ವಿಧಾನ ಪರಿಷತ್‍ ಸದಸ್ಯರು ಮತ್ತು ಅಧ್ಯಕ್ಷೆಯ ಫೋಟೊ ಕೈಬಿಟ್ಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ನಗರಸಭೆ ವತಿಯಿಂದ ದಿನಸಿ ಕಿಟ್‍ಗಳ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಫೋಟೊಗಳನ್ನು ಪ್ರಕಟಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಐ.ಎನ್‍.ಸುರೇಶ್‍ ಬಾಬು, ವಿಧಾನ … Read more

ಬೆಳಗ್ಗೆ 6 ಗಂಟೆಗೆ ಮದ್ಯದಂಗಡಿ ಓಪನ್, ದೇವಸ್ಥಾನಗಳಿಗೆ ಯಾಕಿಲ್ಲ ಪರ್ಮಿಷನ್, ದೇವರ ದರ್ಶನದ ಅವಕಾಶಕ್ಕೆ ಆಗ್ರಹ

190621 Brahman Parishad Memorandum at Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 19 JUNE 2021 ಸಾಗರ ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ವಿಪ್ರ ವೈದಿಕ ಪರಿಷತ್ ಮತ್ತು ತ್ರಿಮತಸ್ಥ ಬ್ರಾಹ್ಮಣ ಅರ್ಚಕರು, ಪುರೋಹಿತರ ಪರಿಷತ್ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪರಿಷತ್ ಸದಸ್ಯರು, 45 ದಿನದಿಂದ ದೇವಸ್ಥಾನಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈಗ ರಾಜ್ಯದಲ್ಲಿ ಕರೋನ ಸೋಂಕು ಇಳಿಮುಖವಾಗಿದೆ. ದೇವಸ್ಥಾನ ಬಾಗಿಲು ತೆಗೆಯಲು ಅವಕಾಶ ನೀಡಬೇಕು … Read more

ತೀರ್ಥಹಳ್ಳಿ ಕಾಂಗ್ರೆಸ್​​​ನ ಇಂದಿರಾ ಕ್ಯಾಂಟೀನ್​​ಗೆ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಭೇಟಿ

190621 DK Suresh Visit Thirthahalli Indira Canteen 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 19 JUNE 2021 ಮಾಜಿ ಸಚಿವ ಕಿಮ್ಮನೆ ರತ್ನಾಕರ್‍ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ವತಿಯಿಂದ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಮತ್ತು ಸೇವಾ ಸಿಂಧೂ ಯೋಜನೆ ಈಗ ರಾಜ್ಯದ ಕಾಂಗ್ರೆಸ್ ಮುಖಂಡರ ಗಮನ ಸೆಳದಿದೆ. ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಅವರು, ಇವರೆಡೂ ಯೋಜನೆಗಳ ಕುರಿತು ಮಾಹಿತಿ ಪಡೆದರು. ಇಂದಿರಾ ಕ್ಯಾಂಟೀನ್‍ ಮತ್ತು ಸೇವಾ ಸಿಂಧೂ ಯೋಜನೆಯ ನಿರ್ವಹಣೆ ಕುರಿತು … Read more

ಕಂತೆ ಕಂತೆ ನೋಟುಗಳ ಸಹಿತ ಹೊಳೆಹೊನ್ನೂರು ಪೊಲೀಸರಿಗೆ ಸಿಕ್ಕಿಬಿದ್ದ ವಂಚಕ

190621 Holehonnur Police Arrest Lorry Money Theif 1

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 19 JUNE 2021 ಲಾರಿ ಕೊಡಿಸುವುದಾಗಿ ನಂಬಿಸಿ ಕಂತೆ ಕಂತೆ ದುಡ್ಡು ಪಡೆದುಕೊಂಡು ಎಸ್ಕೇಪ್‍ ಆಗಿದ್ದ ಭದ್ರಾವತಿಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಕಂತೆ ಕಂತೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ವೀರಾಪುರದ ರಾಜೇಂದ್ರ (30) ಬಂಧಿತ. ಈತನಿಂದ ಐದು ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಎನಿದು ಪ್ರಕರಣ? ಸೊರಬ ತಾಲೂಕು ಕುಪ್ಪಗಡ್ಡೆ ಗ್ರಾಮದ ಸುರೇಶ್ ಅವರು ಲಾರಿ ಖರೀದಿಗೆ ಮುಂದಾಗಿದ್ದರು. ಆಗ ಪರಿಚಿತನಾದ ರಾಜೇಂದ್ರ, … Read more

ಮೈದುಂಬಿದ ಜೋಗ ಜಲಪಾತ, ಪ್ರವಾಸಿಗರ ಎಂಟ್ರಿ ನಿಷೇಧ, ವೈರಲ್ ವಿಡಿಯೋದ ಅಸಲಿಯತ್ತೇನು?

180621 Jog Falls Sagara 2021 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 JUNE 2021 ಶರಾವತಿ ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಆದರೆ ಕೋವಿಡ್ ಲಾಕ್‍ ಡೌನ್ ಕಾರಣ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ. ಜಲಪಾತದ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ರಾಜ, ರಾಣಿ, ರೋರರ್, ರಾಕೆಟ್‍ ಜಲಪಾತಗಳು ಕಳೆಗಟ್ಟಿವೆ. ಜೋರು ಮಳೆ, ದಟ್ಟ ಇಬ್ಬನಿಯ ನಡುವೆ ಜೋಗದ ವೈಭವ ಕಣ್ತುಂಬಿಕೊಳ್ಳುವುದು ಕಣ್ಣಿಗೆ ಸಡಗರವಾಗಿದೆ. ಸಾರ್ವಜನಿಕರಿಗೆ ಎಂಟ್ರಿ ಇಲ್ಲ ಜೋಗ ಜಲಪಾತ ಕಣ್ತುಂಬಿಕೊಳ್ಳಲು … Read more

ಹೊಸನಗರದಲ್ಲಿ ಮುಂದುವರೆದ ಮಳೆ ಅಬ್ಬರ, ಮಾಣಿ ಡ್ಯಾಂ ಒಳ ಹರಿವು ಭಾರಿ ಹೆಚ್ಚಳ

Maani-Dam-Hosanagara

ಶಿವಮೊಗ್ಗ ಲೈವ್.ಕಾಂ | HOSANAGARA NEWS | 18 JUNE 2021 ಹೊಸನಗರ ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಕಳೆದ 24 ಗಂಟೆ ಅವಧಿಯಲ್ಲಿ ತಾಲೂಕಿನಲ್ಲಿ 292.4 ಮಿ.ಮೀ ಮಳೆಯಾಗಿದೆ. ತಾಲೂಕಿನ ಮಾಣಿ ವ್ಯಾಪ್ತಿಯಲ್ಲಿ 166 ಮಿ.ಮೀ, ಯಡೂರಿನಲ್ಲಿ 203 ಮಿ.ಮೀ, ಹುಲಿಕಲ್‍ನಲ್ಲಿ 176 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 178 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 104 ಮಿ.ಮೀ, ಸಾವೇಹಕ್ಲು ವ್ಯಾಪ್ತಿಯಲ್ಲಿ 82 ಮಿ.ಮೀ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಮಾಣಿ ಡ್ಯಾಂಗೆ 9495 ಕ್ಯೂಸೆಕ್ ಒಳ ಹರಿವು ಇದೆ. ಪಿಕ್‍ … Read more