ಡಿಕೆ ಶಿವಕುಮಾರ್ ಅವರು ಒಂದು ವಾರದೊಳಗೆ ಕ್ಷಮೆಯಾಚಿಸಬೇಕು, ಇಲ್ಲವಾದರೆ ಮಾನನಷ್ಟ ಕೇಸ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಂದು ವಾರದಲ್ಲಿ ಕ್ಷಮೆ ಕೋರಬೇಕು. ಇಲ್ಲವಾದರೆ ಮಾನನಷ್ಟ ಮೊಕದಮೆ ಹೂಡುವುದಾಗಿ ಸಾಗರದ ವಕೀಲ ಪ್ರವೀಣ್‌ ಕುಮಾರ್‌ ಅವರು ತಮ್ಮ ವಕೀಲರ ಮೂಲಕ ನೊಟೀಸ್‌ ಜಾರಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ʼಸೋನಿಯಾ ಗಾಂಧಿ ಅವರ ವಿರುದ್ಧ ತಡಕಲಾಂಡಿಯೊಬ್ಬ ದೂರು ನೀಡಿದರೆ ಪೊಲೀಸರು ಎಫ್‌ಐಆರ್‌ ದಾಖಲಿಸುತ್ತಾರೆ. ಇದನ್ನು ನಾವು ಸುಮ್ಮನೆ ಬಿಡುವುದಿಲ್ಲʼ … Read more

ಕೊಟ್ಟಿಗೆ ಸಮೀಪ ಬಿದ್ದಿದ್ದ ಸೊಪ್ಪು ತಿಂದಿದ್ದ ಮೂರು ಹಸುಗಳು ಸಾವು

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA NEWS | 28 MARCH 2021 ಕಾಡು ಜಾತಿಯ ಸೊಪ್ಪು ತಿಂದು ಮೂರು ಹಸುಗಳು ಮೃತಪಟ್ಟಿವೆ. ಸೊರಬ ತಾಲೂಕು ಹಾಲಗಳಲೆಯಲ್ಲಿ ಘಟನೆ ಸಂಭವಿಸಿದೆ. ಈರಪ್ಪ ಎಂಬುವವರಿಗೆ ಸೇರಿದ ಮೂರು ಹಸುಗಳು ಕೊಟ್ಟಿಗೆ ಸಮೀಪ ತುಂಡಾಗಿ ಬಿದ್ದಿದ್ದ ಬಸರಿ ಮರದ ಸೊಪ್ಪು ತಿಂದಿವೆ. ಕೆಲವೇ ಹೊತ್ತಲ್ಲಿ ಹಸುಗಳು ಅಸ್ವಸ್ಥಗೊಂಡವು. ಪಶುವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಹಸುಗಳು ಮೃತಪಟ್ಟಿವೆ. ಹಸುಗಳನ್ನು ಕಳೆದುಕೊಂಡಿರುವ ಈರಪ್ಪ ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ … Read more

ಚಕ್ರಾ ಹಿನ್ನೀರಿನಲ್ಲಿ ಮುಳುಗಿದ ಪ್ರವಾಸಿಗರು, ಒಬ್ಬ ಸಾವು, ಮತ್ತೊಬ್ಬ ನಾಪತ್ತೆ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 28 MARCH 2021 ಚಕ್ರಾ ಡ್ಯಾಂ ಹಿನ್ನೀರಿನಲ್ಲಿ ಈಜುತ್ತಿದ್ದ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಶೋಧ ಕಾರ್ಯ ನಡೆಯುತ್ತಿದೆ. ವಿಶ್ವೇಶ್ವರ (58) ಮೃತರು. ಹರಿ (58) ಎಂಬುವವರಿಗೆ ಶೋಧ ಕಾರ್ಯ ನಡೆಯುತ್ತಿದೆ. ಶನಿವಾರ ಹಿನ್ನೀರಿನಲ್ಲಿ ಈಜುತ್ತಿದ್ದಾಗ ಘಟನೆ ಸಂಭವಿಸಿದೆ. ದೇವಸ್ಥಾನಕ್ಕೆ ಹೋಗಿದ್ದರು ಬೆಂಗಳೂರಿನ ಬಸವನಗುಡಿಯಿಂದ ನಾಲ್ವರು ಮಹಿಳೆಯರು ಸೇರಿ 16 ಮಂದಿ ಪ್ರವಾಸಕ್ಕೆ ಬಂದಿದ್ದರು. ಚಕ್ರಾನಗರ ಅರಣ್ಯ ಪ್ರದೇಶದಲ್ಲಿರುವ ಮತ್ತೂರು ಶ್ರೀ ವನದುರ್ಗಾ ಪರಮೇಶ್ವರಿ … Read more

ಕಾಳೇನಹಳ್ಳಿ ಶಿವಯೋಗಾಶ್ರಮದ ನೂತನ ಗುರುಗಳ ಪಟ್ಟಾಧಿಕಾರ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 27 MARCH 2021 ಕಾಳೇನಹಳ್ಳಿಯ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ. ಲಿಂಗೈಕ್ಯರಾದ ರೇವಣಸಿದ್ಧ ಮಹಾಸ್ವಾಮಿ ಅವರ ಪ್ರಥಮ ಪುಣ್ಯ ಸ್ಮರಣೆ ಮತ್ತು ನೂತನ ಗುರುಗಳಾದ ಶ್ರೀ.ಮ.ನಿ.ಪ್ರ ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಪಟ್ಟಾಧಿಕಾರ ಸಮಾರಂಭ, ಮಠದ ಆವರಣದಲ್ಲಿ ನಡೆಯಿತು. ತಿಪ್ಪಾಯಿಕೊಪ್ಪ ಶ್ರೀ ಮ.ನಿ.ಪ್ರ.ವಿರೂಪಾಕ್ಷ ಮಹಾಸ್ವಾಮೀಜಿ ಅವರು ಶ್ರೀ ಮ.ನಿ.ಪ್ರ. ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ತಿಪ್ಪಾಯಿಕೊಪ್ಪ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮೀಜಿ ಅವರು, ಲಿಂಗೈಕ್ಯರಾದ ಶ್ರೀ ಮ.ನಿ.ಪ್ರ.ರೇವಣಸಿದ್ಧ … Read more

ಮಂಡಗದ್ದೆ ಹೋಬಳಿಯಲ್ಲಿ ಕಲ್ಲು, ಮಣ್ಣು ಮಿಶ್ರಿತ ಗೋಧಿ ವಿತರಣೆ, ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 27 MARCH 2021 ನ್ಯಾಯಬೆಲೆ ಅಂಗಡಿಯಲ್ಲಿ  ಕಲ್ಲು, ಮಣ್ಣು ಮಿಶ್ರಿತ ಗೋಧಿ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಕಲಬೆರಕೆ ಗೋಧಿಯನ್ನು ತಾಲೂಕು ಕಚೇರಿಯಲ್ಲಿರುವ ಆಹಾರ ವಿಭಾಗದ ಶಿರಸ್ತೇದಾರ್‌ ಅವರಿಗೆ ಪ್ರದರ್ಶಿಸಿ ಕ್ರಮಕ್ಕೆ ಆಗ್ರಹಿಸಿದರು. ಮಂಡಗದ್ದೆ ಹೋಬಳಿ ಸಿಂಗನಬಿದಿರೆ ನ್ಯಾಯಬೆಲೆ ಅಂಗಡಿಯಲ್ಲಿ ಕಲಬೆರಕೆ ಗೋಧಿ ವಿತರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಟಿ.ಟಿ.ತಿಮ್ಮಪ್ಪ  ಆರೋಪಿಸಿದ್ದಾರೆ. ತಾಲೂಕು ಪಂಚಾಯಿತಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಕಾಶ್‌ ಅವರಿಗೂ … Read more

ಹೊಸಗುಂದದಲ್ಲಿ ದೇವಸ್ಥಾನದ ಗರ್ಭಗುಡಿ ಮುಂದಿದ್ದ ಹಿತ್ತಾಳೆ ಘಂಟೆಗಳು ಕದ್ದೊಯ್ದ ಕಳ್ಳರು

Sagara Rural Police Station

ಶಿವಮೊಗ್ಗ ಲೈವ್.ಕಾಂ | SAGARA NEWS | 27 MARCH 2021 ದೇವಸ್ಥಾನವೊಂದರ ಗರ್ಭಗುಡಿಯ ಮುಂದೆ ಇದ್ದ ಹಿತ್ತಾಳೆ ಘಂಟೆಗಳ ಕಳ್ಳತನವಾಗಿದೆ. ಬೈಕ್‌ನಲ್ಲಿ ಬಂದಿದ್ದ ಮೂವರು ಘಂಟೆ ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಶಂಕೆ ಇದ್ದು, ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ಹೊಸಗುಂದ ಗ್ರಾಮದ ಕಂಚಿಕಾಳಮ್ಮ ದೇವಸ್ಥಾನದಲ್ಲಿ ಘಂಟೆಗಳು ಕಳುವಾಗಿದೆ. ಇವುಗಳ ಮೌಲ್ಯ ಸುಮಾರು 12 ಸಾವಿರ ಎಂದು ಅಂದಾಜಿಸಲಾಗಿದೆ. ಮಾರ್ಚ್‌ 24ರಂದು ಸಂಜೆ ಬೈಕ್‌ನಲ್ಲಿ ಬಂದಿದ್ದ ಮೂವರು ಘಂಟೆಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಗ್ರಾಮಸ್ಥರು … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಮದ್ಯ ಮಾರಾಟ ನಿಷೇಧ, ಯಾವಾಗ ನಿಷೇಧ? ಕಾರಣವೇನು?

200520 Shimoga DC KB Shivakumar 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 27 MARCH 2021 ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲು ಐದು ಕಿ.ಮೀ ವ್ಯಾಪ್ತಿಯಲ್ಲಿ, ಮಾರ್ಚ್ 28ರ ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 29ರ ಮಧ್ಯ ರಾತ್ರಿ 12 ಗಂಟೆವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು, ಭದ್ರಾವತಿ ನಗರ ಮತ್ತು ಸುತ್ತಮುತ್ತಲ ಐದು ಕಿ.ಮೀ ವ್ಯಾಪ್ತಿಯಲ್ಲಿ ಮಾರ್ಚ್ 27ರ ಬೆಳಗ್ಗೆ 6 ಗಂಟೆಯಿಂದ … Read more

ಭದ್ರಾವತಿ ರಂಗಪ್ಪ ಸರ್ಕಲ್‌ನಲ್ಲಿ ಸಿ.ಎಂ.ಇಬ್ರಾಹಿಂ ಫೋಟೊಗೆ ಚಪ್ಪಲಿ ಹಾರ, ಬೆಂಕಿ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 27 MARCH 2021 ಶ್ರೀರಾಮನ ಬಗ್ಗೆ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಅವಹೇಳನಕಾರಿ ಹೇಳಿ ನೀಡಿರುವುದನ್ನು ಭಜರಂಗದಳ ಕಾರ್ಯಕರ್ತರು ಖಂಡಿಸಿದ್ದಾರೆ. ಭದ್ರಾವತಿಯಲ್ಲಿ ಸಿ.ಎಂ.ಇಬ್ರಾಹಿಂ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾವತಿಯ ರಂಗಪ್ಪ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರು, ಸಿ.ಎಂ.ಇಬ್ರಾಹಿಂ ವಿರುದ್ಧ ಘೋಷಣೆ ಕೂಗಿದರು. ಇತ್ತೀಚೆಗೆ ಸಿ.ಎಂ.ಇಬ್ರಾಹಿಂ ಅವರು ಜೈ ಸಿಡಿ ರಾಮ್ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ಅಸಂಖ್ಯಾತ ಹಿಂದೂಗಳ ಮನಸಿಗೆ ನೋವುಂಟು ಮಾಡಿದೆ. ಸಿ.ಎಂ. … Read more

ನಾಟಿ ಔಷಧಕ್ಕಾಗಿ ಆನಂದಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ನಾಟಿ ಔಷಧ ವಿತರಣೆ ಸ್ಥಗಿತಗೊಳಿಸಿದ ಕ್ರಮ ಖಂಡಿಸಿ ಔಷಧ ಪಡೆಯಲು ಬಂದಿದ್ದ ರೋಗಿಗಳು ಮತ್ತು ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು. ಆನಂದಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದರು. ಇದನ್ನೂ ಓದಿ | ನರಸೀಪುರದ ನಾಟಿ ಔಷಧ ವಿತರಣೆ ತಾತ್ಕಾಲಿಕ ಮುಂದೂಡಿಕೆ, ಕಾರಣವೇನು? ಮತ್ತೆ ಯಾವಾಗ ಶುರುವಾಗುತ್ತೆ? ಆನಂದಪುರ ಸಮೀಪ ಶಿವಗಂಗೆಯಲ್ಲಿ ನಾಟಿ ಔಷಧ ವಿತರಣೆ ಮಾಡಲಾಗುತ್ತಿದೆ. ನರಸೀಪುರದ ನಾರಾಯಣಮೂರ್ತಿ ಅವರ ಕುಟುಂಬದವರು ಔಷಧ ವಿತರಿಸುತ್ತಿದ್ದಾರೆ. ಗುರುವಾರ … Read more

ಔಷಧ ಇಲ್ಲ ಅಂದಿದ್ದಕ್ಕೆ ಕಾರ್ಗಲ್‌ನಲ್ಲಿ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ಔಷಧ ಇಲ್ಲ ಎಂದು ಹೇಳಿದ್ದಕ್ಕೆ ಮೆಡಿಕಲ್‌ ಶಾಪ್‌ ಮಾಲೀಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಸ್ಥಳೀಯರೆ ಅತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಕಾರ್ಗಲ್‌ ಮುಖ್ಯ ಪಟ್ಟಣ ಬೀದಿಯಲ್ಲಿನ ಲಕ್ಷ್ಮೀ ಮೆಡಿಕಲ್‌ ಶಾಪ್‌ ಮಾಲೀಕ ರಾಹುಲ್‌ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದ ತೇಜಸ್‌ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್‌ ಶಾಪ್‌ಗೆ ಬಂದ ತೇಜಸ್‌ ಕೆಲವು ಔಷಧಗಳನ್ನು ಖರೀದಿಸಲು ಕೇಳಿದ್ದಾನೆ. ಈ … Read more