ಭದ್ರಾವತಿ ಜನ್ನಾಪುರದಲ್ಲಿ ದೇವಸ್ಥಾನದ ಬಳಿಯೇ ಮದ್ಯದ ಅಂಗಡಿ, ತೆರವಿಗೆ ಒತ್ತಾಯ

211120 Bhadravathi Liquor Shop Protest Press Meet 1

ಶಿವಮೊಗ್ಗ ಲೈವ್.ಕಾಂ |SHIMOGA / BHADRAVATHI NEWS | 21 NOVEMBER 2020 ಭದ್ರಾವತಿಯ ಜನ್ನಾಪುರದಲ್ಲಿ ದೇವಸ್ಥಾನದ ಸಮೀಪದಲ್ಲಿ ಮದ್ಯದ ಅಂಗಡಿ ನಡೆಸಲಾಗುತ್ತಿದೆ. ಅದನ್ನ ಬಂದ್ ಮಾಡಿಸಬೇಕು ಎಂದು ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಜನ್ನಾಪುರದ ಅಂತರಘಟ್ಟಮ್ಮ ದೇವಸ್ಥಾನವಿದೆ. ಅದರ ಸಮೀಪದಲ್ಲೇ ಮದ್ಯದ ಅಂಗಡಿ ಇದೆ. ಇಲ್ಲಿ ಮದ್ಯ ಮಾರಾಟಕ್ಕಷ್ಟೆ ಅವಕಾಶವಿದೆ. ಆದರೆ ಅಲ್ಲಿಯೇ ಕುಳಿತು ಕುಡಿಯುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. … Read more

ಬಿಹಾರದಿಂದ ಮನೆ ಬಿಟ್ಟು ಸಾಗರಕ್ಕೆ ಬಂದ ಯುವಕ, ಮತ್ತೆ ಪೋಷಕರನ್ನು ಸೇರಲು ನೆರವಾದ ಕರ್ಕಿಕೊಪ್ಪ ಆಟೋ ಚಾಲಕ

211120 Bihar Youth Re Unites with Family in Shimoga 1

ಶಿವಮೊಗ್ಗ ಲೈವ್.ಕಾಂ |SAGARA / SHIMOGA NEWS | 21 NOVEMBER 2020 ಜಾರ್ಖಂಡ್ ರಾಜ್ಯದ ರಾಂಚಿಯಿಂದ ಮನೆ ಬಿಟ್ಟು ಬಂದು ಸಾಗರದ ಸುತ್ತಮುತ್ತ ಅಲೆದಾಡುತ್ತಿದ್ದ ಯುವಕ ಪುನಃ ಕುಟುಂಬ ಸೇರಿದ್ದಾನೆ. ಒಂದು ತಿಂಗಳ ಬಳಿಕ ಯುವಕ ಮನೆಯವರನ್ನು ಸೇರಲು ನೆರವಾದ ಸಾಗರದ ಆಟೋ ಚಾಲಕನಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಶಂಸೆ ಪತ್ರ ನೀಡಿದೆ. ಬಿಹಾರದಿಂದ ಬಂದಿದ್ದ ಯುವಕ ಶಾಶ್ವತ್ ಕುಮಾರ್ (24) ಎಂಬಾತ ಬಿಹಾರದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದ. ಅಲ್ಲಿ ಗಲಾಟೆ ಮಾಡಿಕೊಂಡು ಮನೆ … Read more

ಮುಡುಬ ಸೇತುವೆ ಬಳಿ ಅಪಘಾತ, ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ, ಜನರ ಆಕ್ರೋಶ

211120 Bike Accident Near Battemallappa Hosanagara 1

ಶಿವಮೊಗ್ಗ ಲೈವ್.ಕಾಂ |HOSANAGARA NEWS | 21 NOVEMBER 2020 ಹೊಸನಗರ – ಬಟ್ಟೆಮಲ್ಲಪ್ಪ ಮಾರ್ಗದ ಮುಡುಬ ಸೇತುವೆ ಬಳಿ ಅಪಘಾತ ಸಂಭವಿಸಿದ್ದು, ಓರ್ವ ಸವಾರ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಗಾಯ್ತು ಘಟನೆ? ಬೈಕ್ ಸವಾರರು ಹಾವೇರಿಯಿಂದ ಹೆಬ್ರಿಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ. ಮುಡುಬ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗುಂಡಿಗೆ ಬಿದ್ದಿದೆ. ಘಟನೆಯಲ್ಲಿ ಹಾವೇರಿಯ ರೆಹಮಾನ್ ಸಾಬ್ (22) ಮೃತಪಟ್ಟಿದ್ದಾರೆ. ಅನ್ವರ್ ಬಾಷಾ … Read more

ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗ ಲೈವ್.ಕಾಂ |SORABA NEWS | 21 NOVEMBER 2020 ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ. ಹೇಗಾಯ್ತು ಘಟನೆ? ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಚೌಟಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇಬ್ಬರು ಮಕ್ಕಳ ಜೊತೆಗೆ ಬಟ್ಟೆ ಒಗೆಯಲು ತೆರಳಿದ್ದಾಗ ಅವಘಡವಾಗಿದೆ. ವಿದ್ಯಾ (32), ಮಕ್ಕಳಾದ ನಯನಾ (3), ಕನ್ನಿಕಾ (5) ಮೃತ ದುರ್ದೈವಿಗಳು. ಆಟ ಆಡುತ್ತ ಮಕ್ಕಳು ಕೆರೆಗೆ ಬಿದ್ದಿದ್ದಾರೆ. ಅವರ … Read more

ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ

Haratalu-Halappa

ಶಿವಮೊಗ್ಗ ಲೈವ್.ಕಾಂ |SHIMOGA NEWS | 19 NOVEMBER 2020 ಮರಾಠ ಅಭಿವೃದ್ಧಿ ಪ್ರಾಧಿಕಾರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ಬಳಿಕ ಹಲವು ಸಮುದಾಯಗಳು ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಡ ಹೇರುತ್ತಿವೆ. ಇವತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಆರ್ಯ ಈಡಿಗ ಅಭಿವೃದ್ದಿ ನಿಗಮ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಹಾಲಪ್ಪ ಅವರ ಮನವಿಯಲ್ಲಿ ಏನಿದೆ? 26 ಉಪ ಪಂಗಡಗಳನ್ನು ಹೊಂದಿರುವ ಆರ್ಯ ಈಡಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. … Read more

ಸಾಗರದಲ್ಲಿ ಕಾರು, ಬೈಕ್ ಡಿಕ್ಕಿ, ಸ್ಥಳದಲ್ಲೇ ಯುವತಿ ಸಾವು

ಶಿವಮೊಗ್ಗ ಲೈವ್.ಕಾಂ | SAGARA NEWS | 19 ನವೆಂಬರ್ 2020 ಕಾರು, ಬೈಕ್ ನಡುವೆ ಡಿಕ್ಕಿಯಾಗಿ ಯುವತಿಯೊಬ್ಬಳು ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ.ಸಾಗರ ತಾಲೂಕಿನ ಶಿರೂರು ಆಲಳ್ಳಿ ಬಳಿ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಉಷಾ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಉಷಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ, ಸಾಗರದಲ್ಲಿ ಪ್ರತಿಭಟನೆ, ಮನವಿ

191120 Sagara Kasapa Against Marata Board 1

ಶಿವಮೊಗ್ಗ ಲೈವ್.ಕಾಂ |SAGARA NEWS | 19 NOVEMBER 2020 ಕರ್ನಾಟಕದಲ್ಲಿ ಕನ್ನಡ ಭಾಷೆ ಹೊರತುಪಡಿಸಿ ಇತರೆ ಯಾವುದೆ ಪ್ರಧಿಕಾರವನ್ನು ರಚಿಸುವುದು ಬೇಡ ಎಂದು ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಉಳಿದ ಭಾಷಿಕರ ಪ್ರಾಧಿಕಾರ ರಚನೆಯಿಂದ ಕನ್ನಡ ಭಾಷೆ ಬೆಳವಣಿಗೆ ಕುಂಠಿತವಾಗಲಿದೆ. ಆದ್ದರಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಮರಾಠ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಎಂದು ಬದಲಾಯಿಸಬೇಕು. ಆಯಾ ಪ್ರದೇಶದ ಅಭಿವೃದ್ಧಿ ಮಾಡಬೇಕು ಎಂದು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಒತ್ತಾಯಿಸಿದರು. … Read more

ಜಾತಿಗೊಂದು ಪ್ರಾಧಿಕಾರ, ಇದು ಮತ ಖರೀದಿಯ ವ್ಯವಹಾರ, ಬಿಜೆಪಿ ವಿರುದ್ಧ ಮಾಜಿ ಮಿನಿಸ್ಟರ್ ಆಕ್ರೋಶ

250620 Kimmane Rathnakar in Press meet 1

ಶಿವಮೊಗ್ಗ ಲೈವ್.ಕಾಂ |HOSANAGARA NEWS | 19 NOVEMBER 2020 ಜಾತಿಗೊಂದು ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತಿರುವುದು ಬಿಜೆಪಿಯ ಚುನಾವಣಾ ಗಿಮಿಕ್. ಇದು ಪರೋಕ್ಷವಾಗಿ ಮತ ಖರೀದಿಯ ವ್ಯವಹಾರವಾಗಿದೆ ಎಂದು ಮಾಜಿ ಸಚಿವ ಕಿಮ್ಮೆನೆ ರತ್ನಾಕರ್ ಆರೋಪಿಸಿದರು. ಹೊಸನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಮುಂಬರುವ ಲೋಕಸಭೆ ಮತ್ತು ಎರಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು, ಅಭಿವೃದ್ಧಿ ಪ್ರಧಿಕಾರ ರಚಿಸಲಾಗಿದೆ. ಬಹು ಸಂಖ್ಯಾತ ಸಮುದಾಯಗಳಿಗೆ ತುರ್ತಾಗಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ ಎಂದು ಆರೋಪಿಸಿದರು. ಬಿಜೆಪಿಯವರಿಗೆ ಅಭಿವೃದ್ಧಿ ಆಧಾರದಲ್ಲಿ ಮತ … Read more

ತೀರ್ಥಹಳ್ಳಿಯ ಮೂರು ಮದ್ಯದಂಗಡಿಗಳ ಮೇಲೆ ದಿಢೀರ್ ದಾಳಿ

191120 Abakari Raid In Thirthahalli Capt Ajith Kumar 1

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 19 NOVEMBER 2020 ನಿಗದಿಗಿಂತಲೂ ಅಧಿಕ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ದೂರುಗಳ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ಮದ್ಯದಂಗಡಿಗಳ ಮೇಲೆ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಎಂಆರ್‍ಪಿ ದರಕ್ಕಿಂತಲೂ ಅಧಿಕ ಮೊತ್ತಕ್ಕೆ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಉಪ ವಿಭಾಗದಲ್ಲಿ ಮೂರು ಮದ್ಯದ ಅಂಗಡಿಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು. ಅಧಿಕ ದರ ಪಡೆಯುತ್ತಿದ್ದ ಕುರಿತು ಮೂರು … Read more

ವಿಐಎಸ್ಎಲ್ ನಿವೃತ್ತ ಕಾರ್ಮಿಕರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

VISL Bhadravathi 1

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 19 NOVEMBER 2020 ಮನೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ವಿಐಎಸ್‍ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಸಹಿ ಸಂಗ್ರಹ ನಡೆಯುತ್ತಿದೆ. ಪತ್ರ ಬರೆಯಲು ಕಾರಣವೇನು? ವಿಐಎಸ್‍ಎಲ್ ವಸತಿಗೃಹಗಳಲ್ಲಿ ಲೀಸ್‍ ಆಧಾರದಲ್ಲಿ ವಾಸವಿರುವ ನಿವೃತ್ತ ಕಾರ್ಮಿಕರು ತಾವಿರುವ ಮನೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರೆ ಬರೆಯತ್ತಿದ್ದಾರೆ. ವಿಐಎಸ್ಎಲ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ. ಹಾಗಾಗಿ ವಸತಿಗೃಹಗಳನ್ನು ಖಾಲಿ ಮಾಡಿಸಲು ಕಿರುಕುಳ … Read more